ಯಾದಗಿರಿ: ‘ಮಾನಸಿಕ ಕಾಯಿಲೆಗೆ ಮದ್ದು ಇಲ್ಲ ಎನ್ನುವುದು ತಪ್ಪು ಕಲ್ಪನೆ. ಮಾನಸಿಕ ಕಾಯಿಲೆಯನ್ನು ಸಮರ್ಪಕ ಚಿಕಿತ್ಸೆಯಿಂದ ಗುಣಪಡಿಸಬಹದು’ ಎಂದು ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ ಹೇಳಿದರು.

ನಗರ ಹೊರವಲಯದ ‘ಯಿಮ್ಸ್’ ಆಸ್ಪತ್ರೆಯ ಸಭಾಂಗಣದಲ್ಲಿ ಡಾನ್ ಬಾಸ್ಕೊ ಸಮಾಜ ಸೇವಾ ಕೇಂದ್ರ, ಬ್ರೆಡ್ಸ್ ಸಂಸ್ಥೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ‘ಯಿಮ್ಸ್’ ಮನೋವೈದ್ಯಕೀಯ ವಿಭಾಗ ಹಾಗೂ ಮೈಡ್ಸ್ ಯೋಜನೆ ವತಿಯಿಂದ ಆಯೋಜಿಸಿದ್ದ ‘ಜನಸಾಮಾನ್ಯರು ಮತ್ತು ಮಕ್ಕಳ ಮಾನಸಿಕ ಆರೋಗ್ಯ ಚಿಕಿತ್ಸೆ ಕುರಿತ ವೈದ್ಯರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಪ್ರಸ್ತುತ ದಿನಗಳಲ್ಲಿ ಮಾನಸಿಕ ಕಾಯಿಲೆ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯಕ್ಕೂ ಸಮಾನ ಮಹತ್ವ ನೀಡಬೇಕು. ಮಾನಸಿಕ ಕಾಯಿಲೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸಬೇಕಾಗಿದೆ’ ಎಂದರು.

‘ಸಮಯೋಚಿತ ಔಷಧಿ, ಸಮಾಲೋಚನೆ, ಮನರಂಜನೆ, ಉತ್ತಮ ಪರಿಸರ ಹಾಗೂ ಪ್ರೀತಿಯ ವಾತಾವರಣದಿಂದ ಮಾನಸಿಕ ಆರೋಗ್ಯವನ್ನು ಸುಧಾರಿಸಬಹುದು. ಒತ್ತಡ ಅಥವಾ ಮನಸ್ಸಿಗೆ ಬೇಸರವಾದಾಗ ತಕ್ಷಣ ಸಮಾಲೇಚನೆಯ ನೆರವು ಪಡೆಯಬೇಕು’ ಎಂದು ಹೇಳಿದರು.

‘ಟೆಲಿ-ಮನಸ 14416 ರಾಷ್ಟ್ರೀಯ ಸಹಾಯವಾಣಿಯ ಮೂಲಕ ಮನೆಯಿಂದ ಕೌನ್ಸೆಲಿಂಗ್ ಪಡೆಯಬಹುದಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಮಾತನಾಡಿ, ‘ಮಾನಸಿಕ ನೆಮ್ಮದಿ ಹಣದಿಂದ ಮಾತ್ರ ಸಿಗುವುದಿಲ್ಲ. ಇಂದಿನ ದಿನಗಳಲ್ಲಿ ಮಕ್ಕಳಿಂದ ಹಿರಿಯರ ತನಕ ಎಲ್ಲರಿಗೂ ಮಾನಸಿಕ ಆರೋಗ್ಯ ಅತ್ಯವಶ್ಯಕವಾಗಿದೆ’ ಎಂದು ಹೇಳಿದರು.

ಕೇಂದ್ರದ ನಿರ್ದೇಶಕ ಫಾಧರ್ ಶಾಬು ಫ್ರಾನ್ಸಿಸ್ ಮಾತನಾಡಿ, ‘ಶಾಲಾ ಮಕ್ಕಳು, ಶಿಕ್ಷಕರು, ಪೋಷಕರು ಹಾಗೂ ಸಮುದಾಯದ ಸದಸ್ಯರಿಗೆ ಮಾನಸಿಕ ಆರೋಗ್ಯದ ಅರಿವು ಮೂಡಿಸಬೇಕು. ಸಮಾಜದಲ್ಲಿ ಮಾನಸಿಕ ಕಾಯಿಲೆ ಬಗ್ಗೆ ಇರುವ ಕಳಂಕವನ್ನು ಕಡಿಮೆ ಮಾಡುವುದು ಯೋಜನೆಯ ಮುಖ್ಯ ಗುರಿ’ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕಿ ರಿಜ್ವಾನ್ ಆಫ್ರೀನ್, ‘ಯಿಮ್ಸ್’ ಅಧೀಕ್ಷಕ ಡಾ.ಸಂತೋಷ, ಮಕ್ಕಳ ತಜ್ಞ ಡಾ. ಕುಮಾರ ಅಂಗಡಿ, ಡಾ.ಪದ್ಮಾನಂದ ಗಾಯಕವಾಡ, ಡಾ. ಹನುಮರೆಡ್ಡಿ, ಡಾ. ಅಮಿತ್ ಕುಮಾರ್, ಡಾ. ಪ್ರೀತಮ್, ಡಾ. ವಿಜಯಲಕ್ಷ್ಮಿ ಹಾಗೂ ಶರಣಗೌಡ ಉಪಸ್ಥಿತರಿದ್ದರು.

ಆಪ್ತಸಮಾಲೋಚಕ ಸೂರ್ಯಕಾಂತ್ ಸ್ವಾಗತಿಸಿ, ಯೋಜನಾ ಸಂಯೋಜಕ ಶರಣಪ್ಪ ಸಿ. ಅಮರಾಪುರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.