ಯಾದಗಿರಿ: ಕೆಲ ದಿನಗಳು ವಿರಾಮ ಕೊಟ್ಟಿದ್ದ ಮಳೆಯು ಗುಡುಗು, ಮಿಂಚು ಸಹಿತ ಶನಿವಾರ ಜೋರಾಗಿ ಬಿದ್ದು, ವಾತಾವರಣ ತಂಪಾಗಿಸಿತ್ತು.

ಶನಿವಾರ ಬೆಳಿಗ್ಗೆ ಬಿಸಿಲು, ಮಧ್ಯಾಹ್ನ ಧಗೆಯ ವಾತಾವರಣ ಕಂಡುಬಂತು. ಸಂಜೆ 5ರ ಸುಮಾರಿಗೆ ಗುಡುಗು, ಮಿಂಚಿನೊಂದಿಗೆ ದಟ್ಟ ಮೋಡ ಆವರಿಸಿತು. 6.30ರ ವೇಳೆಗೆ ನಗರವೂ ಸೇರಿದಂತೆ ಜಿಲ್ಲೆಯ ಹಲವೆಡೆಗಳಲ್ಲಿ ಮಳೆ ಸುರಿಯಲು ಆರಂಭಿಸಿತು.

ಜೋರಾದ ಗಾಳಿ, ಗುಡುಗು ಮಿಂಚಿನೊಂದಿಗೆ ಅರ್ಧ ಗಂಟೆಗೂ ಹೆಚ್ಚುಕಾಲ ಮಳೆಯಾಗಿ ಭೂಮಿಯನ್ನು ತಂಪಾಗಿಸಿತು. ಬಿತ್ತನೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದ ರೈತರ ಮೊಗದಲ್ಲಿ ಮಳೆಯು ಮಂದಹಾಸ ಮೂಡಿಸಿತು. ಮತ್ತೊಂದೆಡೆ ಮೋಡದೊಂದಿಗೆ ಗಾಳಿ ಬೀಸಲು ಆರಂಭವಾಗುವ ಮುನ್ನವೇ ನಗರದ ಹಲವು ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಯಿತು.

ಮಹಾತ್ಮ ಗಾಂಧಿ ವೃತ್ತ, ರೈಲ್ವೆ ನಿಲ್ದಾಣ ಪ್ರದೇಶ, ಚಿತ್ತಾಪುರ ರಸ್ತೆ, ಹಳೆ ಮತ್ತು ಹೊಸ ಬಸ್ ನಿಲ್ದಾಣ, ಚಕ್ಕರಕಟ್ಟ, ಕನಕದಾಸ ವೃತ್ತ, ಹೊಸಳ್ಳಿ ಕ್ರಾಸ್, ಲಕ್ಷ್ಮಿ ನಗರ, ಕೋಳಿವಾಡ, ರೈಲ್ವೆ ಸ್ಟೇಷನ್ ಏರಿಯಾ, ಗಂಜ್ ಪ್ರದೇಶ, ರಾಜೀವ್ ಗಾಂಧಿ ನಗರ, ಮಾತಾ ಮಾಣಿಕೇಶ್ವರ ಕಾಲೊನಿ ಸೇರಿದಂತೆ ಹಲವೆಡೆಯ ರಸ್ತೆಗಳಲ್ಲಿ ಮಳೆಯ ನೀರು ಹರಿದಾಡಿತು.

ದೇವಪುರದಲ್ಲಿ ಅತ್ಯಧಿಕ ಮಳೆ: ಸುರಪುರ ತಾಲ್ಲೂಕಿನ ದೇವಪುರ ಗ್ರಾಮದಲ್ಲಿ ಅತ್ಯಧಿಕ 33.5 ಮಿ.ಮೀ. ಮಳೆಯಾಗಿದೆ. ಉಳಿದಂತೆ ಹುಣಸಗಿಯಲ್ಲಿ 27.4, ಕಾಮನಟಗಿಯಲ್ಲಿ 26.5, ಅರಿಕೇರಾ (ಕೆ) ಹಾಗೂ ಬಂದಳಿಯಲ್ಲಿ ತಲಾ 26, ಮಲ್ಲಾ (ಬಿ) ಗ್ರಾಮದಲ್ಲಿ 24, ಚಟ್ನಳ್ಳಿಯಲ್ಲಿ 23.5, ಮುಂಡರಗಿಯಲ್ಲಿ 21.5, ಯಲ್ಹೇರಿಯಲ್ಲಿ 21 ಹಾಗೂ ನಗನೂರಲ್ಲಿ 20.5 ಮೀ.ಮೀ. ಮಳೆ ಬಿದ್ದಿದೆ.

ಕೊಲಿಹಾಳ, ಕೊಲ್ಲೂರು (ಎಂ), ಯಾದಗಿರಿ, ಪುಟ್ಪಾಕ್, ವಡಿಗೇರಾ (ಟಿ), ಹೆಮನೂರು, ಅರಕೇರಾ (ಕೆ), ಕುರಕುಂದ, ಹಳಿಗೇರಾ, ಕಂದಕೂರ ಸೇರಿದಂತೆ ಹಲವೆಡೆ 13ರಿಂದ 16 ಮಿ.ಮೀ. ಆಸುಪಾಸಿನಲ್ಲಿ ಮಳೆಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-30-642878777

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.