ಯಾದಗಿರಿ: ನಗರದ ದಾಸಬಾಳಧೀಶ್ವರ ಮಠದಲ್ಲಿ ಏಪ್ರಿಲ್ 2ರಂದು ಜಾತ್ರಾ ಮಹೋತ್ಸವ ಮತ್ತು ಪಂಚತನಾರತಿ ಉತ್ಸವ ಹಾಗೂ ಧಾರ್ಮಿಕ ಸಭೆ ನಡೆಯಲಿದೆ ಎಂದು ಮಠದ ವಕ್ತಾರ ಸೋಮನಗೌಡ ಬೆಳಗೇರಿ ಹೇಳಿದ್ದಾರೆ.

ರುಕ್ಮಾಪುರದ ಗುರುಶಾಂತ್ ಮೂರ್ತಿ ಸ್ವಾಮೀಜಿ, ದಾಸಬಾಳಧೀಶ್ವರ ಮಠದ ವೀರೇಶ್ವರ ಸ್ವಾಮೀಜಿ, ಶಹಾಪುರ ಚರಬಸವೇಶ್ವರ ಗದ್ದುಗೆಯ ಬಸವಾರ್ಯ ಶರಣರು, ಗುರುಸುಣಗಿಯ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಶರಣಗೌಡ ಕಂದಕೂರ ಅವರು ಜ್ಯೋತಿ ಬೆಳಗಿಸುವರು. ಇಬ್ರಾಹಿಂಪುರ ಸಾಯಿ ಬಾಬಾ ದೇವಸ್ಥಾನದ ಅಧ್ಯಕ್ಷ ಮಹಾರಾಜ ದಿಗ್ಗಿ, ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಮಹೇಶರೆಡ್ಡಿ ಮುದ್ನಾಳ, ಬಿಜೆಪಿ ಮುಖಂಡರಾದ ರಾಚನಗೌಡ ಮುದ್ನಾಳ, ನಾಗರತ್ನ ಕುಪ್ಪಿ, ಕಾಂಗ್ರೆಸ್ ಮುಖಂಡ ಶರಣಪ್ಪ ಮಾನೇಗಾರ ಪಾಲ್ಗೊಳ್ಳುವರು ಎಂದಿದ್ದಾರೆ.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೈಸೂರಿನ ಸಹಾಯಕ ಆಯುಕ್ತ ಆಶಪ್ಪ ಭೀಮಪ್ಪ ಪೂಜಾರಿ, ಸಂದೀಪ್ ಬಸವರಾಜ, ನಿವೇದಿತಾ ಬಾವಿಮನೆ, ಬಸವರಾಜ ಜವಳಿ, ಚಂದ್ರಶೇಖರ್ ಮಾನಸಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-30-852832994

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.