ಯಾದಗಿರಿ: ‘ಜೀವನದಲ್ಲಿ ಎದುರಾದ ಎಲ್ಲಾ ಕಷ್ಟಗಳನ್ನು, ಅದೂ ಸಹ ಸಾಗರದಂತೆ ಬೆನ್ನತ್ತಿದರೂ ಕಂಗೆಡದೆ ಎಲ್ಲವನ್ನೂ ಎದುರಿಸಿದ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಅವರು ಹೆಣ್ಣು ಕುಲದ ಮಾದರಿಯಾಗಿದ್ದಾರೆ’ ಎಂದು ಪ್ರಾಂಶುಪಾಲ ಸುಭಾಶ್ಚಂದ್ರ ಕೌಲಗಿ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹೇಮರಡ್ಡಿ ಮಲ್ಲಮ್ಮ ಜಯಂತಿ ಸಮಿತಿ ಸಂಯುಕ್ತಾಶ್ರಯದಲ್ಲಿ ಭಾನುವಾರ ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಾನ್ ಸಾಧ್ವಿ ಹೇಮರಡ್ಡಿ ಮಲ್ಲಮ್ಮ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶತಮಾನಗಳ ಹಿಂದೆಯೇ ಒಬ್ಬ ಪತ್ನಿ, ಸೊಸೆ, ಅತ್ತಿಗೆಯಾಗಿ ಹೇಗಿರಬೇಕು. ಕುಟುಂಬವನ್ನು ಹೇಗೆ ನಿರ್ವಹಿಸುವುದು ಎನ್ನುವುದನ್ನು ತೋರಿಸಿದ ಮಲ್ಲಮ್ಮ ಅವರು ಜಾತಿ-ಕುಲಗಳನ್ನು ಮೀರಿದ ಆದರ್ಶವಾಗಿದ್ದಾರೆ’ ಎಂದರು.

‘ಜೀವನದ ಕುರಿತ ಕಾಳಜಿ, ಸಮಾಜದ ಕುರಿತಾದ ಕಳಕಳಿ, ಕಷ್ಟಗಳಿಗೆ ಎದೆಗುಂದದ ದೈರ್ಯ ಮತ್ತು ಭಕ್ತಿಗೆ ಮೆಚ್ಚಿ ಶ್ರೀಶೈಲ ಮಲ್ಲಿಕಾರ್ಜುನ ದರ್ಶನ ನೀಡಿದ್ದ. ಅವರ ತತ್ವಾದರ್ಶಗಳು ಸರ್ವಕಾಲಿಕವಾಗಿವೆ’ ಎಂದು ಹೇಳಿದರು.

‘ಆರು ಶತಮಾನಗಳ ಪೂರ್ವ ಶ್ರೀಶೈಲ ಕ್ಷೇತ್ರದ ಹತ್ತಿರದ ಗ್ರಾಮವೊಂದರ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಮಲ್ಲಮ್ಮಳಿಗೆ ತಂದೆ ನಾಗಿರೆಡ್ಡಿ ಬುನಾದಿಯಾಗಿ ಬೆಂಬಲಿಸಿದ್ದರು. ಅವರ ಸಂಸಾರದಲ್ಲಿದ್ದೇ ಧರ್ಮದ ಜಗವನ್ನು ಗೆದ್ದ ಸಾಧ್ವಿ’ ಎಂದರು.

ಸಚಿವ ಸುಧಾಕರ ನಿಧನದ ಹಿನ್ನೆಲೆ ಸರಳ ಮತ್ತು ಸಾಂಕೇತಿಕ ಕಾರ್ಯಕ್ರಮ ನಡೆಸಲಾಯಿತು.

ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಕಾರ್ಯಕ್ರಮ ಉದ್ಘಾಟಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ, ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ, ಜಿಲ್ಲಾ ವೀರಶೈವ ರೆಡ್ಡಿ ಸಮಾಜದ ಅಧ್ಯಕ್ಷ ರಾಮರೆಡ್ಡಿ ಗೌಡ ತಂಗಡಗಿ, ಮುಖಂಡ ರಾಚಣ್ಣಗೌಡ ಮುದ್ನಾಳ, ಪಿಎಸ್ಐ ಮಂಜನಗೌಡ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ಉತ್ತರಾದೇವಿ ಮಠಪತಿ ಉಪಸ್ಥಿತರಿದ್ದರು.

ಭವ್ಯ ಮೆರವಣಿಗೆ: ಮಹಾಸಾಧ್ವಿ ಹೇಮಾರಡ್ಡಿ ಮಲ್ಲಮ್ಮ ಜಯಂತಿ ಹಿನ್ನೆಲೆ ನಗರದ ಪ್ರಮುಖ ರಸ್ತೆಗಳಲ್ಲಿ ಹೇಮರಡ್ಡಿ ಮಲ್ಲಮ್ಮ ಅವರ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ವೀರಶೈವ ರಡ್ಡಿ ಸಮಾಜದ ಮುಖಂಡರಾದ ಮಲ್ಲಣ್ಣಗೌಡ ಕೌಳೂರು, ಡಾ.ಸಿದ್ದರಾಜರೆಡ್ಡಿ, ಬಸವಂವಂತರಡ್ಡಿ ಸೇರಿದಂತೆ ಪದಾಧಿಕಾರಿಗಳು, ಯುವಕರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-30-1342621302

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.