ಯಾದಗಿರಿ: ಬೇಸಿಗೆಯ ತೀವ್ರತೆ ಕಳೆದು ಪೂರ್ವ ಮುಂಗಾರು ಮಳೆಯಾಗುತ್ತಿದ್ದರೂ ಕೆಲವು ಗ್ರಾಮ, ವಾರ್ಡ್ಗಳ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಇಂದಿಗೂ ಮರೀಚಿಕೆಯಾಗಿ ಉಳಿದಿದೆ. ಮತ್ತೊಂದು ಕಡೆ, ಕೊಳವೆಗಳಲ್ಲಿನ ನೀರು ಪೋಲಾಗಿ ಚರಂಡಿ ಸೇರುತ್ತಿದ್ದರೂ ಸ್ಥಳೀಯ ಅಧಿಕಾರಿಗಳು ವ್ಯರ್ಥ ತಡೆಗೆ ಕಿವಿಗೊಡದೆ ಕಣ್ಮುಚ್ಚಿ ಕುಳಿತ ನಿದರ್ಶನಗಳೂ ಇವೆ.

ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿ ಪ್ರವಾಹ ಬಂದಿದ್ದರೂ ಕೆಲವೆಡೆಯ ಜನರಿಗೆ ಕುಡಿಯುವ ನೀರಿನ ಬವಣೆ ತಪ್ಪಲಿಲ್ಲ. ಅಧಿಕಾರಿಗಳು ನೀರು ಪೂರೈಸದೆ ಇದ್ದಾಗ ಜನರು ತಾವೇ ಬೇರೆಡೆಯಿಂದ ನೀರು ತಂದು ತಮ್ಮ ದಾಹವನ್ನು ತಣಿಸಿಕೊಳ್ಳುತ್ತಿದ್ದಾರೆ. ಸ್ಥಳೀಯವಾಗಿಯೇ ಶುದ್ಧ ಕುಡಿಯುವ ನೀರು ಕೊಡುವಂತೆ ಯರಗೋಳ ಪಿಡಿಒ ಕಚೇರಿಗೆ ಅಲೆದು ಸುಸ್ತಾದ ಗ್ರಾಮದ ಪದ್ಮಾವತಿ ಅಂತಹವರು ಬಿಂದಿಗೆ ಹೊತ್ತು ಬೇರೊಂದು ಬಡಾವಣೆಗೆ ತೆರಳಿದರು. ಆದರೂ ಮನೆ ಸಮೀಪವೇ ಶುದ್ಧ ನೀರು ಬರುತ್ತಿಲ್ಲ.

ತಾಲ್ಲೂಕಿನ ಹತ್ತಿಕುಣಿ ಗ್ರಾಮದ ವಾಲ್ಮೀಕ ಮೂರ್ತಿ ಹಿಂಭಾಗದಲ್ಲಿ ವಾರ್ಡ್ ಸಂಖ್ಯೆ 2 ಮತ್ತು 3ಕ್ಕೆ ಸರಬರಾಜು ಮಾಡುವ ಕಬ್ಬಿಣದ ಪೈಪ್ ಒಡೆದು ಒಂದು ತಿಂಗಳಾಗಿದೆ. ಸಂಜೆ 7ರಿಂದ ಬೆಳಿಗ್ಗೆ 5ರ ನೀರು ವ್ಯರ್ಥವಾಗಿ ಚರಂಡಿ ಸೇರುತ್ತಿದ್ದರೂ ಪಂಚಾಯಿತಿಯವರು ದುರಸ್ತಿ ಮಾಡುತ್ತಿಲ್ಲ. ಹತ್ತಿಕುಣಿ ಪಕ್ಕದಲ್ಲೇ ಇರುವ ಕಟಗಿ ಶಹಾಪುರ ಗ್ರಾಮದಲ್ಲಿ ನೀರಿಗಾಗಿ ಪರದಾಡುವಂತೆ ಆಗಿದೆ. ಕೆರೆಯೂ ಬತ್ತಿದ್ದು, ಜಾನುವಾರುಗಳಿಗೂ ನೀರಲ್ಲದಂತೆ ಆಗಿದೆ. ಆದರೆ, ಹತ್ತಿಕುಣಿಯಲ್ಲಿ ಒಂದು ತಿಂಗಳಿಂದ ನೀರು ಪೋಲಾಗುವುದು ನಿಲ್ಲುತ್ತಿಲ್ಲ.

ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಮೈಲಾಪುರದ ಯಾತ್ರಿ ನಿವಾಸದ ಹಿಂಬದಿಯ ಜೆಜೆಎಂ ಕೊಳವೆ ಒಡೆದು ಶುದ್ಧ ನೀರು ಚರಂಡಿ ಸೇರುತ್ತಿದೆ. ಪಂಚಾಯಿತಿ ಅಧಿಕಾರಿಗಳು ತಮಗೆ ಸಂಬಂಧವೇ ಇಲ್ಲ ಎಂಬಂತೆ ಇದ್ದಾರೆ. ಯಾದಗಿರಿ– ಮೈಲಾಪುರ ಮಾರ್ಗ ನಡುವಿನ ವರ್ಕನಳ್ಳಿ ತಾಂಡಾದಲ್ಲಿ ₹15 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿ, ಉದ್ಘಾಟಿಸಿ ಆರೇಳು ತಿಂಗಳು ಕಳೆದಿದೆ. ಕೆಲ ತಿಂಗಳ ಹಿಂದೆ ಘಟಕದ ಒಳಗಿನ ನೀರು ಸಂಗ್ರಹ ಟ್ಯಾಂಕ್ಗೆ ಹಾನಿಯಾಗಿ ನೀರು ಕೊಡುವುದನ್ನೇ ನಿಲ್ಲಿಸಿದೆ. ತಾಂಡಾ ನಿವಾಸಿಗಳು ದೂರದಿಂದ ನೀರು ತಂದು ಕುಡಿಯುತ್ತಿದ್ದಾರೆ.

ನೀರಿಗಾಗಿ ಪರದಾಟ: ಸುರಪುರ ತಾಲ್ಲೂಕಿನ ವಾಗಣಗೇರಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಪರದಾಡುವಂತೆ ಆಗಿದೆ. ಜೆಜೆಎಂ ಕಾಮಗಾರಿ ವಿಫಲವಾಗಿದ್ದು, ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ. ಪಂಚಾಯಿತಿ ಕಚೇರಿ ಮುಂಭಾಗದಲ್ಲಿನ ನೀರಿನ ಟ್ಯಾಂಕ್ ಮುಂದೆ ಜನರು ಕೊಡಗಳನ್ನು ಹಿಡಿದುಕೊಂಡು ನಿಲ್ಲುವಂತೆ ಆಗಿದೆ ಎನ್ನುತ್ತಾರೆ ಸ್ಥಳೀಯರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-30-1330129219

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.