ಯಾದಗಿರಿ: ಕರ ವಸೂಲಿಗಾರರ ಜ್ಯೇಷ್ಠತಾ ಪಟ್ಟಿ ತಿದ್ದೋಲೆ ಸರಿಪಡಿಸಿ ಬಡ್ತಿ, ಬಾಕಿ ವೇತನ ಪಾವತಿ, ನಿವೃತ್ತಿ ಉಪಧನ, ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಜಿಲ್ಲಾ ಸಮಿತಿಯ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯಿತಿ ನೌಕರರ ರಾಜ್ಯ ಸಮಿತಿಯ ಕರೆ ಮೇರೆಗೆ ಸಿಐಟಿಯು ಸಂಯೋಜಿತ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕರ ವಸೂಲಿ ಅಭಿಯಾನದಡಿ ಕೆಳಹಂತದ ನೌಕರರ ಮೇಲೆ ಒತ್ತಡ ಹಾಕುವುದನ್ನು ನಿಲ್ಲಿಸಬೇಕು. ಜಿಲ್ಲೆಯಲ್ಲಿ ನೌಕರರಿಗೆ ಪ್ರತಿ ತಿಂಗಳು ವೇತನ ಪಾವತಿ ಮಾಡಬೇಕು. ತರಬೇತಿ ಪಡೆದಂತಹ ನೌಕರರಿಗೆ ಕೆಲಸವೂ ನೀಡಬೇಕು. ಅಂಗನವಾಡಿ ನೌಕರರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಎಲ್ಲ ನೌಕರರಿಗೆ ₹ 5,000 ವೇತನ ಹೆಚ್ಚಳ ಮಾಡಿ ಇಲಾಖೆಯಿಂದ ಆದೇಶ ಹೊರಡಿಸಬೇಕು. ನೌಕರರ ನಿವೃತ್ತಿ ಅಥವಾ ನಿಧನ ಹೊಂದಿದರೆ ಅವರಿಗೆ ₹ 6 ಲಕ್ಷ ಇಡಗಂಟು ನೀಡಬೇಕು. ಸೇವಾ ಹಿರಿತನದ ಆಧಾರದಲ್ಲಿ ವೇತನವೂ ನೀಡಬೇಕು. ಪ್ರತಿಯೊಂದು ಪಂಚಾಯಿತಿಗೆ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ತುಂಬಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಮುಖಂಡರಾದ ಚನ್ನಪ್ಪ ಆನೆಗುಂದಿ, ಎಸ್.ಎಂ. ಸಾಗರ್, ಜೈಲಾಲ್ ತೋಟದಮನಿ, ಮಲ್ಲಿಕಾರ್ಜುನ ಬಳಿಚಕ್ರ, ಅನಿತಾ ಹಿರೇಮಠ, ಬಸವರಾಜ ದೊರೆ, ಬಸಲಿಂಗಮ್ಮ ನಾಟೇಕರ್, ರಮೇಶ ಸುರಪುರ, ಶಾಹಿಜಾಬ್ ಬೇಗಂ, ಈರಮ್ಮ ಅಯ್ಯಳ್ಕರ್, ದೇವೇಂದ್ರ ಕುಮಾರ್, ನಿಂಗಣ್ಣ ಅಯ್ಯಳ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-30-943799292

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.