ಸುರಪುರ: ಮುಂಗಾರು ಹಂಗಾಮಿಗೆ ಸಮರ್ಪಕ ಬಿತ್ತನೆ ಬೀಜ, ಗೊಬ್ಬರ ಪೂರೈಸಬೇಕು. ಅಕ್ರಮ ಮಾರಾಟಗಾರರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಮಂಗಳವಾರ ಕೃಷಿ ಇಲಾಖೆಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಸಮಿತಿ ಅಧ್ಯಕ್ಷ ಧರ್ಮಣ್ಣ ದೊರೆ ಮಾತನಾಡಿ, ‘ಬಿತ್ತನೆ ಬೀಜ, ರಸಗೊಬ್ಬರಗಳ ಸಮರ್ಪಕ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು. ಮಾರಾಟಗಾರರು ಹೆಚ್ಚಿನ ದರದಲ್ಲಿ ಮಾರಾಟ ಮಾಡದಂತೆ ತಾಕೀತು ಮಾಡಬೇಕು. ಮೂಲ ರಸೀದಿ ನೀಡುವಂತೆ ಸೂಚಿಸಬೇಕು’ ಎಂದು ಆಗ್ರಹಿಸಿದರು.

‘ಪ್ರತಿ ವರ್ಷ ಕಳಪೆ ಬಿತ್ತನೆ ಬೀಜ, ರಸಗೊಬ್ಬರದ ಹಾವಳಿ ಇದ್ದೇ ಇರುತ್ತದೆ. ಅಂತಹ ಮಾರಾಟಗಾರರ ಪರವಾನಗಿ ಕಾಯಂ ಆಗಿ ರದ್ದುಪಡಿಸಬೇಕು. ಅವರ ಮೇಲೆ ಕಠಿಣ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು.

‘ಕೃಷಿ ಸಲಕರಣೆಗಳು, ನೀರಾವರಿ ಪೈಪ್ಗಳು, ತಾಡಪಾಲ್ ಇತರ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತಂದು ಶೀಘ್ರದಲ್ಲಿ ರಿಯಾಯತಿ ದರಲ್ಲಿ ರೈತರಿಗೆ ಪೂರೈಸಬೇಕು’ ಎಂದು ಹೇಳಿದರು.

‘ಮಾರಾಟಗಾರರು ಲಿಂಕ್ ನೆಪದಲ್ಲಿ ರಸಗೊಬ್ಬರದ ಜೊತೆಗೆ ಇನ್ನೊಂದು ಗೊಬ್ಬರ ತೆಗೆದುಕೊಳ್ಳುವಂತೆ ಒತ್ತಡ ಹಾಕದಂತೆ ನೋಡಿಕೊಳ್ಳಬೇಕು. ರೈತರಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಬೇಕು’ ಎಂದು ಒತ್ತಾಯಿಸಿದರು.

ಸಹಾಯಕ ಕೃಷಿ ನಿರ್ದೇಶಕ ರಾಮನಗೌಡ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಮಲ್ಲನಗೌಡ ಮಾಲಿಪಾಟೀಲ, ವೆಂಕೋಬ ಮಾಲಿಪಾಟೀಲ, ರಾಮಯ್ಯ ಆಲ್ದಾಳ, ರಫೀಕ ಸುರಪುರ, ಮಲ್ಲಣ್ಣ ದೊರಿ, ಸಿದ್ದು ಯಕ್ತಾಪುರ, ಹುಲಗಪ್ಪ ಕವಡಿಮಟ್ಟಿ, ದೇವು ಕವಡಿಮಟ್ಟಿ, ತಿಮ್ಮಣ್ಣ, ಯಲ್ಲಪ್ಪ ಬಾದ್ಯಾಪುರ, ಭೀಮರಾಯ ಬಾದ್ಯಾಪುರ, ವಿಶ್ವನಾಥ ಹೊಸಮನಿ, ಚಂದ್ರಾಮಗೌಡ ಇತರರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-30-1563823618

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.