ಯಾದಗಿರಿ: ‘ಜಗತ್ತಿಗೆ ಸತ್ಯ, ಶಾಂತಿ, ಅಹಿಂಸೆ, ಕರುಣೆ, ಪ್ರೀತಿ, ಮಮತೆಯನ್ನು ಬೋಧಿಸಿದ ಗೌತಮ ಬುದ್ಧ ಜಗತ್ತಿನ ಬೆಳಕು’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಬಣ್ಣಿಸಿದರು.

ಇಲ್ಲಿನ ಲುಂಬಿನಿ ಉದ್ಯಾನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಭಗವಾನ ಗೌತಮ ಬುದ್ಧರ ಜಯಂತ್ಯುತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಗೌತಮ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಜ್ಞೆ, ಕರುಣೆ ಮತ್ತು ಸಮತೆಯ ತತ್ವಗಳನ್ನು ಬೋಧಿಸಿದ ಆಧ್ಯಾತ್ಮಿಕ ಜಗತ್ತಿನ ಮಹಾನ್ ಸಾಧಕ ಗೌತಮ ಬುದ್ಧ. ಬುದ್ಧನ ದಿವ್ಯ ವ್ಯಕ್ತಿತ್ವವನ್ನು ಎಷ್ಟು ಬಣ್ಣಿಸಿದರೂ ಸಾಲದು. ಬುದ್ಧ ಮೊಗೆದಷ್ಟು ಖಾಲಿಯಾಗದ ಕಡಲು; ಕತ್ತಲಿನಲ್ಲಿ ಬೆಳದಿಂಗಳ ಕೋಲಾಗಿ ಕೈ ಹಿಡಿದು ನಡೆಸುವ ಚೈತನ್ಯ’ ಎಂದರು.

‘ಜಗತ್ತಿನ ಧರ್ಮಗಳಲ್ಲಿ ಅತಿ ತಾರ್ಕಿಕವಾದ ಮತ್ತು ವಿಜ್ಞಾನದ ತಳಹದಿಯ ಮೇಲೆ ಗಟ್ಟಿಯಾಗಿರುವುದು ಬೌದ್ಧ ಧರ್ಮ. ಭಿನ್ನತೆಗಳನ್ನು ಗೌರವಿಸಿ, ಇರುವುದರಲ್ಲಿ ಹಂಚಿ ತಿನ್ನುವುದನ್ನು ಹೇಳುತ್ತದೆ. ಅನ್ಯರ ಕುರಿತು ಅಸಹ್ಯ ಪಡದೆ, ಒಳಗೊಳ್ಳುವಿಕೆಯನ್ನು ಪ್ರತಿಪಾದಿಸುತ್ತದೆ’ ಎಂದು ಹೇಳಿದರು.

‘ಬುದ್ಧ ಪೂರ್ಣಿಮೆ ಜಾಗತಿಕ ಬೌದ್ಧ ಸಮುದಾಯಕ್ಕೆ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕವಾಗಿ ಮಹತ್ವದ ದಿನ. ಭಾರತ, ನೇಪಾಳ, ಭೂತಾನ, ಶ್ರೀಲಂಕಾ, ಟಿಬೆಟ್, ಚೀನಾ, ಕೊರಿಯಾ, ಲಾವೋಸ್, ವಿಯೆಟ್ನಾಂ, ಥೈಲ್ಯಾಂಡ್, ಟಿಬೆಟ್ ಸೇರಿದಂತೆ ಪೂರ್ವ ಏಷ್ಯಾ ಮತ್ತು ದಕ್ಷಿಣ ಏಷ್ಯಾದಲ್ಲಿ ಆಚರಿಸಲಾಗುತ್ತದೆ’ ಎಂದರು.

ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಮಾತನಾಡಿ, ‘ಬುದ್ಧನ ತತ್ವ ಮತ್ತು ವಿಚಾರಗಳು ಭಾರತ ಮಾತ್ರವಲ್ಲದೆ ಇಡೀ ವಿಶ್ವದ ಮೇಲೆ ಪ್ರಭಾವ ಬೀರಿವೆ. ನಮ್ಮ ನಾಗರಿಕತೆ ಮತ್ತು ಸಂಸ್ಕೃತಿ ರೂಪಿಸುವಲ್ಲಿ ಬುದ್ಧನ ಸಿದ್ಧಾಂತಗಳ ಕೊಡುಗೆ ಅಪಾರವಾಗಿದೆ. ಜಾತಿ ವ್ಯವಸ್ಥೆಯನ್ನು ಮೊದಲ ಬಾರಿಗೆ ಟೀಕಿಸಿದ್ದು ಭಗವಾನ್ ಬುದ್ಧ. ಯುಪಿಎಸ್ಸಿ ಸಂದರ್ಶನದಲ್ಲಿಯೂ ಜಾತಿ ವ್ಯವಸ್ಥೆಯ ಬಗ್ಗೆ ಮೊದಲು ವೈಜ್ಞಾನಿಕವಾಗಿ ವಿಶ್ಲೇಷಣೆ ನಡೆಸಿದ್ದಾರೆ ಯಾರು ಎಂಬುದಕ್ಕೆ ಬುದ್ಧನೇ ಸರಿಯಾದ ಉತ್ತರವಾಗಿತ್ತು’ ಎಂದು ಹೇಳಿದರು.

‘ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಬುದ್ಧ ಧರ್ಮವನ್ನು ಸ್ವೀಕರಿಸಿದ ನಂತರ ಬೌದ್ಧ ಧರ್ಮಕ್ಕೆ ಮತ್ತೊಂದು ಹೊಸ ಆಯಾಮ ಮತ್ತು ಸ್ಪೂರ್ತಿ ಸಿಕ್ಕಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದಿಂದ ಬಹಳಷ್ಟು ಜನರು ದೀಕ್ಷಾ ಭೂಮಿಗೆ ಭೇಟಿ ನೀಡುತ್ತಿರುತ್ತಾರೆ’ ಎಂದರು.

ಸಾಹಿತಿ ರವೀಂದ್ರನಾಥ ಹೊಸಮನಿ ಅವರು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ‘ಯುಡಾ’ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ, ಎಸ್ಪಿ ಪೃಥ್ವಿಕ್ ಶಂಕರ್, ಬೌದ್ಧ ಬಿಕ್ಕು ಭಂತೇಜಿ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಬಾಬುರಾವ್ ಭೂತಾಳೆ ಉಪಸ್ಥಿತರಿದ್ದರು.

ಮಂಜುನಾಥ ಗುರುಸಣಗಿ ಸ್ವಾಗತಿಸಿ, ಮರೆಪ್ಪ ಚಟ್ಟರಕರ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ ವಂದಿಸಿದರು.

ಕಕ್ಕೇರಾ: ‘ಜೀವನದಲ್ಲಿ ನೊಂದವರ ಬಾಳಿನಲ್ಲಿ ಬೆಳಕಾಗಿ, ಸಮಾಜದಲ್ಲಿ ತುಡಿತಕ್ಕೊಳಗಾದವರ ಬಾಳಿನಲ್ಲಿ ಬೆಳಕಾಗಿ ಬಂದ ಮಹಾ ಸಂತ ಗೌತಮ ಬುದ್ಧ’ ಎಂದು ಪುರಸಭೆ ಅಧ್ಯಕ್ಷ ಪರಮಣ್ಣ ಕಮತಗಿ ಹೇಳಿದರು.

ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಗೌತಮ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ದ್ವೇಷ, ಅಸೂಯೆಗಳನ್ನು ನಿರ್ನಾಮ ಮಾಡಿ, ಸಮಾಜದಲ್ಲಿ ಪ್ರೀತಿಯ ಚಿಲುಮೆಯನ್ನು ಅರಳಿಸಿದ ರತ್ನ’ ಎಂದು ಹೇಳಿದರು.

ಉಪಾಧ್ಯಕ್ಷ ಜಟ್ಟೆಪ್ಪ ದಳಾರ್, ಪರಮಣ್ಣ ತೇರಿನ್, ಶರಣು ಸೋಲಾಪುರ, ಚಿದಾನಂದ ಕಮತಗಿ, ಲಕ್ಕಪ್ಪ ಮೇಲಾ, ಅಮರೇಶ ದೊರೆ, ನಿಂಗಪ್ಪ ಚಲುವಾದಿ, ಗುಡದಪ್ಪ ಬಿಳೇಭಾವಿ, ಬಸಪ್ಪ ಕಟ್ಟಿಮನಿ, ಆನಂದ ಭೋಯಿ, ದೇವು ಎಂಟಮನಿ, ಸಂಗಣ್ಣ ಹಡಗಲ್, ಗಯ್ಯಪ್ಪ ಚನ್ನಪಟ್ಟಣ, ಬಸವರಾಜ ಹೊಸ್ಮನಿ, ಚಂದ್ರು ನಡಿಗೇರಿ, ನಾಗರಾಜ, ಅಂಬರೇಶ, ಭೀಮಣ್ಣ, ವೀರೇಶ, ತಮ್ಮಣ್ಣ ಪೂಜಾರಿ, ಬಸವರಾಜದೊಡ್ಮನಿ, ಮಲ್ಲಪ್ಪ, ಭಂಡಾರಿ ಸೇರಿದಂತೆ ಅನೇಕರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-30-761875082

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.