ಯಾದಗಿರಿ: ಡಾ.ಭೀಮಣ್ಣ ಮೇಟಿ ಫೌಂಡೇಶನ್ ಹಾಗೂ ಡಿಡಿಯು ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯಲ್ಲಿ ಏಪ್ರಿಲ್ 5ರಂದು ಶಿಕ್ಷಕರ ಹುದ್ದೆಗಳಿಗೆ ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜಿಸಿರುವುದಾಗಿ ಸಂಸ್ಥೆಯ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಮೇಟಿ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಡಿಡಿಯು ಸಿಬಿಎಸ್ಸಿ ಶಾಲೆಯಲ್ಲಿ ಏ.5 ರಂದು ಬೆಳಿಗ್ಗೆ 9ರಿಂದ ಸಂಜೆ 4ರ ವರೆಗೆ ಮೇಳ ಜರುಗಲಿದೆ ಎಂದರು.

ಮೇಳದ ಮೂಲಕ ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪಿಯು ಹಂತದ ಪ್ರಾಂಶುಪಾಲರು, ಉಪನ್ಯಾಸಕರು, ಮುಖ್ಯಶಿಕ್ಷಕರು, ಶಿಕ್ಷಕರು, ವಾರ್ಡನ್, ಗುಮಾಸ್ತ, ಸಿಪಾಯಿ, ಆಯಾ, ಡ್ರೈವರ್ಗಳು, ಸೆಕ್ಯೂರಿಟಿ ಗಾರ್ಡ್ ಮುಂತಾದವುಗಳ ಹುದ್ದೆಗೆ ನೇಮಕಾತಿ ಜರುಗಲಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು, ನೌಕರರು ಹಾಗೂ ನಿರುದ್ಯೋಗಿ ಯುವಕರು ಇದರ ಲಾಭ ಪಡೆಯುವಂತೆ ಕೋರಿದರು. ಉದ್ಯೋಗ ಮೇಳ ಉಚಿತವಾಗಿದ್ದು, ಮೇಳಕ್ಕೆ ಬರುವಾಗ ಅರ್ಹತೆಯ ದಾಕಲೆಗಳು ಮತ್ತು ವಿವರಗಳನ್ನು ತರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಬೋಧನಾ ತರಬೇತಿ ನೀಡಲಾಗುತ್ತದೆ ಎಂದು ವಿವರಿಸಿದರು.

ಹೆಚ್ಚಿನ ಮಾಹಿತಿಗೆ ಡಿಡಿಯು ಸಮೂಹ ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕಿಸಬಹುದು ಎಂದರು. ಗೋಪಾಲ ಕೃಷ್ಣ, ರಾಜೇಶ, ವೆಂಕಟೇಶ ಪೂಜಾರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-30-1927197032

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.