ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: 255 ಜನರಿಗೆ ಕೋವಿಡ್

4,377ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ
Last Updated 21 ಆಗಸ್ಟ್ 2020, 16:22 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಶುಕ್ರವಾರ ಕೊರೊನಾ ಸ್ಫೋಟವಾಗಿದ್ದು, ಬರೋಬ್ಬರಿ255 ಜನರಲ್ಲಿ ಕೋವಿಡ್‌ ಪತ್ತೆಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ4,377ಕ್ಕೆ ಜಿಗಿದಿದೆ. ಕಳೆದ ಎರಡು ದಿನಗಳಿಂದ ಎರಡು ಅಂಕಿಗಳಲ್ಲಿ ಪತ್ತೆಯಾಗಿದ್ದ ಕೊರೊನಾ ಸೋಂಕು ಈಗ ಮೂರು ಅಂಕಿಗಳಲ್ಲಿ ಕಾಣಿಸಿಕೊಂಡಿದೆ.

ಶುಕ್ರವಾರ ಗುಣಮುಖರಾದ 31 ಜನರಲ್ಲಿ ಯಾದಗಿರಿತಾಲ್ಲೂಕಿನಲ್ಲಿ 15, ಶಹಾಪುರ ತಾಲ್ಲೂಕಿನಲ್ಲಿ16 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟಾರೆ2,882 ಜನ ಚೇತರಿಸಿಕೊಂಡಿದ್ದಾರೆ.1,465 ಸಕ್ರಿಯ‍ಪ್ರಕರಣಗಳಿದ್ದು, ಒಟ್ಟಾರೆ ಜಿಲ್ಲೆಯಲ್ಲಿ30 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ.

ಶಹಾಪುರದಲ್ಲಿ ಹೆಚ್ಚು ಪತ್ತೆ: ಶಹಾಪುರ ತಾಲ್ಲೂಕಿನಲ್ಲಿಅತಿ ಹೆಚ್ಚು 98 ಪ್ರಕರಣಗಳು ಪತ್ತೆಯಾಗಿವೆ. ಯಾದಗಿರಿ ತಾಲ್ಲೂಕಿನಲ್ಲಿ 49, ಗುರುಮಠಕಲ್‌ತಾಲ್ಲೂಕಿನಲ್ಲಿ 15, ವಡಗೇರಾತಾಲ್ಲೂಕಿನಲ್ಲಿ 13, ಸುರಪುರತಾಲ್ಲೂಕಿನಲ್ಲಿ 59, ಹುಣಸಗಿ ತಾಲ್ಲೂಕಿನಲ್ಲಿ21 ಸೇರಿದಂತೆ 255 ಪ್ರಕರಣಗಳು ಪತ್ತೆಯಾಗಿವೆ.ಶಹಾಪುರದ ಜೆಸ್ಕಾಂ ಸಿಬ್ಬಂದಿಯಲ್ಲಿ ಕೋವಿಡ್‌ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಚೇರಿಯನ್ನು ಸೀಲ್‌ ಡೌನ್‌ ಮಾಡಲಾಗಿದೆ.

1,465 ಸಕ್ರಿಯ ‍ಪ್ರಕರಣಗಳಲ್ಲಿಯಾದಗಿರಿ ತಾಲ್ಲೂಕಿನಲ್ಲಿ 322, ಗುರುಮಠಕಲ್‌ ತಾಲ್ಲೂಕಿನಲ್ಲಿ 52, ಶಹಾಪುರ ತಾಲ್ಲೂಕಿನಲ್ಲಿ 545, ವಡಗೇರಾ ತಾಲ್ಲೂಕಿನಲ್ಲಿ 70, ಸುರಪುರ ತಾಲ್ಲೂಕಿನಲ್ಲಿ 236, ಹುಣಸಗಿ ತಾಲ್ಲೂಕಿನಲ್ಲಿ 240 ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT