ಕೆಂಭಾವಿ: ನಗನೂರ ಗ್ರಾಮದಲ್ಲಿ ಭಾನುವಾರ ಹೊಲದಲ್ಲಿರುವ ಕೃಷಿ ಹೊಂಡದಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ಕು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಘಟನೆ ತಿಳಿದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹಾಗೂ ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಸೋಮವಾರ ಮೃತರ ಮನೆಗೆ ಭೇಟಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಗ್ರಾಮದ ಸುರಪುರ ರಸ್ತೆಯ ಜಮೀನಿನಲ್ಲಿರುವ ಕೃಷಿ ಹೊಂಡದಲ್ಲಿ ಮುಳುಗಿ ಕಿರಣ (6), ಬಸಮ್ಮ (11), ಶರತ್ (6), ಹನುಮೇಶ (7) ಎಂಬ ನಾಲ್ಕು ಪುಟ್ಟ ಕಂದಮ್ಮಗಳು ಜಲಸಮಾಧಿಯಾಗಿದ್ದರು. ಸೋಮವಾರ ಗ್ರಾಮಕ್ಕೆ ಆಗಮಿಸಿದ ಸಚಿವರು, ಮೊದಲು ಮಕ್ಕಳನ್ನು ಬಲಿಪಡೆದ ಕೃಷಿ ಹೊಂಡ ವೀಕ್ಷಣೆ ಮಾಡಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಇರುವ ಕೃಷಿ ಹೊಂಡಗಳನ್ನು ಕೂಡಲೇ ಮುಚ್ಚುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಮೃತರ ಮನೆಗೆ ತೆರಳಿ ಮೃತ ಬಾಲಕರ ತಂದೆ-ತಾಯಿ, ಪೋಷಕರ ದುಃಖ ಕಣ್ಣಾರೆ ಕಂಡ ಸಚಿವ ದರ್ಶನಾಪುರ ಅವರು ಕೆಲಕಾಲ ಭಾವುಕರಾಗಿದರು, ಅವರ ಕಣ್ಣಾಲಿಗಳು ಸಹ ತುಂಬಿ ಬಂದವು.

ಇಂತಹ ಕಹಿ ಘಟನೆ ಆಗಬಾರದಿತ್ತು. ದುರದೃಷ್ಟವಶಾತ್ ದುರಂತ ನಡೆದಿದೆ. ಭಗವಂತ ನಾಲಕ್ಕು ಮಕ್ಕಳಿಗೆ ಸದ್ಗತಿ ನೀಡಲಿ ಎಂದು ಪ್ರಾರ್ಥಿಸಿ, ಸಚಿವರು ವೈಯಕ್ತಿಕವಾಗಿ ₹1 ಲಕ್ಷ ಪರಿಹಾರವನ್ನು ಮೃತರ ಕುಟುಂಬಕ್ಕೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಒಂದೇ ಕುಟುಂಬದ ನಾಲ್ಕು ಮಕ್ಕಳನ್ನು ಕಳೆದುಕೊಂಡ ಪಾಲಕರ ದುಃಖವನ್ನು ಯಾವುದೇ ರೀತಿಯಿಂದ ಸಮಾಧಾನಪಡಿಸಲು ಅಸಾಧ್ಯ. ವೈಯಕ್ತಿಕವಾಗಿ ಕುಟುಂಬಕ್ಕೆ ಅಲ್ಪ ಪರಿಹಾರ ನೀಡಿದ್ದೇನೆ’ ಎಂದು ತಿಳಿಸಿದರು.

‘ಮುಂದುವರೆದು, ಈಗಾಗಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿದ್ದು, ಇಲಾಖೆಯಿಂದ ಮಕ್ಕಳಿಗೆ ದೊರಕುವ ಪರಿಹಾರದ ಮೊತ್ತವನ್ನು ಅತೀ ಶೀಘ್ರದಲ್ಲಿ ನೀಡಲಾಗುವುದು ಮತ್ತು ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರದ ಮೊತ್ತ ತಲುಪಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು’ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ವಣಕ್ಯಾಳ, ತಾ.ಪಂ ಇಒ ಬಸವರಾಜ ಸಜ್ಜನ, ಶಹಾಪೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಹಾಂತ ಚಂದಾಪೂರ, ಹಳ್ಳೆಪ್ಪ ಹವಾಲ್ದಾರ್, ಸಿಆರ್ಪಿ ಶ್ರೀಶೈಲ ಪಸೂಡಿ ಸೇರಿದಂತೆ ಮತ್ತಿತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-30-1448848269

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.