ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ‘ಸರಿಯಾದ ಮಾಹಿತಿ ತಿಳಿದು ಕೃಷಿ ಮಾಡಿ’

ಕುರಕುಂದ; ಶೇಂಗಾ ಬೆಳೆ ಕ್ಷೇತ್ರೋತ್ಸವ
Last Updated 5 ಫೆಬ್ರುವರಿ 2023, 5:45 IST
ಅಕ್ಷರ ಗಾತ್ರ

ಯಾದಗಿರಿ: ರೈತರು ಬೆಳೆಯ ಬಗ್ಗೆ ಅಧಿಕಾರಿಗಳಿಂದ ಸರಿಯಾದ ಮಾಹಿತಿ ತಿಳಿದುಕೊಂಡು ಕೃಷಿಯಲ್ಲಿ ಮುಂದುವರಿಯಬೇಕು ಎಂದು ದೋರನಹಳ್ಳಿ ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಭಾರತಿ ಹೇಳಿದರು.

ವಡಗೇರಾ ತಾಲ್ಲೂಕಿನ ಕುರಕುಂದ ಗ್ರಾಮದಲ್ಲಿ ಕಲಿಕೆ ಟಾಟಾ ಟ್ರಸ್ಟ್ ವತಿಯಿಂದ ಕಲಿಕೆ ಜೀವನೋಪಾಯ ಕಾರ್ಯಕ್ರಮ ಹಾಗೂ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರ ದೋರನಹಳ್ಳಿ ಸಹಯೋಗದಲ್ಲಿ ಹಿಂಗಾರು ಹಂಗಾಮಿನ ಶೇಂಗಾ ಬೆಳೆಯ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.

ನಂತರ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಹಾಗೂ ಸಿರಿಧಾನ್ಯ ಬೆಳೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ಬೇಸಾಯ ತಜ್ಞ ಅಶೋಕ ಬಿರಾದಾರ ಹಿಂಗಾರು ಹಂಗಾಮಿನ ಶೇಂಗಾ ಬೆಳೆಯ ಸುಧಾರಿತ ಬೇಸಾಯ ಕ್ರಮಗಳನ್ನು ಸಹ ವಿಸ್ತಾರವಾಗಿ ರೈತರಿಗೆ ಮಾಹಿತಿ ನೀಡಿದರು.

ನಂತರ ಕುರಕುಂದ ಗ್ರಾಮದ ಪ್ರಗತಿ ಪರ ರೈತ ಬೀರಲಿಂಗಪ್ಪ ಅವರ ಶೇಂಗಾ ಬೆಳೆಯನ್ನು ಎಲ್ಲಾ ವೀಕ್ಷಣೆ ಮಾಡಿದರು.

ಕುರಕುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ, ಗ್ರಾಮ ಪಂಚಾಯಿಯಿತಿ ಉಪಾಧ್ಯಕ್ಷೆ ಬಸಣ್ಣಗೌಡ ಪದ್ದಿ, ಗ್ರಾ.ಪಂ ಮಾಜಿ ಅಧ್ಯಕ್ಷ ನರಸಿಂಹ ಜೋಶಿ, ಸಾಬಣ್ಣ, ಶಾಂತಗೌಡ ಬಿರಾದಾರ, ಶ್ರೀಕಾಂತ, ಸಂಪನ್ಮೂಲ ವ್ಯಕ್ತಿ ಕುಮಾರ್ ಎಸ್‌ ತುಮಕೂರು, ಬೀರಲಿಂಗಪ್ಪ ಪೂಜಾರಿ, ಶಿವರಾಜ, ಮಹಾಂತೇಶ, ಹಣಮಂತ ಹಾಗೂ ಪ್ರಗತಿಪರ ರೈತರಾದ ನಿಂಗಪ್ಪ ಕುರಿ,ಮಲ್ಲಿಕಾರ್ಜುನ ಜೋಶಿ, ಭೀಮಾಶಂಕರ್, ದೇವು, ಸಾಬರೆಡ್ಡಿ ಮತ್ತು ವಡಗೇರಾ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ರೈತರು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT