ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಸಿನ ಮಳೆಗೆ ರಸ್ತೆ ಮೇಲೆ ಹರಿದ ನೀರು

ಶಾಸ್ತ್ರಿ ವೃತ್ತದ ಬಳಿ ಅವೈಜ್ಞಾನಿಕ ಚರಂಡಿ ನಿರ್ಮಾಣ ಕಾಮಗಾರಿ: ಆರೋಪ
Last Updated 2 ಆಗಸ್ಟ್ 2022, 2:16 IST
ಅಕ್ಷರ ಗಾತ್ರ

ಯಾದಗಿರಿ: ನಗರದಲ್ಲಿ ಸೋಮವಾರ ಸುರಿದ ಬಿರುಸಿನ ಮಳೆಗೆ ರಸ್ತೆಯ ಮೇಲೆ ನೀರು ಹರಿದಾಡಿತು.

ನಗರದ ಲಾಲ್‌ ಬಹದ್ದೂರ್‌ ಶಾಸ್ತ್ರಿ ವೃತ್ತದ ಸಮೀಪ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಿದ್ದು, ನೀರು ಹರಿದು ಹೋಗದ ಕಾರಣ ರಸ್ತೆಯ ಮೇಲೆ ಒಂದು ಅಡಿ ನೀರು ನಿಂತಿತು.

ಶಾಸ್ತ್ರಿ ವೃತ್ತದಿಂದ ಎಲ್‌ಐಸಿ ಕಚೇರಿ, ಹೊಸ ಬಸ್‌ ನಿಲ್ದಾಣ ಸಮೀಪದ ತನಕ ನೀರು ಹರಿಯಿತು. ಇದರಿಂದ ವಾಹನ ಸವಾರರು ಪರದಾಡುವಂತೆ ಆಯಿತು.

ಬೈಕ್‌ ಸವಾರರು ನೀರಿನಲ್ಲೇ ಹರಸಾಹಸಪಟ್ಟು ವಾಹನ ಚಲಾಯಿಸಿದರು. ಇನ್ನೂ ಪಾದಚಾರಿಗಳು ನಡೆದುಕೊಂಡು ಹೋಗಲು ನೀರು ಅಡ್ಡಿಯಾಗಿತ್ತು.

ನಂತರ ನಗರಸಭೆ ವತಿಯಿಂದ ಜೆಸಿಬಿ ಮೂಲಕ ನೀರು ಸರಾಗವಾಗಿ ಹರಿಯಲು ದಾರಿ ಮಾಡಿದ ಮೇಲೆ ರಸ್ತೆ ಮೇಲೆ ನೀರು ಕಡಿಮೆಯಾಯಿತು.

ಇನ್ನೂ ನಗರದ ರೈಲ್ವೆ ಸ್ಟೇಷನ್‌ ರಸ್ತೆಯಲ್ಲೂ ಮಳೆ ನೀರು ನಿಂತು ವಾಹನ ಸವಾರರು ಪರದಾಡುವಂತೆ ಆಗಿತ್ತು. ನಗರದ ವಿವಿಧ ಕಡೆಯೂ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿತ್ತು.

ಬಿರುಸಿನ ಮಳೆ:

ಮಧ್ಯಾಹ್ನ 3.30ಕ್ಕೆ ಆರಂಭವಾಗದ ಬಿರುಸಿನ ಮಳೆ ಸುಮಾರು 20 ನಿಮಿಷ ಎಡೆಬಿಡದೇ ಸುರಿಯಿತು. ಇದರಿಂದ ಬಡಾವಣೆಗಳ ರಸ್ತೆಗಳಲ್ಲೂ ನೀರು ಹರಿಯಿತು.

ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನದ ಕೆಲವೊತ್ತು ಬಿಸಿಲಿನ ವಾತಾವರಣ ಇತ್ತು.

ಜಿಲ್ಲೆಯ ಶಹಾಪುರ, ಸೈದಾಪುರದಲ್ಲಿ ಮಳೆಯಾಗಿದೆ.

***

ಭಾರಿ ಮಳೆಯಿಂದ ರೈಲ್ವೆ ಸ್ಟೇಷನ್‌ ಮುಖ್ಯರಸ್ತೆಯಲ್ಲಿ ಚರಂಡಿ ನೀರು ರಸ್ತೆಗೆ ನುಗ್ಗಿದ್ದರಿಂದ ಜನರಿಗೆ ತೊಂದರೆ ಉಂಟಾಯಿತು. ಸಂಬಂಧಪಟ್ಟ ಅಧಿಕಾರಿಗಳು ನಗರಸಭೆ ಅಧಿಕಾರಿಗಳು ಶಾಸಕರು ಕ್ರಮ ವಹಿಸಬೇಕು

–ಗೌತಮ ಕ್ರಾಂತಿ, ನಾಗರಿಕ

***

ಶಾಸ್ತ್ರಿ ವೃತ್ತದ ಬಳಿ ಅವೈಜ್ಞಾನಿಕ ಚರಂಡಿ ಕಾಮಗಾರಿ ಮಾಡಲಾಗಿದ್ದು, ಇದರಿಂದ ರಸ್ತೆ ಮೇಲೆ ನೀರು ಹರಿದಾಡಿತು. ವಾಹನ ಸವಾರರು ಪರದಾಡಿದರು. ಕೂಡಲೇ ಸೂಕ್ರ ಕ್ರಮ ದುರಸ್ತಿ ಮಾಡಬೇಕು

–ಅಭಿಷೇಕ ಆರ್‌. ದಾಸನಕೇರಿ, ನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT