ಯಾದಗಿರಿ: ‘ಜನ–ಜಾಗೃತಿ ಸಮಿತಿ ವತಿಯಿಂದ ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಕುರುಬರ ಪರಿಶಿಷ್ಟ ಪಂಗಡ ಬೇಡಿಕೆಯ ಚಿಂತನ–ಮಂಥನ ಸಮಾರಂಭವನ್ನು ನಗರದ ಕೊಯಿಲೂರು ಮಲ್ಲಪ್ಪ ಸ್ಮಾರಕ ಉದ್ಯಾನದಲ್ಲಿ ಮಾರ್ಚ್ 28ರಂದು ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ರಾಜ್ಯ ಕುರುಬರ ಸಂಘ ಜಿಲ್ಲಾ ಅಧ್ಯಕ್ಷ ಶಿವಕುಮಾರ ಮುನಗಲ್ ತಿಳಿಸಿದರು.

‘ಅಂದು ಬೆಳಿಗ್ಗೆ 10.30ಕ್ಕೆ ನಡೆಯುವ ಸಮಾರಂಭದಲ್ಲಿ ಹುಲಿಜಂತಿಯ ಮಾಳಿಂಗರಾಯ ಮಹಾರಾಜ ಮತ್ತು ತಿಂಥಣಿ ಬ್ರಿಡ್ಜ್ ಕಾಗಿನೆಲೆ ಕನಕ ಗುರುಪೀಠದ ಲಿಂಗಬೀರದೇವರು ಸಾನ್ನಿಧ್ಯ ವಹಿಸುವರು. ಚಿಂತಕಿ ಹೇಮಲತಾ ಹಂದರಗಲ್ ಅವರು ಸಮಾರಂಭ ಉದ್ಘಾಟಿಸುವರು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ವಿಧಾನ ಪರಿಷತ್ ಮಾಜಿ ಸದಸ್ಯ ಅಮಾತೆಪ್ಪ ಕಂದಕೂರ, ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸದಲಾಪುರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಮುಖಂಡರಾದ ಚಂದ್ರಶೇಖರ ವಾರದ ಮತ್ತು ಸಿದ್ದಣ್ಣಗೌಡ ಕಾಡಂನೋರ ಅವರು ಜ್ಯೋತಿ ಬೆಳಗಿಸುವರು’ ಎಂದರು.

‘ವಿಶೇಷ ಆಹ್ವಾನಿತರಾಗಿ ವಕೀಲ ಲಕ್ಕವಳ್ಳಿ ಎಸ್. ಮಂಜುನಾಥ, ಮುಖಂಡರಾದ ಅಮೃತರಾವ್ ಚಿಮಕೋಡ, ಬಿ.ಎಸ್. ಮಾಲಗತ್ತಿ, ಯಲ್ಲಪ್ಪ ಹೆಗಡಿ, ವಿಶ್ವನಾಥ ನೀಲಹಳ್ಳಿ, ಪ್ರಭುಲಿಂಗ ವಾರದ, ಭೀಮಶಪ್ಪ ಜೇಗರ, ಬಸವರಾಜಪ್ಪ ಮಂದಕಲ್, ಸಾಯಿಬಣ್ಣ ಕೆಂಗುರಿ, ಹೊನ್ನಪ್ಪ ಮುಷ್ಟೂರ, ಭೀಮಣ್ಣ ಮೇಟಿ ಸೇರಿ ಹಲವರು ಪಾಲ್ಗೊಳ್ಳುವರು’ ಎಂದಯ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ನಾಗಪ್ಪಗೌಡ ಶಾಖಾಪುರ, ಮಹಾದೇವಪ್ಪ ಕಣೇಕಲ್, ರೇವಣ್ಣ ಸಿದ್ದಪ್ಪ ಗುಂಡಾಪುರ, ನಾನಗೌಡ ಮೇಟಿ, ಎಸ್.ನಿಜಲಿಂಗಪ್ಪ, ಸಂಗನಗೌಡ ಹುಲಿಕಲ್, ಸಿದ್ದು ಪೂಜಾರಿ, ಭೀಮಣ್ಣಗೌಡ ಸೈದಾಪುರ, ಮಹಾದೇವಪ್ಪ ಹಳ್ಳೂರ್, ಚಂದ್ರಶೇಖರ ಶೆಟಗೇರಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-30-42867442

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.