ಶಹಾಪುರ (ಯಾದಗಿರಿ ಜಿಲ್ಲೆ): ‘ಬಸವಾದಿ ಶರಣರ ಹಿಂದೂ ಸಮಾವೇಶ ನಡೆಸುತ್ತಿರುವ ಬಗ್ಗೆ ರಾಜ್ಯ ಸರ್ಕಾರ ಮೌನವಾಗಿ ಇರುವುದು ಸರಿಯಲ್ಲ. ಸರ್ಕಾರವೇ ಮುಂದೆ ನಿಂತು ಈ ಸಮಾವೇಶಕ್ಕೆ ತಡೆಯೊಡ್ಡಬೇಕು’ ಎಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ಶುಕ್ರವಾರ ಇಲ್ಲಿ ಜರುಗಿದ ಬಸವಾದಿ ಶರಣರ ಜಾಗೃತಿಸಮಾವೇಶದಲ್ಲಿ ಅವರು, ‘ಬಸವಾದಿ ಶರಣರ ಹಿಂದೂ ಸಮಾವೇಶದ ಮುಖೇನ ಬಸವಣ್ಣನ ವಚನಗಳ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಸೂಫಿ ಸಂತರ ನಾಡಿನಲ್ಲಿ ಮನುವಾದಿ, ದುಷ್ಟ ಶಕ್ತಿಗಳು ಲಗ್ಗೆ ಇಟ್ಟು ಯುವಕರಲ್ಲಿ ದ್ವೇಷ,ಮತೀಯ ಹಾಗೂ ಕೋಮು ಭಾವನೆ ಬಿತ್ತುವುದನ್ನು ನಿಲ್ಲಿಸಲಿ’ ಎಂದರು.

‘ಹಿಂದೂ ನಾವೆಲ್ಲರೂ ಒಂದು ಎನ್ನುವ ಮಠಾಧೀಶರು ತಮ್ಮ ಮಠಗಳಲ್ಲಿ ಸಹಪಂಕ್ತಿ ಭೋಜನ, ಗುಡಿ ಗುಂಡಾರಗಳಿಗೆ ಇವತ್ತಿಗೂ ಶೋಷಿತರಿಗೆ ಮುಕ್ತ ಪ್ರವೇಶ ಕೊಡುತ್ತಿಲ್ಲ. ಕೃಷಿ ಬಗ್ಗೆ ಮಾತನಾಡುವ ಕನ್ಹೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಸ್ವಾಮಿನಾಥನ್ ಆಯೋಗ, ರೈತ ವಿರೋಧಿ ಕಾಯ್ದೆಗಳ ಕುರಿತುಮಾತನಾಡುವುದಿಲ್ಲ. ಅಂತಹವರು ಸಮಾವೇಶಕ್ಕೆ ಬಂದು ಏನು ಮಾತನಾಡುವರು’ ಎಂದು ಕೇಳಿದರು.

‘ಪ್ರಜಾಪ್ರಭುತ್ವದ ವ್ಯವಸ್ಥೆ ಯಲ್ಲಿ ವ್ಯಕ್ತಿ ಪೂಜೆ ಅಪಾಯಕಾರಿ ಬೆಳವಣಿಗೆ. ಧರ್ಮದ ಆಧಾರದ ಮೇಲೆ ರಾಜಕೀಯ ಷಡ್ಯಂತ್ರ ನಡೆಯಿಸಿ ರಾಜಕೀಯ ತೆವಲು ತೀರಿಸಿಕೊಳ್ಳುತ್ತಿದ್ದಾರೆ. ರಾಜಕೀಯ ಪಕ್ಷಗಳಿಗೆ ಬಸವಣ್ಣ ಎಟಿಎಂ ಆಗಿದ್ದಾರೆ. ವಚನಗಳನ್ನು ತಿರುಚುವ ದುಷ್ಟಶಕ್ತಿಗಳನ್ನು ಮಟ್ಟಹಾಕಬೇಕು’ ಕರೆ ನೀಡಿದರು.

ಇದಕ್ಕೂ ಮುನ್ನ ಬಸವೇಶ್ವರ ವೃತ್ತದಿಂದ ಸಿಪಿಎಸ್ ಶಾಲಾ ಮೈದಾನದವರೆಗೆ ನಡೆದ ಮೆರವಣಿಗೆಯಲ್ಲಿ ಹಲವರು ಬಸವ ಟೋಪಿ ಹಾಕಿಕೊಂಡು, ಷಟಸ್ಥಲ ಧ್ವಜ ಹಿಡಿದು ಸಾಗಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-51-1277162025

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.