ಕೆಂಭಾವಿ: ‘ಜಗದ ಜನರು ಜಗದ ಕರ್ತೃ ಜಗದೀಶನ ಜಪಿಸುವ ಮಹದಾಸೆ ಇಟ್ಟುಕೊಂಡು ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿ ಮುನ್ನಡೆಸುತ್ತಿರುವ ಚನ್ನಬಸವ ಶಿವಾಚಾರ್ಯರ ಕಾರ್ಯ ಸ್ತುತ್ಯಾರ್ಹ’ ಎಂದು ಯಾದಗಿರಿಯ ಮಲ್ಲಿಕಾರ್ಜುನ ಶಾಸ್ತ್ರಿ ಹೇಳಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶ್ರೀ ಗುರುಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ಶುಕ್ರವಾರ ಸಂಜೆ ಜರುಗಿದ ಮಾಸಿಕ ಹುಣ್ಣಿಮೆಯ ಶಿವಾನುಭವ, ಸಂಗೀತ ಗೋಷ್ಠಿ ಉದ್ಘಾಟಿಸಿ ಉಪನ್ಯಾಸ ನೀಡಿದರು.

‘ಬಡವರ ಸೇವೆಯಲ್ಲಿ, ರೋಗಿಯ ಆರೈಕೆಯಲ್ಲಿ, ಮಾತಾಪಿತರ ಸನ್ನಿಧಿಯಲ್ಲಿ ಹೀಗೆ ಜಗದಗಲ, ಮುಗಿಲಗಲ, ಪ್ರತಿಯೊಂದು ವಸ್ತುವಿನಲ್ಲಿ ದೇವರಿದ್ದಾನೆ. ಭಗವಂತನ ಸಾಕ್ಷಾತ್ಕಾರಕ್ಕೆ ಬಡತನ ಅಡ್ಡಿಯಾಗದು’ ಎಂದು ಹೇಳಿದರು.

‘ಹಿರೇಮಠ ಸಂಸ್ಥಾನದಲ್ಲಿ ಜರುಗುವ ಮಾಸಿಕ ಹುಣ್ಣಿಮೆಯ ಶಿವಾನುಭವ ಮತ್ತು ಸಂಗೀತ ಗೋಷ್ಠಿ ಸಂಸಾರದಿಂದ ಸದ್ಗತಿ ಹೊಂದಲು ಪ್ರೇರಣೆ ನೀಡುತ್ತದೆ. ಸದ್ಭಕ್ತರು ಹುಣ್ಣಿಮೆಯ ಸತ್ಸಂಗದ ಸದುಪಯೋಗ ಪಡಿಸಿಕೊಂಡು ಸನ್ಮಾರ್ಗದಲ್ಲಿ ನಡೆದು ಸದ್ಗುರುವಿನ ಕೃಪೆಗೆ ಪಾತ್ರರಾಗಿ’ ಎಂದು ನುಡಿದರು.

ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರು ಮಾತನಾಡಿ, ‘ದಂಡ ವಿಧಿಸುವ ಅಧಿಕಾರ ಇದ್ದರೂ ದಂಡ ವಿಧಿಸದ ದಯಾಳುವೇ ಗುರು. ದೇವ ಸ್ವರೂಪರು, ಲಿಂಗಾಂಗ ಸಾಮರಸ್ಯದ ಸಾಧು ಸಂತರು, ದಾಸ ಶ್ರೇಷ್ಠರು, ಮಹಾತ್ಮರು, ಶಿವಶರಣರು ಇವರೆಲ್ಲರು ತೋರಿದ ಮಾರ್ಗದಲ್ಲಿ ಸಾಗಿದರೆ ಬದುಕು ಸಾರ್ಥಕ’ ಎಂದು ಹೇಳಿದರು.

ಸೋಮನಾಥ ಯಾಳಗಿ, ಯಮನೇಶ ಯಾಳಗಿ ಹಾಗೂ ಶಶಿಧರ ಯಾಳಗಿ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಪ್ರಮುಖರಾದ ನಿಂಗನಗೌಡ ದೇಸಾಯಿ, ನಿಜಗುಣ ವಿಶ್ವಕರ್ಮ ಸೇರಿದಂತೆ ಮಹಿಳೆಯರು, ಮಕ್ಕಳು, ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಉಪಸ್ಥಿತರಿದ್ದರು. ಯಂಕನಗೌಡ ಪಾಟೀಲ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-30-604883546

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.