ಯಾದಗಿರಿ: ಇಲ್ಲಿನ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ (ಡಿಡಿಪಿಐ) ಕಚೇರಿಯಲ್ಲಿ ಬುಧವಾರ ನಡೆದ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಹುದ್ದೆ ಬಡ್ತಿಯ ಕೌನ್ಸೆಲಿಂಗ್ ಪ್ರಕ್ರಿಯೆಯು ಗೊಂದಲ ಮತ್ತು ಆಕ್ಷೇಪದ ನಡುವೆ ಮುಕ್ತಾಯವಾಗಿದೆ. ಕೌನ್ಸೆಲಿಂಗ್ನಲ್ಲಿ ಭರ್ತಿಯಾಗದೆ ಬಾಕಿ ಉಳಿದಿರುವ ಹುದ್ದೆಗಳಿಗೆ ಮತ್ತೊಂದು ಸುತ್ತಿನ ಪ್ರಕ್ರಿಯೆಯೂ ನಡೆಯಲಿದೆ.

ಜಿಲ್ಲೆ ವ್ಯಾಪ್ತಿಯ ಪ್ರಾಥಮಿಕ ಶಾಲಾ ಶಿಕ್ಷಕರ ಕನ್ನಡ ಮತ್ತು ಉರ್ದು ಮಾಧ್ಯಮ ವೃಂದದ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ 218 ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ನಡೆಸಲಾಯಿತು. ಈ ಬಗ್ಗೆ ಕೆಲವು ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದು, ನಿಗದಿಯಾಗಿರುವ ದಿನಾಂಕವನ್ನು ಮುಂದೂಡಿ ಮತ್ತೊಮ್ಮೆ ನಡೆಸುವಂತೆ ಆಗ್ರಹಿಸಿದ್ದರು.

218 ಮುಂಬಡ್ತಿ ಹುದ್ದೆಗಳಲ್ಲಿ 200 ಕನ್ನಡ ಹಾಗೂ 18 ಉರ್ದು ಮಾಧ್ಯಮ ಶಾಲೆಗಳಿಗೆ ನಿಗದಿ ಮಾಡಲಾಗಿತ್ತು. ಪ್ರತಿ ಹುದ್ದೆಗೆ 1:1 ಅನುಪಾತದಲ್ಲಿ ಕೌನ್ಸಿಲಿಂಗ್ ಕರೆಯಲಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವು ಶಿಕ್ಷಕರು, ‘ಜೇಷ್ಠತೆಯ ಪಟ್ಟಿಯಲ್ಲಿನ ಆಸಕ್ತಿ ಇಲ್ಲದವರು, ತಮಗೆ ಬಯಸಿದ ಸ್ಥಳ ಸಿಗದವರು, ಆರೋಗ್ಯದಂತಹ ಇತರೆ ಕಾರಣಗಳಿಗೆ ಮುಖ್ಯಶಿಕ್ಷಕ ಹುದ್ದೆಯನ್ನು ತಿರಸ್ಕರಿಸುತ್ತಾರೆ. ಇದರಿಂದ ಖಾಲಿ ಉಳಿಯುವ ಸ್ಥಾನಗಳಿಗೆ ಅರ್ಹರಿಗೆ ಅವಕಾಶ ಸಿಗದೆ ವಂಚಿತರಾಗುತ್ತಾರೆ. ಹೀಗಾಗಿ, ಪ್ರತಿ ಹುದ್ದೆಗೆ 1:2 ಅನುಪಾತದಲ್ಲಿ ಕೌನ್ಸಿಲಿಂಗ್ ನಡೆಸಬೇಕು. ಇದರಿಂದ ಆಸಕ್ತರಿಗೆ ಅವಕಾಶ ಕೊಟ್ಟಂತೆ ಆಗುತ್ತದೆ’ ಎಂದು ಒತ್ತಾಯಿಸಿ ಕಚೇರಿ ಆವರಣ, ಕಚೇರಿ ಒಳಗಡೆ ಶಿಕ್ಷಕರು ಜಮಾಯಿಸಿದ್ದರು.

‘ಇಲಾಖೆಯ ನಿಯಮಗಳ ಅನುಸಾರವೇ ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ಕೌನ್ಸಿಲಿಂಗ್ ಕೊನೆಯ ದಿನದ ಬಗ್ಗೆ ಮುಂಚಿತವಾಗಿ ತಿಳಿಸಲಾಗಿತ್ತು. ಈಗ ಏಕಾಏಕಿ ದಿನಾಂಕ ಮುಂದೂಡಲು ಬರುವುದಿಲ್ಲ. ಜೇಷ್ಠತಾ ಪಟ್ಟಿಯ ಅನ್ವಯ ಕೌನ್ಸಿಲಿಂಗ್ ನಡೆಸುತ್ತೇವೆ’ ಎಂದ ಅಧಿಕಾರಿಗಳು, ಆಕ್ಷೇಪದ ನಡುವೆ ಕೌನ್ಸೆಲಿಂಗ್ ಪ್ರಕ್ರಿಯೆ ಮುಗಿಸಿದರು.

ಕೌನ್ಸೆಲಿಂಗ್ಗೆ ಚುನಾವಣೆ ಅಡ್ಡ ತರಬೇಡಿ: ಡಿಡಿಪಿಐ ಕಚೇರಿಯಲ್ಲಿ ಜಮಾಯಿಸಿದ ಶಿಕ್ಷಕರು, ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದರು. 1:2 ಅನುಪಾತದಲ್ಲಿ ಕೌನ್ಸೆಲಿಂಗ್ ಕರೆಯುವಂತೆ ಒಬ್ಬರು ಧ್ವನಿ ಎತ್ತಿದ್ದರೆ, ಮತ್ತೊಬ್ಬರು ಶಿಕ್ಷಕರಿಗೆ ಸರಿಯಾಗಿ ಮಾಹಿತಿ ನೀಡದೆ ದಿನಾಂಕ ನಿಗದಿಪಡಿಸಲಾಗಿದೆ ಎಂದು ದೂರಿದರು.

ಶಿಕ್ಷಕರ ಸಂಘದ ಚುನಾವಣೆ ಮುಗಿದ ನಂತರ ನಡೆಸುವಂತೆ ಮಗದೊಬ್ಬರು ಒತ್ತಾಯಿಸಿದರು. ಇದಕ್ಕೆ ಆಕ್ಷೇಪಿಸಿದ ಶಿಕ್ಷಕರೊಬ್ಬರು, ‘ಕೌನ್ಸೆಲಿಂಗ್ಗೆ ಚುನಾವಣೆಯನ್ನು ಅಡ್ಡ ತರಬೇಡಿ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-30-1781007933

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.