ಗುರುಮಠಕಲ್: ಕೊಂಕಲ್ ಗ್ರಾಮದ ಹೊರವಲಯದಲ್ಲಿ ಶನಿವಾರ ಅಗ್ನಿ ಅವಘಡದಿಂದ ಸುಮಾರು 900 ಟ್ರ್ಯಾಕ್ಟರ್ ಮೇವಿನ ಬಣವೆ ಸುಟ್ಟು ಕರಕಲಾಗಿದೆ.

ನಂದೇಪಲ್ಲಿ ಗ್ರಾಮದ ಮೇವಿನ ವ್ಯಾಪಾರಿ ಗಜಲಪ್ಪ ನರಸಿಂಗಪ್ಪ ಅವರಿಗೆ ಸೇರಿದ ಬಣವೆ ಬೆಂಕಿಗೆ ಆಹುತಿಯಾಗಿದೆ. ಸುತ್ತಲಿನ ಗ್ರಾಮಗಳಿಂದ ಜೋಳದ ಮೇವು ಖರೀದಿಸಿ ತೆಲಂಗಾಣದಲ್ಲಿ ಮಾರಾಟ ಮಾಡಲು ಕೊಂಕಲ್ ಗ್ರಾಮದ ಹೊರವಲಯದಲ್ಲಿ ಬಣವೆ ಹಾಕಿ ಇರಿಸಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಸಂಜೆ ವೇಳೆ ಬಣವೆಯಲ್ಲಿ ಹೊಗೆಯಾಡುತ್ತಿತ್ತು. ಹತ್ತಿರ ಹೋಗುತ್ತಿದ್ದಂತೆ ಬೆಂಕಿಯು ತೀವ್ರಗೊಂಡಿತು. ಮಾಹಿತಿ ನೀಡುತ್ತಿದ್ದಂತೆ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದರು. ಬಣವೆ ಹೋಗಲು ರಸ್ತೆ ಇಲ್ಲದೆ ಬೇರೊಂದು ಮಾರ್ಗದ ಮೂಲಕ ಹೋಗಿ ತಲುಪುವಷ್ಟರಲ್ಲಿ ಹಾನಿಯ ಪ್ರಮಾಣ ಹೆಚ್ಚಾಗಿದೆ ಎಂದು ಕೊಂಕಲ್ ಗ್ರಾಮಸ್ಥರೊಬ್ಬರು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-30-1450198085

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.