ಯಾದಗಿರಿ: ‘ಮಾಹಿತಿ ಹಕ್ಕು ಕಾಯ್ದೆಯಡಿ ದೂರುಗಳನ್ನು ಸಲ್ಲಿಸಿ, ಆ ನಂತರ ಅವುಗಳನ್ನು ವಾಪಸ್ ಪಡೆಯಲಾಗಿದೆ ಎಂಬ ಕಾರಣಕ್ಕೆ ದೂರುದಾರರಿಗೆ ಜಿ. ಪಂ ಸಿಇಒ ವಸೂಲಾತಿ ನೋಟಿಸ್ ಜಾರಿ ಮಾಡಿರುವುದು ಖಂಡನೀಯ’ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಮಹಿಳಾ ಸಂಯೋಜಕಿ ಗಿರಿಜಾ ಹೇಳಿದರು.

‘ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆದ ಕಳಪೆ ಕಾಮಗಾರಿ ಮತ್ತು ಭ್ರಷ್ಟಾಚಾರ ಆರೋಪ ಸಂಬಂಧ ಸಾವಿರಾರು ದೂರುಗಳನ್ನು ನೀಡಲಾಗಿದೆ. ಅವುಗಳ ಬಗ್ಗೆ ತನಿಖೆ ಮಾಡದೆ ಬಾಕಿ ಇರಿಸಿಕೊಂಡು ದೂರುದಾರರ ಮೇಲೆ ಕ್ರಮ ಕೈಗೊಳ್ಳುತ್ತಿರುವುದು ಸರಿಯಲ್ಲ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವಸೂಲಾತಿ ನೋಟಿಸ್ ನೀಡಿದ ಸಂಬಂಧ ರಾಜ್ಯ ಮಟ್ಟದ ನಾಯಕರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಆರಂಭಿಸಲಾಗುವುದು’ ಎಂದರು.

ಸಮಿತಿಯ ತಾಲ್ಲೂಕು ಸಂಯೋಜಕ ಲಕ್ಷ್ಮಣ ಆರ್.ಹಳಿಸಗರ ಮಾತನಾಡಿ, ‘ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಅಡುಗೆ ಸಹಾಯಕರೊಬ್ಬರಿಗೆ ವೇತನ ಪಾವತಿಯಾಗಿಲ್ಲ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸಿಲ್ಲ’ ಎಂದು ಆರೋಪಿಸಿದರು.

‘ಪ್ರಭಾವಿ ನಾಯಕರು, ಅಧಿಕಾರಿಗಳ ಒತ್ತಡ, ಜೀವ ಬೆದರಿಕೆ ಮತ್ತು ಮನವೊಲಿಕೆಯಿಂದಾಗಿ ಕೆಲ ದೂರುಗಳನ್ನು ವಾಪಸ್ ಪಡೆಯಬೇಕಾಯಿತು. ಆದರೆ, ಆ ನಂತರ ಮತ್ತೆ ದೂರು ಸಲ್ಲಿಸಿ ತನಿಖೆಗೆ ಒತ್ತಾಯಿಸಲಾಗಿದೆ’ ಎಂದರು.

ರಾಯಪ್ಪ ಸಾಲಿಮನಿ, ಚಂದ್ರಶೇಖರ ನಾಟೇಕಾರ್, ಚಂದ್ರಶೇಖರ ಹುಲಿಮನಿ, ವಿಶ್ವರಾಧ್ಯಾ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-30-1447751451

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.