ಯಾದಗಿರಿ: ನಗರದ ಹೋಟೆಲ್ ಒಂದರಲ್ಲಿ ತಂಗಿದ್ದ ತೆಲಂಗಾಣ ಮೂಲದ ವ್ಯಕ್ತಿಯೊಬ್ಬರ ಶವ ಕೊರಳಿಗೆ ಟವೆಲ್ ಸುತ್ತಿ ಕೊಲೆ ಮಾಡಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ.

ತೆಲಂಗಾಣ ರಾಜ್ಯದ ಹೈದರಾಬಾದ್ನ ಗೋಲ್ಕೊಂಡ ನಿವಾಸಿ ಲಕ್ಷ್ಮಣ ರಾವ್ ಪೆನುಮೂರ್ತಿ (51) ಶವವಾಗಿ ಪತ್ತೆಯಾದವರು. ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಲಕ್ಷ್ಮಣ ರಾವ್ ಅವರು ಮೇ 10ರಂದು ಸಹೋದರಿ ವರಲಕ್ಷ್ಮಿ ಹಾಗೂ ಭಾವ ವೆಂಟಕರತ್ನ ಅವರೊಂದಿಗೆ ಯಾದಗಿರಿಗೆ ಬಂದಿದ್ದರು. ಮಧ್ಯಾಹ್ನ 1.30ರ ಸುಮಾರಿಗೆ ಎಸ್ಡಿಎನ್ ಹೋಟೆಲ್ನ ರೂಮ್ ಒಂದರಲ್ಲಿ ಉಳಿದುಕೊಂಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹೋಟೆಲ್ ರೂಮ್ ಪಡೆದುಕೊಳ್ಳುವಾಗ ಲಕ್ಷ್ಮಣ ಅವರು ಯಾದಗಿರಿ ನಗರದಲ್ಲಿ ಜಮೀನು ವ್ಯವಹಾರ ಸಂಬಂಧ ಬಂದಿದ್ದಾಗಿ ತಿಳಿಸಿದ್ದರು. ವಿಳಾಸ ಪುರಾವೆಗಾಗಿ ತನ್ನ ಆಧಾರ್ ಕಾರ್ಡ್ ಮಾತ್ರ ನೀಡಿದ್ದರು. ಜೊತೆಗೆ ಮಂಗಳವಾರ (ಮೇ 12) ಚೆಕ್ಔಟ್ ಮಾಡುವುದಾಗಿಯೂ ಹೇಳಿದ್ದರು. ಲಕ್ಷ್ಮಣ ಜೊತೆಗೆ ಬಂದಿದ್ದ ಇಬ್ಬರು ಮಂಗಳವಾರ ಸಂಜೆ 4.30ರ ಸುಮಾರಿಗೆ ಹೋಟೆಲ್ನಿಂದ ಹೊರಹೋಗಿದ್ದರು ಎಂದು ಗೊತ್ತಾಗಿದೆ.

ಹೋಟೆಲ್ ಸಿಬ್ಬಂದಿ ಬುಧವಾರ ಮಧ್ಯಾಹ್ನ ಲಕ್ಷ್ಮಣಗೆ ಫೋನ್ ಮಾಡಿದರೂ ಅವರು ಕರೆಯನ್ನು ಸ್ವೀಕರಿಸಲಿಲ್ಲ. ರೂಮ್ ಬಾಗಿಲು ಬಡಿದಾಗಲೂ ತೆರೆಯಲಿಲ್ಲ. ಮಧ್ಯಾಹ್ನವೂ ಬಾಗಿಲು ತೆರೆಯದೆ ಇದ್ದಾಗ ಸಂಶಯ ಬಂದು ಮಾಸ್ಟರ್ ಕೀಯಿಂದ ರೂಮ್ ಬಾಗಿಲು ತೆಗೆದು ನೋಡಿದಾಗ, ರೂಮ್ನಲ್ಲಿ ಶವವಾಗಿ ಪತ್ತೆಯಾದರು. ಕೊರಳಿಗೆ ಟವೆಲ್ ಸುತ್ತಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಮಾಹಿತಿ ನೀಡಿದರು.

ಲಕ್ಷ್ಮಣ ಜೊತೆಯಲ್ಲಿ ಬಂದವರು ಪತ್ತೆಯಾಗುತ್ತಿಲ್ಲ, ಸಂಪರ್ಕಕ್ಕೂ ಸಿಗುತ್ತಿಲ್ಲ. ಎಟಿಎಂ ಒಂದರಲ್ಲಿ ಹಣ ತೆಗೆದುಕೊಂಡು ಹೋಗಿದ್ದು ಗೊತ್ತಾಗಿದೆ. ಜೊತೆಯಲ್ಲಿ ಬಂದವರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಜಮೀನು ವ್ಯಾಜ್ಯ, ಬೇರೆ ಯಾವುದಾದರು ಕಾರಣಕ್ಕೆ ಕೊಲೆ ನಡೆದಿದೆ ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೊಲದಲ್ಲಿ ಜಲಧಾರೆಯ ಅಕ್ರಮ ಪೈಪ್ ಅಳವಡಿಕೆ: ಶಹಾಪುರ ತಾಲ್ಲೂಕಿನ ಹೋತಪೇಠ ಗ್ರಾಮದ ಮಲ್ಲಿಕಾರ್ಜುನ ಮಲ್ಲಣಗೌಡ ಅವರ ಹೊಲದಲ್ಲಿ ಜಲಧಾರೆ ಯೋಜನೆಯಡಿ ಅಕ್ರಮವಾಗಿ ಪೈಪ್ ಲೈನ್ ಅಳವಡಿಕೆ ಮಾಡಿದ ಆರೋಪದಡಿ ಕನ್ಸ್ಟ್ರಕ್ಷನ್ ಕಂಪನಿಯ ನಾಲ್ವರ ವಿರುದ್ಧ ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ಸ್ಟ್ರಕ್ಷನ್ ಕಂಪನಿಯ ನಿರ್ದೇಶಕ ಕಿಶೋರ್, ಸೂಪರ್ವೈಸರ್ ಡ್ಯಾನಿಯಲ್, ಎಂಜಿನಿಯರ್ಗಳಾದ ರಾಮಕೃಷ್ಣ ರೆಡ್ಡಿ ಹಾಗೂ ಸಾಹಿಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಲ್ಲಿಕಾರ್ಜುನ ಅವರ ಹೊಲದಲ್ಲಿ ಆರೋಪಿಗಳು ಜೆಸಿಬಿ ಬಳಸಿ ತಗ್ಗು ತೋಡಿದ್ದರು. ಈ ಬಗ್ಗೆ ಮಾಲೀಕರು ಆಕ್ಷೇಪಿಸಿದಾಗ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲಧಾರೆ ಯೋಜನೆಯಡಿ ಪೈಪ್ಲೈನ್ ಕಾಮಗಾರಿ ನಡೆಸುತ್ತಿರುವುದಾಗಿ ಹೇಳಿದರು. ಆದರೆ, ಯಾವುದೇ ಪರವಾನಗಿ ಇರಲಿಲ್ಲ, ತಹಶೀಲ್ದಾರ್ಗಳಿಂದ ಎನ್ಒಸಿ ಸಹ ಪಡೆದಿರಲಿಲ್ಲ. ಅನುಮತಿ ಇಲ್ಲದೆ ಹೊಲದಲ್ಲಿ ಕಾಮಗಾರಿ ನಡೆಸದಂತೆ ಆಕ್ಷೇಪಿಸಿದಾಗ ಆರೋಪಿಗಳು ಅವಚ್ಯವಾಗಿ ಬೈದು, ಬಡಿಗೆ ಹಿಡಿದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-30-2105877297

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.