ಶನಿವಾರ, ಜುಲೈ 2, 2022
22 °C

ಯಾದಗಿರಿ: ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಮೇ 21 ಹಾಗೂ  22 ರಂದು ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8 ನೇ ತರಗತಿ) ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯಲ್ಲಿ 28 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ನಾಲ್ಕು ವಿಷಯಗಳ 863 ಹುದ್ದೆಗಳ ನೇಮಕಾತಿಗೆ 6,625 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಮೇ 21 ರಂದು ಬೆಳಿಗ್ಗೆ 10 ಗಂಟೆಯಿಂದ 12:30 ರ ವರೆಗೆ ಸಾಮಾನ್ಯ ಪತ್ರಿಕೆ ಹಾಗೂ ಮಧ್ಯಾಹ್ನ 2:30 ರಿಂದ 5:30 ರ ವರೆಗೆ ಇಂಗ್ಲಿಷ್ ಭಾಷೆಯ ಐಚ್ಛಿಕ ವಿಷಯದ ಪತ್ರಿಕೆಯ ಪರೀಕ್ಷೆಗಳು ಜರುಗುತ್ತವೆ.

ಮೇ 22 ರಂದು ಬೆಳಿಗ್ಗೆ 10 ಗಂಟೆಗೆ ಐಚ್ಛಿಕ ವಿಷಯಗಳಾದ ಗಣಿತ ಮತ್ತು ವಿಜ್ಞಾನ, ಜೀವವಿಜ್ಞಾನ, ಸಾಮಾಜಿಕ ಪಾಠಗಳ ಪತ್ರಿಕೆ ಪರೀಕ್ಷೆಗಳು ಜರುಗುತ್ತವೆ. ಅದೇ ದಿನ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಆಯಾಯ ಮಾಧ್ಯಮದ ಭಾಷಾ ಸಾಮಾರ್ಥ ಪರೀಕ್ಷಿಸುವ ಪತ್ರಿಕೆಯ ಪರೀಕ್ಷೆಗಳು ಜರಗುತ್ತವೆ.

ಪರೀಕ್ಷಾ ಕೇಂದ್ರದ ಎಲ್ಲಾ  ಕೊಠಡಿಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 

ಕಟ್ಟುನಿಟ್ಟಿನ ಕ್ರಮ: ಪರೀಕ್ಷೆ ಅಂಗವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಜಿಲ್ಲಾ ಪೊಲೀಸ್ ವತಿಯಿಂದ 2 ಪೊಲೀಸ್ ಉಪ ಅಧೀಕ್ಷಕರು, 5 ಜನ ವೃತ್ತ ನಿರೀಕ್ಷಕರು, 20 ಜನ ಪಿಎಸ್ಐ ಮತ್ತು 200 ಜನ ಪೊಲೀಸ್ ಕಾನ್ಸ್ ಟೆಬಲ್ ಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ನೇಮಿಸಲಾಗಿದೆ.

ಅಭ್ಯರ್ಥಿಗಳು ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರೀಕ್ಷಾ ಕೇಂದ್ರದ ಒಳಗೆ ತೆಗೆದುಕೊಂಡು ಹೋಗದಂತೆ ಅಭ್ಯರ್ಥಿಗಳನ್ನು ಸರಿಯಾಗಿ ಪರಿಶೀಲಿಸಿ ಒಳಗಡೆ ಬಿಡಲಾಗುತ್ತಿದೆ.

ಮಹಿಳಾ ಆಭ್ಯರ್ಥಿಗಳ ಕಿವಿ ಓಲೆ, ಕಾಲ್ಗೆಜ್ಜೆ ತೆಗೆಯಿಸಿ ಕೇಂದ್ರದೊಳಗೆ ಬಿಡುತ್ತಿದ್ದಾರೆ.

ಹೆಸರಿನ ಗೊಂದಲ: ನಗರದ ಹೊಸಳ್ಳಿ ಕ್ರಾಸ್ ಸಮೀಪದ ನವನಂದಿ ಪ್ರೌಢಶಾಲೆಯಲ್ಲಿ ಪರೀಕ್ಷಾ ಕೇಂದ್ರವಿದ್ದು, ಹೆಸರಿನ ಗೊಂದಲದಿಂದ ಬೇರೆ ಜಿಲ್ಲೆಗಳಿಂದ ಬಂದ ಅಭ್ಯರ್ಥಿಗಳು ಕೆಲಕಾಲ ಪರದಾಡಿದರು.‌ ನವನಂದಿ ಬದಲಾಗಿ ಹಾಲ್ ಟಿಕೆಟ್ ನಲ್ಲಿ ನವನದಿ ಎಂದು ಮುದ್ರಿಸಲಾಗಿದ್ದು, ವಿಳಾಸ ಕೇಳಿದರೆ ಕೆಲವರು ಗೊತ್ತಿಲ್ಲ ಎಂದು ಹೇಳಿದರೂ ಎಂದು ಅಭ್ಯರ್ಥಿಗಳು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.