ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ವಾರದ ಮಾರುಕಟ್ಟೆ ನೋಟ: ನುಗ್ಗೆಕಾಯಿ, ಆಲೂಗಡ್ಡೆ ದರ ಇಳಿಕೆ

ಬಹುತೇಕ ತರಕಾರಿ, ಸೊಪ್ಪುಗಳ ದರವೂ ಬೆಲೆ ಸ್ಥಿರ
Last Updated 4 ಫೆಬ್ರುವರಿ 2023, 22:30 IST
ಅಕ್ಷರ ಗಾತ್ರ

ಯಾದಗಿರಿ: ಕಳೆದ ಎರಡು ವಾರಗಳಿಂದ ಏರುಮುಖವಾಗಿದ್ದ ತರಕಾರಿ, ಸೊಪ್ಪುಗಳ ದರ ತುಸು ಇಳಿಕೆಯಾಗಿದೆ.

ಆಲೂಗಡ್ಡೆ, ಬದನೆಕಾಯಿ, ದೊಣ್ಣೆ ಮೆಣಸಿನಕಾಯಿ, ಗಜ್ಜರಿ, ಬಿಟ್‌ರೂಟ್‌, ಆವರೆಕಾಯಿ ಕೆಜಿಗೆ ₹5 ರಿಂದ 10 ಇಳಿಕೆಯಾಗಿದೆ.

ಹಲವು ತಿಂಗಳಿಂದ ಬೆಲೆ ಏರಿಕೆಯಾಗಿದ್ದ ನುಗ್ಗೆಕಾಯಿ ದರ ಇಳಿಕೆಯಾಗಿದ್ದು, ಗ್ರಾಹಕರಿಗೆ ಖುಷಿಯಾಗಿದೆ. ₹300 ಕೆಜಿ ಇದ್ದ ನುಗ್ಗೆ ಈಗ ₹100 ಕೆಜಿಯಾಗಿದೆ. ಸಗಟು ಬೆಲೆಯಲ್ಲಿ ₹100 ಇದ್ದರೆ, ಚಿಲ್ಲರೆ ₹120 ದರವಿದೆ. ಮಾರುಕಟ್ಟೆಯಲ್ಲಿ ನುಗ್ಗೆಕಾಯಿ ಮಾರಾಟಕ್ಕೆ ಇಡಲಾಗಿದೆ.

ಟೊಮೆಟೊ, ಈರುಳ್ಳಿ, ಬೆಂಡೆಕಾಯಿ, ಎಲೆಕೋಸು, ಹೂಕೋಸು, ಚವಳೆಕಾಯಿ, ಬೀನ್ಸ್, ಸೌತೆಕಾಯಿ, ಮೂಲಂಗಿ, ಮೆಣಸಿನಕಾಯಿ, ಸೋರೆಕಾಯಿ, ಹೀರೆಕಾಯಿ ಬೆಲೆ ಸ್ಥಿರವಾಗಿದೆ. ಹಾಗಲಕಾಯಿ ಕೆಜಿಗೆ ₹60-70 ಬೆಲೆ ಇದ್ದು, ಇದು ಮಾತ್ರ ₹5ರಿಂದ ₹10 ದರ ಏರಿಕೆಯಾಗಿದೆ.

ಮಾರುಕಟ್ಟೆಗೆ ಬಾರದ ತೊಂಡೆಕಾಯಿ: ಕಳೆದ ಒಂದು ವಾರದಿಂದ ತೊಂಡೆಕಾಯಿ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಕೆಜಿಗೆ ₹60ರಿಂದ 70 ದರವಿದ್ದು, ಆವಕ ಇಲ್ಲದ ಕಾರಣ ಮಾರುಕಟ್ಟೆಯಲ್ಲಿ ಕಂಡು ಬರುತ್ತಿಲ್ಲ. ಈರುಳ್ಳಿ ಸೊಪ್ಪು, ಹಸಿ ಬಟಾಣಿ ಕೆಜಿಗೆ ₹60ರಿಂದ 70 ದರವಿದೆ.

ಸೊಪ್ಪುಗಳ ದರ ಸ್ಥಿರ: ಸೊಪ್ಪುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಮೆಂತ್ಯೆ, ಸಬ್ಬಸಗಿ, ಪಾಲಕ್‌, ಪುಂಡಿ ಪಲ್ಯೆ, ರಾಜಗಿರಿ ಸೊಪ್ಪು ದೊಡ್ಡ ಗಾತ್ರದ ಒಂದು ಕಟ್ಟು ಸೊಪ್ಪುಗಳು ಚಿಕ್ಕ ಕಟ್ಟು ₹5, ದೊಡ್ಡ ಕಟ್ಟು ₹10 ದರವಿದೆ. ಕೊತಂಬರಿ ₹10–15 ಒಂದು ಕಟ್ಟು, ಪುದೀನಾ ₹10–15 ಒಂದು ಕಟ್ಟು ಮಾರಾಟ ಮಾಡಲಾಗುತ್ತಿದೆ.

ಕರಿಬೇವು ₹90–100 ಕೆಜಿ, ಬೆಳ್ಳುಳ್ಳಿ ₹100–120, ಶುಂಠಿ ₹100–120 ದರ ಸ್ಥಿರವಾಗಿದೆ. ನಿಂಬೆಹಣ್ಣು ₹10ಗೆ ನಾಲ್ಕು ಮಾರಾಟ ಮಾಡಲಾಗುತ್ತಿದೆ.

****

ತರಕಾರಿ; ದರ (ಪ್ರತಿ ಕೆ.ಜಿಗೆ ₹ಗಳಲ್ಲಿ)
ಟೊಮೆಟೊ;15–20

ಆಲೂಗಡ್ಡೆ;25–30

ಈರುಳ್ಳಿ;25–30
ಬದನೆಕಾಯಿ;40–50
ಬೆಂಡೆಕಾಯಿ;70–80
ದೊಣ್ಣೆಮೆಣಸಿನಕಾಯಿ;60–70
ಎಲೆಕೋಸು;40–50
ಹೂಕೋಸು;50–60
ಚವಳೆಕಾಯಿ;70–80
ಬೀನ್ಸ್; 60–70
ಗಜ್ಜರಿ;50-60
ಸೌತೆಕಾಯಿ;60–70
ಮೂಲಂಗಿ;40-50
ಮೆಣಸಿನಕಾಯಿ;50-60
ಸೋರೆಕಾಯಿ;40–50
ಬಿಟ್‌ರೂಟ್;50-60
ಹೀರೆಕಾಯಿ;60-70
ಹಾಗಲಕಾಯಿ;60-70
ತೊಂಡೆಕಾಯಿ;60-70
ಅವರೆಕಾಯಿ;60–70

***

ತರಕಾರಿ, ಸೊಪ್ಪುಗಳ ಆವಕ ಹೆಚ್ಚಿದ್ದರಿಂದ ದರವೂ ಕಡಿಮೆಯಾಗಿದೆ. ತಿಂಗಳಗಳ ನಂತರ ನುಗ್ಗೆಕಾಯಿ ದರ ಇಳಿಕೆಯಾಗಿದೆ
ಬಸು ಚಿಂತನಹಳ್ಳಿ, ತರಕಾರಿ ವ್ಯಾಪಾರಿ

***

ಕಳೆದ ಎರಡು ವಾರಗಳಿಂದ ತರಕಾರಿ, ಸೊಪ್ಪುಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಮತ್ತೆ ಯಾವಾಗ ಬೆಲೆ ಹೆಚ್ಚಳವಾಗುತ್ತದೆ ಗೊತ್ತಿಲ್ಲ
ಬಸವರಾಜ ಹೊಸಮನಿ, ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT