ಯಾದಗಿರಿ: ದಲಿತ ಕುಟುಂಬಗಳಿಗೆ ವಸತಿ ಹಾಗೂ ನಿವೇಶನ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರು ಶಾಸಕರ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಯಾದಗಿರಿ ವಿಧಾನಸಭಾ ಮತಕ್ಷೇತ್ರದ ಯಕ್ಷಿಂತಿ, ಅನವಾರ, ಹಯ್ಯಾಳ (ಕೆ), ಬೊಮ್ಮನಹಳ್ಳಿ, ಮಾಲಹಳ್ಳಿ, ಐಕೂರ, ಟಿ. ವಡಗೇರಾ, ತುಮಕೂರು ಸೇರಿದಂತೆ ಇತರೆ ಗ್ರಾಮಗಳ ದಲಿತ ಕುಟುಂಬಗಳು ದಶಕಗಳಿಂದ ನಿವೇಶನ, ವಸತಿ ಸೌಲಭ್ಯವಿಲ್ಲದೆ ಕಷ್ಟಕರ ಜೀವನ ನಡೆಸುತ್ತಿದ್ದಾರೆ ಎಂದರು.

ಕೃಷ್ಣ ನದಿ ತೀರದ ಯಕ್ಷಿಂತಿ ಗ್ರಾಮದ ದಲಿತ ಕುಟುಂಬಗಳಿಗೆ ನಿವೇಶನ, ವಸತಿ ಇಲ್ಲದೆ ಪ್ರವಾಹಕ್ಕೆ ತುತ್ತಾಗುತ್ತಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತವು ನೀಡಿದ್ದ ಸೌಲಭ್ಯಗಳ ಭರವಸೆಯನ್ನು ಇನ್ನೂ ನೀಡಿಲ್ಲ. ಶಾಸಕರು ವಿವಿಧ ವಸತಿ ಯೋಜನೆಗಳಡಿ ವಸತಿ ನೀಡಬೇಕು ಎಂದು ಕೋರಿದ್ದಾರೆ.

ಯಕ್ಷಿಂತಿ ಗ್ರಾಮಕ್ಕೆ ನಿವೇಶನ, ವಸತಿ ಸೌಲಭ್ಯ ಕಲ್ಪಿಸಿ, ಅಂಬೇಡ್ಕರ್ ಭವನ ಮಂಜೂರು ಮಾಡಬೇಕು. ಗ್ರಾಮದ ರೈತರ ಜಮೀನುಗಳಿಗೆ ಹೋಗಲು ರಸ್ತೆ ಸುಧಾರಣೆ ಮಾಡಿಸಬೇಕು. ಜಮೀನುಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಹಾಗೂ ಪೈಪ್ಲೈನ್ ಮೂಲಕ ರೈತರ ಜಮೀನುಗಳಿಗೆ ನೀರು ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.

ಹತ್ತಿಗೂಡೂರ ಗ್ರಾಮದಲ್ಲಿ 25 ಎಕರೆ ಜಮೀನಿನ ಭೂ ಮಾಲೀಕರು ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ನೀಡಲು ಒಪ್ಪಿಗೆ ಕೊಟ್ಟು ನಾಲ್ಕು ವರ್ಷಗಳಾಗಿವೆ. ಆದರೆ, ಭೂ ಒಡೆತನದ ಯೋಜನೆಯಡಿ ಸರ್ಕಾರದ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂಬ ನೆಪ ಹೇಳಿ ಜಿಲ್ಲಾಧಿಕಾರಿ ಭೂಮಿ ಹಂಚಿಕೆ ಸಭೆ ಮಾಡುತ್ತಿಲ್ಲ. ಶಾಸಕರು ಜಿಲ್ಲಾಡಳಿತ ಮತ್ತು ಸರ್ಕಾರದ ಜೊತೆ ಚರ್ಚಿಸಿ ಭೂಮಿ ಹಂಚಿಕೆ ಮಾಡಬೇಕು ಎಂದು ಕೋರಿದ್ದಾರೆ.

ಪ್ರತಿಭಟನೆಯಲ್ಲಿ ಮುಖಂಡರಾದ ಹತ್ತಿಗೂಡೂರು ಶರಣರೆಡ್ಡಿ, ನಿಂಗಣ್ಣ ಕರೆಡಿ, ಸಿದ್ದಣ್ಣ ಹೊಸಮನಿ, ಶರಣಪ್ಪ ಚಲುವಾದಿ, ದೇವಪ್ಪ ಅನಸೂರ, ಮರೆಮ್ಮ ಹೊಸಮನಿ, ಮಾಳಮ್ಮ ಹತ್ತಿಗೂಡೂರು, ಶಿವಮ್ಮ ಹತ್ತಿಗೂಡೂರು, ಮಹಾಲಕ್ಷ್ಮಿ, ಮಲ್ಲಮ್ಮ, ಲಕ್ಷ್ಮಿ ಸೇಇ ಇತರರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-30-998562182

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.