ಯಾದಗಿರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಕೆಆರ್ಟಿಸಿ) ಹೊರಗುತ್ತಿಗೆ ಬಸ್ ಚಾಲಕರ ಎರಡು ತಿಂಗಳ ಬಾಕಿ ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಬಸ್ ಚಾಲಕರು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿನ ಡಿಪೊ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ಮಾಡಿ, ಕರ್ತವ್ಯದಿಂದ ದೂರು ಉಳಿದರು.

ಹೊರಗುತ್ತಿಗೆಯ ಚಾಲಕರು ಡಿಪೊ ಮುಂದೆ ಜಮಾವಣೆಗೊಂಡು ಕೆಕೆಆರ್ಟಿಸಿ ಹಾಗೂ ಏಜೆನ್ಸಿ ನಡೆಗೆ ಬೇಸರ ವ್ಯಕ್ತಪಡಿಸಿದರು. ಎರಡು ತಿಂಗಳ ವೇತನ ಹಾಗೂ ಮೂರು ತಿಂಗಳ ಪಿಎಫ್ ಪಾವತಿ ಮಾಡಿಲ್ಲ ಎಂದು ಆರೋಪಿಸಿದರು.

ಈ ವೇಳೆ ಮಾತನಾಡಿದ ಚಾಲಕ ಬಸವರಾಜ, ‘ಹೊರಗುತ್ತಿಗೆ ಚಾಲಕರ ವೇತನ ಕೊಡದೆ ಎರಡು ತಿಂಗಳು ಕಳೆದಿವೆ. ನಾಳೆ ಕೊಡುತ್ತೇವೆ, ನಾಡಿದ್ದು ಕೊಡುತ್ತೇವೆ ಎಂದು ನೆಪ ಹೇಳುತ್ತಿದ್ದಾರೆ ಹೊರತು ಸಂಬಳ ಕೊಡುತ್ತಿಲ್ಲ. ಮಕ್ಕಳ ಶಾಲೆ ಆರಂಭವಾಗಿದ್ದು, ಶಾಲಾ ಶುಲ್ಕ ಕಟ್ಟಲು ನಮ್ಮಲ್ಲಿ ಹಣವಿಲ್ಲ. ಕುಟುಂಬ ನಿರ್ವಹಣೆಯೂ ಕಷ್ಟವಾಗುತ್ತಿದೆ’ ಎಂದರು.

‘ಹೊರಗುತ್ತಿಗೆಯ ಏಜೆನ್ಸಿಯವರಿಗೆ ಕೇಳಿದರೆ ನಿಮ್ಮ ಡಿಪೊದವರು ಸಂಬಳ ಕೊಡದೆ ಇದ್ದರೆ ನಾವೇನು ಮಾಡೋಣ, ಕೆಕೆಆರ್ಟಿಸಿ ಅಧಿಕಾರಿಗಳನ್ನು ಕೇಳಿ ಎನ್ನುತ್ತಾರೆ. ಡಿಪೊದಲ್ಲಿ ಕೇಳಿದರೆ, ಸಂಬಳ ಕೊಡಲು ದಿನಗಳನ್ನು ಮುಂದೂಡುತ್ತಿದ್ದಾರೆ. ಸಂಬಳ ಕೊಡುವಂತೆ ಒತ್ತಡ ಹಾಕಿದರೆ ಕೆಲಸದಿಂದ ತೆಗೆಯುವ ಬೆದರಿಕೆ ಹಾಕಿ ದೌರ್ಜನ್ಯ ಮಾಡುತ್ತಿದ್ದಾರೆ. ಹಣ ಕೊಡದೆ ದುಡಿಸಿಕೊಳ್ಳುವುದರ ಜೊತೆಗೆ ಧಮ್ಕಿ ಹಾಕಿ ಕೆಲಸಕ್ಕೂ ಕರೆಯಿಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

‘ಹೊರಗುತ್ತಿಗೆಯವರಿಗೆ ತಿಂಗಳಿಗೆ ₹ 30 ಸಾವಿರ ವೇತನ ಇದೆ. 30 ದಿನ ಬಸ್ ಓಡಿಸಿದರೆ ₹ 23 ಸಾವಿರ ಹಾಕುತ್ತಾರೆ. ಒಂದು ವೇಳೆ 25 ಕೆಲಸ ಮಾಡಿದರೆ ₹ 18 ಸಾವಿರ ಪಾವತಿ ಮಾಡುತ್ತಾರೆ. ಪಿಎಫ್ ಸಹ ಸರಿಯಾಗಿ ಪಾವತಿ ಮಾಡುತ್ತಿಲ್ಲ. ಹಣ ಇಲ್ಲದೆ ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಅಧಿಕಾರಿಗಳು ಆದಷ್ಟು ಬೇಗ ಬಾಕಿ ವೇತನ ಪಾವತಿ ಮಾಡಿ, ನಮ್ಮನ್ನು ಸಂಕಷ್ಟದಿಂದ ಪಾರುಮಾಡಬೇಕು’ ಎಂದು ಕೋರಿದರು.

ಪ್ರತಿಭಟನೆಯಲ್ಲಿ ಹೊರಗುತ್ತಿಗೆಯ ಚಾಲಕರಾದ ಬಸವರಾಜ ಯರಗೋಳ, ಸಿದ್ದಣ್ಣ, ನಿಂಗರಾಜ, ಸಿದ್ದಣ್ಣಗೌಡ, ವೆಂಕಟೇಶ, ಅರುಣಕುಮಾರ, ವೀರೇಶ, ಭೀಮಾಶಂಕರ, ವಿಜಯಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-30-402779336

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.