ಗುರುಮಠಕಲ್: ‘ನೀರು ಅತ್ಯಮೂಲ್ಯ ಸಂಪತ್ತಾಗಿದ್ದು ಜೀವ ಸಂಕುಲದ ಪ್ರಾಣ ದ್ರವವಾಗಿದೆ. ನೀರನ್ನು ಮಿತವಾಗಿ ಬಳಸುವ ಮೂಲಕ ಮುಂದಿನ ಪೀಳಿಗೆಗೆ ಸುಸ್ಥಿರ ಜಲ ಲಭ್ಯತೆಯನ್ನು ದೃಢಪಡಿಸೋಣ’ ಎಂದು ತಾಲ್ಲೂಕು ಪಂಚಾಯಿತಿ ಇಒ ಅಂಬ್ರೀಶ ಪಾಟೀಲ ಸಲಹೆ ನೀಡಿದರು.

ತಾಲ್ಲೂಕಿನ ದಂತಾಪುರ ಗ್ರಾಮದಲ್ಲಿ ಪುಟಪಾಕ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಜಲ ಜೀವನ ಮಿಷನ್ ಅಡಿಯಲ್ಲಿ ನಿರಂತರ ನೀರು ಪೂರೈಕೆಯ ಜಲ ಅರ್ಪಣೆ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದಂತಾಪುರ ಗ್ರಾಮದವರು ಅದೃಷ್ಟವಂತರು. ಗ್ರಾಮದಲ್ಲಿ ನೀರಿನ ಸಮಸ್ಯೆಯಿಲ್ಲ. ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕುರಿತು ಹೇಳಲಾಗದು. ನಾವು ನೀರನ್ನು ಪೋಲು ಮಾಡದೆ ಸಂರಕ್ಷಿಸಬೇಕು’ ಎಂದು ಹೇಳಿದರು.

ಜಲ ಜೀವನ ಮಿಷನ್ ಯೋಜನೆ ಮೂಲಕ ಸತತವಾಗಿ ನೀರು ಸಿಗಲಿದೆ. ಯೋಜನೆಯ ಸದ್ಬಳಕೆ ಮಾಡಿ ಜೀವಜಲದ ಸಂರಕ್ಷಣೆಯ ಹೊಣೆಯನ್ನೂ ಪಾಲಿಸಿ ಎಂದು ಕೋರಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಶತಣಬಸಪ್ಪ ಮಾತನಾಡಿ, ‘ಈಗ ಮನೆಗೆ ನಳದ ಮೂಲಕ ನೀರು ಸಿಗಲಿದೆ’ ಎಂದು ಹೇಳಿದರು.

ಯೋಜನೆಯ ಜಿಲ್ಲಾ ತಾಂತ್ರಿಕ ಬೆಂಬಲ ಘಟಕದ ಸಾಮಾಜಿಕ ಅಭಿವೃದ್ಧಿ ಸಮಾಲೋಚಕರಾದ ಕಾಶಿನಾಥ ಕಲಾಲ್ ಮತ್ತು ಅಂಜನೇಯ ನಾಯಕ್ ಮಾತನಾಡಿ, ‘ಜಲ ಜೀವನ ಮಿಷನ್ ಅನುಷ್ಠಾನ ಯಶಸ್ವಿಯಾಗಲು ಗ್ರಾಮಕ್ಕೆ ನೀರು ಪೂರೈಸುವ ನೀರಿನ ಸಂಗ್ರಹ ಟ್ಯಾಂಕ್ನಲ್ಲಿ ದಿನದ 24 ಗಂಟೆಯೂ ನೀರು ಸಂಗ್ರಹವಿರುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ’ ಎಂದು ಹೇಳಿದರು.

ಜಲ ಅರ್ಪಣಾ ದಿವಸದ ಪ್ರಾಮುಖ್ಯತೆ, ನೀರಿನ ಮಹತ್ವ ಮತ್ತು ನೀರು ನಿರ್ವಹಣೆಯಲ್ಲಿ ಗ್ರಾಮ ಪಂಚಾಯಿತಿಯ ಪಾತ್ರದ ಕುರಿತು ವಿವರಣೆ ನೀಡಿದರು.

ಪಂಚಾಯಿತಿ ಆಡಳಿತಾಧಿಕಾರಿ ಯಲ್ಲಾಲಿಂಗ, ಪಿಡಿಒ ಭೀಮರಾಯ, ಜೆಜೆಎಂ ವ್ಯವಸ್ಥಾಪಕ ರಾಜಶೇಖರ, ಹಣಮಂತ ಜಾಧವ, ಪಂಚಾಯಿತು ಸಿಬ್ಬಂದಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-30-129999573

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.