ಕಕ್ಕೇರಾ: ಪಟ್ಟಣ ಸಮೀಪದ ಅಂಬಾನಗರ ಜಾನಪದ ಕಲಾವಿದರಾಗಿದ್ದ ಜೆಟ್ಟೆಪ್ಪ ಯಲಗಟ್ಟಿ(40) ಶನಿವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು.

ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಶನಿವಾರ ಸಂಜೆ ಅವರ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ಜರುಗಿತು.

ಜೆಟ್ಟೆಪ್ಪ ಅವರು ಬೀರಲಿಂಗೇಶ್ವರ ಡೊಳ್ಳಿನ ಕಲಾ ತಂಡವನ್ನು ಕಟ್ಟಿಕೊಂಡು ರಾಜ್ಯ, ಹೊರ ರಾಜ್ಯಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ಅಲ್ಲದೆ, 2011ರಲ್ಲಿ ವಿಶ್ವವಿಖ್ಯಾತ ಮೈಸೂರ ದಸರಾ ಉತ್ಸವದಲ್ಲಿ ಯಾದಗಿರಿ ಜಿಲ್ಲಾಡಳಿತದಿಂದ ಭಾಗವಹಿಸಿ ಅತ್ಯುತ್ತಮ ಡೊಳ್ಳಿನ ಕಲಾ ತಂಡ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದರು.

ಮಾಜಿ ಸಚಿವ ರಾಜುಗೌಡ, ಶಾಸಕ ರಾಜಾ ವೇಣುಗೋಪಾಲನಾಯಕ, ಹಣಮಂತರಾಯ ಜಹಾಗೀರದಾರ್, ಪ್ರಕಾಶ ಕನ್ನಳ್ಳಿ, ವೀರಸಂಗಪ್ಪ ಕೊಡೇಕಲ್, ಗುಂಡಪ್ಪ ಸೊಲಾಪೂರ, ಪರಮಣ್ಣ ಕಮತಗಿ, ಬಸವರಾಜ ಆರೇಶಂಕರ, ರಾಜು ಹವಾಲ್ದಾರ, ಜೆಟ್ಟೆಪ್ಪ ದಳಾರ, ಸಣ್ಣಅಯ್ಯಾಳಪ್ಪ ಬಡಿಗೇರ, ನಿಂಗಪ್ಪ ನಾಯ್ಕ್ ಸೇರಿದಂತೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-30-1512640281

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.