ಯಾದಗಿರಿ: ಜಿಲ್ಲೆಯ ಎರಡು ಪ್ರತ್ಯೇಕ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಂಭವಿಸಿದ ಎರಡು ಅಪಘಾತದ ಪ್ರಕರಣಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಗುರುಮಠಕಲ್ ಪಟ್ಟಣದ ಮುಖ್ಯ ರಸ್ತೆಯಲ್ಲಿ ಆಟೊ ಡಿಕ್ಕಿಯಿಂದಾಗಿ ಪಟ್ಟಣದ ನಿವಾಸಿ ಮಹಮದ್ ಗೌಸ್ ಮೃತಪಟ್ಟಿದ್ದಾರೆ. ಆಟೊ ಚಾಲಕ ಕೃಷ್ಣ ಚಂದ್ರಯ್ಯ ವಿರುದ್ದ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೌಸ್ ಅವರು ಎಸ್ಬಿಐ ಕ್ರಾಸ್ ಸಮೀಪ ಮುಖ್ಯ ರಸ್ತೆಯನ್ನು ದಾಟಿಕೊಂಡು ಹೋಗುತ್ತಿದ್ದರು. ವೇಗವಾಗಿ ಆಟೊ ಚಲಾಯಿಸಿಕೊಂಡ ಬಂದ ಕೃಷ್ಣ ಡಿಕ್ಕಿಹೊಡೆದರು. ಗೌಸ್ ಅವರ ತಲೆಗೆ ಗಂಭೀರ ಗಾಯವಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿಕಿತ್ಸೆಗೆ ಸ್ಪಂದಿಸದೆ ಸಾವು: ಯಾದಗಿರಿ–ಚಿತ್ತಾಪುರ ರಸ್ತೆಯಲ್ಲಿ ಸಂಭವಿಸಿದ್ದ ಆಟೊ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಂದಳ್ಳಿ ನಿವಸಿ ಯಮನಪ್ಪ ಮೈಲಾರಪ್ಪ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಆಟೊ ಚಾಲಕ ಕೃಷ್ಣ ಗಂಗಾಧರ ವಿರುದ್ಧ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅರಕೇರಾ (ಬಿ) ಗ್ರಾಮದಲ್ಲಿನ ಸಂಬಂಧಿಕರ ಮನೆಯ ಶುಭ ಕಾರ್ಯವನ್ನು ಮುಗಿಸಿಕೊಂಡ ಯಮನಪ್ಪ ಅವರು ಸ್ವಗ್ರಾಮಕ್ಕೆ ಆಟೊದಲ್ಲಿ ವಾಪಸ್ ಆಗುತ್ತಿದ್ದರು. ಕಂಚಗಾರ ಹಳ್ಳಿ ಸಮೀಪದ ರಸ್ತೆಯಲ್ಲಿ ಚಾಲಕ ಆಟೊ ವೇಗವಾಗಿ ಓಡಿಸುತ್ತಿದ್ದ. ಎದರಿಗೆ ದನಗಳು ಬಂದಿದ್ದರಿಂದ ನಿಯಂತ್ರಣ ಮಾಡಲು ಆಗದೆ ಬ್ರೇಕ್ ಹಾಕಿ ಏಕಾಏಕಿ ಕಟ್ ಮಾಡಿದ್ದರಿಂದ ಆಟೊ ಪಲ್ಟಿಯಾಗಿ ಬಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆಟೊದಲ್ಲಿ ಎಡಗಡೆ ಕುಳಿತಿದ್ದ ಯಮನಪ್ಪ ಅವರ ತಲೆ, ಎದೆ, ಸೊಂಟ, ಬೆರಳುಗಳಿಗೆ ಗಾಯಗಳಾಗಿದ್ದವು. ಎಡಗಾಲಿನ ತೊಡೆಗೆ ತೀವ್ರ ಪೆಟ್ಟಾಗಿತ್ತು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-30-1254956453

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.