ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಪಡಿತರ ಚೀಟಿಯಲ್ಲಿ ಜೋಳ ವಿತರಣೆ

ಇದೇ ತಿಂಗಳಿಂದ ವಿತರಣೆ, ಜಿಲ್ಲೆಯಲ್ಲಿವೆ 400 ನ್ಯಾಯಬೆಲೆ ಅಂಗಡಿಗಳು
Last Updated 9 ಮೇ 2022, 16:08 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ 400 ನ್ಯಾಯಬೆಲೆ ಅಂಗಡಿಗಳ ಮೂಲಕ ಸರ್ಕಾರ ಇದೇ ಮೇ ತಿಂಗಳಿಂದ ಜೋಳ ವಿತರಣೆ ಮಾಡಲಿದೆ.

ಜಿಲ್ಲೆಯಲ್ಲಿ ಅಂತ್ಯೋದಯ ಅನ್ನ ಯೋಜನೆ (ಎಎವೈ) 29,519 ಪಡಿತರ ಚೀಟಿಗಳಿವೆ. ಪ್ರತಿ ಪಡಿತರ ಚೀಟಿಗಳಿಗೆ 20 ಕೆಜಿ ಅಕ್ಕಿ ಮತ್ತು 15 ಕೆಜಿ ಜೋಳ ವಿತರಿಸಲಾಗುತ್ತದೆ. ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) 8,38,904 ಪಡಿತರ ಸದಸ್ಯರಿದ್ದಾರೆ. ಪ್ರತಿ ಪಡಿತರ ಸದಸ್ಯರಿಗೆ 3ಕೆಜಿ ಅಕ್ಕಿ ಹಾಗೂ 2 ಕೆಜಿ ಜೋಳ ಉಚಿತವಾಗಿ ವಿತರಿಸಲಾಗುತ್ತಿದೆ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಜಿಲ್ಲೆಯಲ್ಲಿ ಎಎವೈ 1,14,957 ಪಡಿತರ ಸದಸ್ಯರಿದ್ದಾರೆ. ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಹಾಗೂ ಬಿಪಿಎಲ್ 8,38,904 ಪಡಿತರ ಪ್ರತಿ ಸದಸ್ಯರಿಗೆ 5ಕೆಜಿ ಅಕ್ಕಿ ಉಚಿತವಾಗಿ ವಿತರಿಸಲಾಗುತ್ತದೆ.

ರಾಜ್ಯ ಸರ್ಕಾರದ ಯೋಜನೆಯಡಿ ಬಿಪಿಎಲ್‌ ಕುಟುಂಬಕ್ಕೆ 3 ಕೆಜಿ ಅಕ್ಕಿ, 2 ಕೆಜಿ ಜೋಳ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಯೋಜನೆಯಡಿ ಅಂತ್ಯೋದಯ ಕಾರ್ಡ್‌ಗೆ 15 ಕೆಜಿ ಜೋಳ, 20 ಕೆಜಿ ಅಕ್ಕಿ ನೀಡಲಾಗುತ್ತಿದೆ.

ಗೋಧಿ ಬದಲು ಜೋಳ:ಕಲ್ಯಾಣ ಕರ್ನಾಟಕ ಭಾಗದಲ್ಲಿ ಆಹಾರದಲ್ಲಿ ರೊಟ್ಟಿಯನ್ನು ಬಳಸುವುದರಿಂದ ಜೋಳ ವಿತರಣೆ ಮಾಡಬೇಕು ಎಂದು ಆಗ್ರಹ ಇತ್ತು. ಹೀಗಾಗಿ ಸರ್ಕಾರ ಈ ತಿಂಗಳಿಂದಲೇ ಗೋದಿಗೆ ಬದಲಾಗಿ ಜೋಳವನ್ನು ವಿತರಿಸಲಾಗುತ್ತಿದೆ. ಮೈಸೂರು ಭಾಗದಲ್ಲಿ ರಾಗಿ ವಿತರಿಸಲಾಗುತ್ತಿದೆ. ಕಾರ್ಡ್‌ನಲ್ಲಿ ಹೆಸರು ಇರುವ ಎಲ್ಲರಿಗೂ ಪಡಿತರ ವಿತರಣೆ ಮಾಡಲಾಗುತ್ತಿದೆ.

ಶಹಾಪುರ ತಾಲ್ಲೂಕಿನಲ್ಲಿ ಬಿಪಿಎಲ್‌ ಕಾರ್ಡ್‌ದಾರರು 2,62,322, ಸುರಪುರ ತಾಲ್ಲೂಕಿನಲ್ಲಿ 2,76,648, ಯಾದಗಿರಿ ತಾಲ್ಲೂಕಿನಲ್ಲಿ 2,99,934 ಸೇರಿದಂತೆ 8,38,904 ಕಾರ್ಡ್‌ದಾರರು ಇದ್ದಾರೆ.ಶಹಾಪುರ ತಾಲ್ಲೂಕಿನಲ್ಲಿ 69,334, ಸುರಪುರತಾಲ್ಲೂಕಿನಲ್ಲಿ 82,648, ಯಾದಗಿರಿತಾಲ್ಲೂಕಿನಲ್ಲಿ 80,266 ಕಾರ್ಡ್‌ಗಳಿವೆ.

ಆದರಂತೆ ಅಂತ್ಯೋದಯ ಅನ್ನ ಯೋಜನೆಯಡಿ ಶಹಾಪುರ ತಾಲ್ಲೂಕಿನಲ್ಲಿ 8,651, ಸುರಪುರ ತಾಲ್ಲೂಕಿನಲ್ಲಿ 10,471, ಯಾದಗಿರಿ ತಾಲ್ಲೂಕಿನಲ್ಲಿ 10,397 ಕಾರ್ಡ್‌ಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT