ಹುಣಸಗಿ: ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಗ್ರಾಮದೇವತೆ ಶ್ರೀದೇವಿ ದೇವಸ್ಥಾನದಲ್ಲಿ ಉಡಿ ತುಂಬುವ ಕಾರ್ಯಕ್ರಮ ಶ್ರದ್ಧಾಭಕ್ತಿ ನಡೆಯಿತು.

ಸಂಪ್ರದಾಯದಂತೆ ಪ್ರತಿ ವರ್ಷ ಮುಂಗಾರು ಮಳೆ ಆರಂಭದ ಪೂರ್ವದಲ್ಲಿ ಹಮ್ಮಿಕೊಳ್ಳಲಾಗುವ ಶ್ರೀದೇವಿಯ ಉಡಿ ತುಂಬುವ ಕಾರ್ಯಕ್ರಮದಲ್ಲಿ ಗ್ರಾಮದ ಎಲ್ಲ ಭಕ್ತರು ಭಾಗವಹಿಸುವ ಮೂಲಕ ದೇವಿಗೆ ಉಡಿ ತುಂಬಿ ದರ್ಶನ ಪಡೆದುಕೊಂಡರು.

ಮಂಗಳವಾರ ಬೆಳಿಗ್ಗೆ ಗಂಗಾಸ್ನಾನದ ಬಳಿಕ ದೇವಸ್ಥಾನದ ಮುಂಭಾಗದ ಪ್ರಾಗಂಣದಲ್ಲಿ ವಿರಾಜಮಾನಳಾಗಿದ್ದ ದೇವತೆಗೆ ವಿಶೇಷ ಅಲಂಕಾರ ನಡೆಯಿತು. ನಂತರ ಗ್ರಾಮದ ಅರಸು ಮನೆತನದವರು, ವತನದಾರರು ಗ್ರಾಮದ ಪ್ರಮುಖರು ಹಾಗೂ ರೈತರು ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಆಗಮಿಸುವ ಮೂಲಕ ದೇವತೆಗೆ ದೈವದ ಸೀರೆಯನ್ನು ಉಡಿಸುವ ಕಾರ್ಯವನ್ನು ಶ್ರದ್ದಾಭಕ್ತಿಯಿಂದ ನೆರವೇರಿಸಿದರು.

ಈ ವೇಳೆ ದೇವಸ್ಥಾನ ಅರ್ಚಕರು ದೇವತೆಗೆ ವಿಶೇಷ ಪೂಜೆಯನ್ನು ಮಾಡಿ ದೈವದ ಸೀರೆಯನ್ನು ಉಡಿಸಿ ಮಹಾಮಂಗಳಾರುತಿಯನ್ನು ಸಲ್ಲಿಸಿದ ತರುವಾಯ ಭಕ್ತರು ದೇವತೆಗೆ ಉಡಿ ತುಂಬಿದರು.

ಈ ಸಂದರ್ಭದಲ್ಲಿ ಅರಸು ಮನೆತನದವರಾದ ರಾಜಾ ಸುಜಯಸಿಂಹನಾಯಕ, ರಾಣಿ ರಂಗಮ್ಮ ಜಹಾಗಿರದಾರ, ವಿನಾಯಕ ನಾಯಕ, ಸಂಗನಬಸವಸ್ವಾಮಿ ಮಹಲಿನಮಠ, ರಂಗನಾಥ ದೊರಿ, ಶಾಮಸುಂದರ ಜೋಶಿ, ವೀರಸಂಗಪ್ಪ ಹಾವೇರಿ, ಬಸನಗೌಡ ಮಾಲಿಗೌಡ, ಸೋಮಲಿಂಗಪ್ಪ ದೊರಿ, ಕನಕು ಜಿರಾಳ, ವೀರೇಶ ದೊರಿ, ದೇವು ಗೋಪಾಳಿ, ಮಲ್ಲು ನವಲಗುಡ್ಡ, ರವಿಂದ್ರ ಅಂಗಡಿ, ಬೊಮ್ಮಣ್ಣ ಪತ್ತಾರ, ಮುದಿಗೌಡಪ್ಪ ಪೊಲೀಸ್ ಪಾಟಿಲ, ವೀರಸಂಗಪ್ಪ ಅಂಬ್ಲಿಹಾಳ, ಮೋಹನ ಪಾಟೀಲ, ಬಸಲಿಂಗಯ್ಯ ಮಠ, ಹಣಮಂತ್ರಾಯ ದೊರಿ, ಸಂಗಪ್ಪ ದೊರಿ,ಸಾನಸಪ್ಪ ನವಲಗುಡ್ಡ, ಸಂಗಣ್ಣ ಕರಬಸಪ್ಪನವರ, ಬಸವರಾಜ ಹೊಸಪೂಜಾರಿ, ಮಲ್ಲಣ್ಣ ಹೂಗಾರ, ನಿಜಲಿಂಗಪ್ಪ ಬಡಿಗೇರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-30-420922725

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.