ಯಾದಗಿರಿ: ‘ಯಾದಗಿರಿ ವಿಧಾನಸಭಾ ಮತಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ, ಸಾರ್ವಜನಿಕರ ಕೆಲಸವಿದ್ದರೂ ಮಧ್ಯವರ್ತಿಗಳ ಮೂಲಕ ಬಾರದೆ ನೇರವಾಗಿ ಭೇಟಿಯಾದರೆ ತಕ್ಷಣವೇ ಸ್ಪಂದಿಸಲಾಗುವುದು’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.

ಇಲ್ಲಿನ ಜನಸಂಪರ್ಕ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕರ ಅನುದಾನದಲ್ಲಿ ಮಂಜೂರಾದ ₹40 ಲಕ್ಷ ವೆಚ್ಚದ 33 ಎಲೆಕ್ಟ್ರಾನಿಕ್ ತ್ರಿಚಕ್ರ ವಾಹನಗಳನ್ನು ಅಂಗವಿಕಲ ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು.

‘ಜನರು ಅಭಿವೃದ್ಧಿ ಕೆಲಸಗಳನ್ನು ಮಾಡಲು ಆಯ್ಕೆ ಮಾಡಿದ್ದು, ಮೂರು ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಅಂಗವಿಕಲರು ಯಾವುದರಲ್ಲೂ ಕಡಿಮೆಯಿಲ್ಲ. ಅವರಿಗೆ ಅವಕಾಶ ನೀಡಿದಾಗ ಸಾಧಕರಾಗುತ್ತಾರೆ ಅವರು ಕೂಡ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ವಿತರಣೆ ಮಾಡಲಾದ ವಾಹನಗಳನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ನೀಡುವುದು, ಮಾರಾಟ ಮಾಡುವುದಾಗಲಿ ಮಾಡಬಾರದು. ಇದು, ಕಾನೂನು ಉಲ್ಲಂಘನೆ ಮಾಡಿದಂತೆ ಆಗುತ್ತದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕರ ಕಲ್ಯಾಣ ಅಧಿಕಾರಿ ಶರಣಪ್ಪ ಪಾಟೀಲ, ಪ್ರಮುಖರಾದ ನಾಗಮ್ಮ, ಮಲ್ಲಿಕಾರ್ಜುನ ಈಟೆ, ಶರಣಗೌಡ ಬಲಕಲ, ಖಾಜಾ ಮೈನುದ್ದೀನ್ ಮಿರ್ಚಿ, ಶರಣಬಸವ ಕೂರಕುಂದ, ತಿಮ್ಮಣ್ಣ ನಾಯಕ, ಜಲಾಲ್ ಬಬುಲಾದ್, ಬಾಪುಗೌಡ ಮೆಚನೂರು, ಅಶೋಕ್ ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.