ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಮಾರುಕಟ್ಟೆಗೆ ಲಗ್ಗೆ ಇಟ್ಟ ಮಾವು

ನಗರದ ಪ್ರಮುಖ ವೃತ್ತಗಳಲ್ಲಿ ‘ಹಣ್ಣುಗಳ ರಾಜ’ನ ಘಮಲು, ಆಂಧ್ರದಿಂದ ಆಮದು
Last Updated 4 ಮೇ 2022, 19:30 IST
ಅಕ್ಷರ ಗಾತ್ರ

ಯಾದಗಿರಿ: ‘ಹಣ್ಣುಗಳ ರಾಜ’ ಮಾವು ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ನಗರದ ಪ್ರಮುಖ ವೃತಗಳಲ್ಲಿ ತಳ್ಳುಗಾಡಿಗಳಲ್ಲಿಅಲ್ಫಾನ್ಸೋ, ಕೇಸರ್‌, ಬೆನ್‌ಶಾನ್‌, ದಶೆರಿ, ತೋತಾಪುರಿ ಮಾವಿನ ಹಣ್ಣುಗಳು ಗಮನ ಸೆಳೆಯುತ್ತಿವೆ.

ಹಣ್ಣುಗಳ ದರ: ಲಾಲ್‌ಬಾಗ್‌ ಕೆ.ಜಿ.ಗೆ ₹80, ತೋತಾಪುರಿ ₹50, ಕೇಸರ್ ₹140, ದೇಶರಿ 150, ಅಲ್ಫಾನ್ಸೋ ₹100, ಕೇಸರ್‌ ₹120 ಹೀಗೆ ಒಂದೊಂದು ಕಡೆ ಒಂದು ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇನ್ನೂ ರುಮನಿಯಾ, ರಸಪುರಿ, ಬಾದಾಮ್, ಮಲ್ಲಿಕಾ ಮಾವಿನ ಹಣ್ಣು ಮಾರುಕಟ್ಟೆ ಪ್ರವೇಶಿಸಿಲ್ಲ. ಹೆಚ್ಚು ಹಣ್ಣುಗಳು ಮಾರುಕಟ್ಟೆಗೆ ಬಂದರೆ ದರವೂ ಇಳಿಕೆಯಾಗುತ್ತಿದೆ ಎನ್ನುತ್ತಾರೆ ಮಾವಿನ ಹಣ್ಣು ವ್ಯಾಪಾರಿಗಳು.

ಆಂಧ್ರದಿಂದ ಆಮದು: ಮಾವಿನ ಹಣ್ಣುಗಳು ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ನಗರದ ಮಹಾತ್ಮಾ ಗಾಂಧಿ ತರಕಾರಿ ಮಾರುಕಟ್ಟೆ, ಹಳೆ ಬಸ್‌ ನಿಲ್ದಾಣ ಬಳಿ ಸಗಟು ವ್ಯಾಪಾರಿಗಳಿದ್ದು, ಆಮದು ಮಾಡಿಕೊಳ್ಳುತ್ತಿದ್ದಾರೆ. ಮಾವಿನ ಹಣ್ಣು ಕ್ವಿಂಟಲ್‌ಗೆ ಸಗಟು ದರದಲ್ಲಿ ₹8ರಿಂದ ₹10 ಸಾವಿರ ಇದೆ.

ಸಗಟು ವ್ಯಾಪಾರಿಗಳು ತಳ್ಳುಗಾಡಿಯವರಿಗೆ ಮಾರಾಟಕ್ಕೆ ಹಂಚಿಕೆ ಮಾಡುತ್ತಿದ್ದಾರೆ. ಇದರಿಂದ ಎಲ್ಲ ಕಡೆಯೂ ತಳ್ಳುಗಾಡಿಗಳಲ್ಲಿ ಹಣ್ಣುಗಳನ್ನು ಮಾರಾಟಕ್ಕೆ ಇಟ್ಟಿರುವುದು ಕಾಣ ಬರುತ್ತಿದೆ.

ಹೊಸ ಮತ್ತು ಹಳೆ ಬಸ್‌ ನಿಲ್ದಾಣ, ಗಾಂಧಿ ವೃತ್ತ, ಹೊಸಳ್ಳಿ ಕ್ರಾಸ್‌, ರೈಲ್ವೆ ಸ್ಟೇಷನ್‌ ರಸ್ತೆಯ ತರಕಾರಿ ಮಾರುಕಟ್ಟೆ, ರೈಲ್ವೆ ನಿಲ್ದಾಣ, ತಹಶೀಲ್ದಾರ್ ಕಚೇರಿ, ಗಂಜ್‌ ವೃತ್ತ ಹೀಗೆ ನಗರದ ವಿವಿಧ ಪ್ರದೇಶಗಳಲ್ಲಿ ಮಾವಿನ ಹಣ್ಣು ಮಾರಾಟ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ಕೇಸರ್‌, ಬೆನ್‌ಶಾನ್‌, ದಶೆರಿ, ಮಲ್ಲಿಕಾ, ಅಲ್ಫಾನ್ಸೋ, ಖಾದರ್‌ ಎನ್ನುವ ತಳಿಗಳನ್ನು ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ‌‌ಈ ಬಾರಿ ಸ್ಥಳೀಯವಾಗಿ ಮಾವಿನ ಹಣ್ಣು ಹೆಚ್ಚು ಇಳುವರಿ ಇಲ್ಲದಿದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಇದೆ. ಉಳಿದಂತೆ ರಸಪುರಿ, ಬಾದಾಮ್, ತೊತಾಪುರಿ ಹಣ್ಣುಗಳನ್ನು ಅಕ್ಕಪಕ್ಕದ ಜಿಲ್ಲೆ, ರಾಜ್ಯಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಹೊರ ರಾಜ್ಯದ ಹಣ್ಣುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

ಮಾವಿನಲ್ಲಿ ವಿಟಮಿನ್ ಸಿ, ಫೈಬರ್ ಮತ್ತು ಕ್ಯಾಲೋರಿ ಹೆಚ್ಚಾಗಿದೆ. ಹೀಗಾಗಿ ಮಾರುಕಟ್ಟೆಗಳಲ್ಲೂ ಬೇಡಿಕೆ ಹೆಚ್ಚಿದೆ.

***

ಕಳೆದ ಎರಡು ವಾರಗಳಿಂದ ಮಾವಿನ ಹಣ್ಣು ಮಾರುಕಟ್ಟೆಗೆ ಬಂದಿದ್ದು, ಭರ್ಜರಿ ಮಾರಾಟವಾಗುತ್ತಿದೆ. ಮುಂದಿನ ವಾರ ಹೆಚ್ಚು ಬಂದರೆ ದರವೂ ಇಳಿಕೆಯಾಗಲಿದೆ
-ಮೆಹಬೂಬ್‌, ಹಣ್ಣುಗಳ ವ್ಯಾಪಾರಿ

***

ತಳ್ಳುಗಾಡಿಗಳಲ್ಲಿ ಮಾವಿನ ಹಣ್ಣು ಇಟ್ಟು ವ್ಯಾಪಾರ ಮಾಡಲಾಗುತ್ತಿದೆ. ಹಳೆ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಕೊಂಡೊಯ್ಯುತ್ತಿದ್ದಾರೆ
-ಆಕಾಶ, ಹಣ್ಣುಗಳ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT