ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಜಿಲ್ಲೆಯಾದ್ಯಂತ ಉತ್ತಮ ಮಳೆ

ಬೀರನೂರನಲ್ಲಿ ಅತ್ಯಧಿಕ 118 ಮಿ.ಮೀ ಮಳೆ ದಾಖಲು
Last Updated 11 ಅಕ್ಟೋಬರ್ 2020, 16:56 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಮತ್ತು ಭಾನುವಾರ ಉತ್ತಮ ಮಳೆಯಾಗಿದೆ. ಸುರಪುರ ತಾಲ್ಲೂಕಿನಲ್ಲಿ ಅಧಿಕ ಮಳೆಯಾಗಿದ್ದು, ಮನೆ, ಹೊಲಗದ್ದೆಗಳಿಗೆ ನೀರು ನುಗ್ಗಿದೆ. ಶಹಾಪುರ ತಾಲ್ಲೂಕಿನ ಬೀರನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತ್ಯಧಿಕ 118 ಮಿ.ಮೀ ಮಳೆ ದಾಖಲಾಗಿದೆ.

ಗ್ರಾಮಾಂತರ ಭಾಗದಲ್ಲಿ ಮಳೆಯಿಂದ ಅಸ್ತವ್ಯಸ್ತವಾಗಿದ್ದು, ಸಾರ್ವಜನಿಕರು ಪರದಾಟ ನಡೆಸಿದ್ದರು. ಶಹಾಪುರ, ಸುರಪುರ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಹೊಲಗಳಲ್ಲಿ ನೀರು ನುಗ್ಗಿದೆ.

ಮನೆಗಳಿಗೆ ನುಗ್ಗಿದ ನೀರು: ಸುರಪುರ ತಾಲ್ಲೂಕಿನಲ್ಲಿ ಸತ್ಯಂಪೇಟೆ, ವಣಕಿಹಾಳ ಸೀಮಾಂತರ ಪ್ರದೇಶದಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ಹೋಬಳಿವಾರು ಮಳೆ ವಿವರ: ಯಾದಗಿರಿ 23.3, ಹತ್ತಿಕುಣಿ 6.2, ಸೈದಾಪುರ 4.0, ಬಳಿಚಕ್ರ 4.2, ಗುರುಮಠಕಲ್‌ 35.2, ಕೊಂಕಲ್‌ 9.08 ಮಿ.ಮೀ ಮಳೆಯಾಗಿದೆ.

ಮಳೆ ವಿವರ: ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಉತ್ತಮ ಮಳೆಯಾಗಿದೆ. ರಸ್ತಾ‍ಪುರ 30 ಮಿ.ಮೀ, ಖಾನಾಪುರ 16, ಗುರುಸುಣಗಿ 15, ರಾಮಸಮುದ್ರ 14, ಮೋಟನಹಳ್ಳಿ 27, ದೇವಾಪುರ 38, ಪೇಠಅಮ್ಮಾಪುರ 66, ಖಾನಾಪುರ ಎಸ್‌ ಎಚ್‌ 48, ಸೂಗೂರ 40, ಕಂದಕೂರ 20, ಮುಂಡರಗಿ 18, ಸಗರ (ಬಿ) 24, ನಾಯ್ಕಲ್‌ 16, ಠಾಣಗುಂದಿ 14, ಅರಕೇರಾ (ಬಿ) 12, ಯರಗೋಳ 14, ಗಾಜರಕೋಟ 24, ಚಪೇಟ್ಲಾ 38, ಕಾಕಲವಾರ 39, ಚಂಡರಕಿ 32, ಪುಟಪಾಕ 12, ಚಟ್ನಳ್ಳಿ 21, ಅರಕೇರಾ (ಕೆ) 18, ಮಾಲಗತ್ತಿ 26, ಪರಸನಹಳ್ಳಿ 20, ಏವೂರ 12, ಅಗ್ನಿ 12, ಕಾಚಕನೂರ 22, ವಾಗಣಗೇರಾ 30, ಆಳ್ದಾಳ 30, ವಜ್ಜಲ್‌ 34, ಕೋಳಿಹಾಳ 18, ಕಾಮನಟಗಿ 22, ಬೈಲಕುಂಟೊ 20, ಗೆದ್ದಲಮರಿ 36, ಬರದೇವನಾಳ 23, ಮಾರನಾಳ 18, ಜೋಗುಂಡಬಾವಿ 21, ರಾಜಕೋಳೂರ 24, ಬೀರನೂರ 118, ತುಮಕೂರ 21, ಐಕೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ32 ಮಿ.ಮೀ ಮಳೆಯಾಗಿದೆ.

***

ಯಾದಗಿರಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಯಾವುದೇ ಅನಾಹುತ ಆಗಿರುವ ಬಗ್ಗೆ ವರದಿಯಾಗಿಲ್ಲ.
–ಚನ್ನಮಲ್ಲಪ್ಪ ಘಂಟಿ, ತಹಶೀಲ್ದಾರ್ ಯಾದಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT