ಯಾದಗಿರಿ: ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸಿ ಜಗಳ ಮಾಡಿದ್ದಕ್ಕೆ ವ್ಯಕ್ತಿಯನ್ನು ಕೊಲೆ ಮಾಡಿ, ಅದನ್ನು ಅಪಘಾತವೆಂದು ಬಿಂಬಿಸಲು ಯತ್ನಿಸಿದ ಆರೋಪದಡಿ ಕೊಲೆಯಾದವನ ಪತ್ನಿ ಸೇರಿ ಮೂವರ ವಿರುದ್ಧ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ಚಾಮನಳ್ಳಿ ತಾಂಡಾದ ಆಟೊ ಚಾಲಕ ಸಾಗರ್ ಬಾಬು ರಾಠೋಡ (28) ಕೊಲೆಯಾದವರು. ಕೊಲೆಗೆ ಕುಮ್ಮಕ್ಕು ನೀಡಿದ ಆರೋಪದಡಿ ಸಾಗರ್ ಪತ್ನಿ ಪೂಜಾ ಹಾಗೂ ಕೊಲೆಗೈದ ಆಪಾದನೆಯಡಿ ಅದೇ ತಾಂಡಾದ ರೆಡ್ಡಿ ಬಲರಾಮ ರಾಠೋಡ ಹಾಗೂ ಆತನ ಸ್ನೇಹಿತ ಮಹೇಶ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಗರ್ ಪತ್ನಿ ಪೂಜಾ ಜೊತೆಗೆ ರೆಡ್ಡಿ ಮೂರ್ನಾಲ್ಕು ವರ್ಷಗಳಿಂದ ಅಕ್ರಮ ಸಂಬಂಧ ಇರಿಸಿಕೊಂಡಿದ್ದ. ಈ ಬಗ್ಗೆ ಇಬ್ಬರಿಗೂ ಎಚ್ಚರಿಕೆ ನೀಡಿ, ನ್ಯಾಯಪಂಚಾಯಿತಿ ಮಾಡಿ ತಿಳಿವಳಿಕೆ ನೀಡಿದ್ದರೂ ತಿದ್ದಿಕೊಳ್ಳಲಿಲ್ಲ. ಪೂಜಾ ಜೊತೆಗೆ ರೆಡ್ಡಿ ಸಲುಗೆಯಿಂದ ಇರುತ್ತಿದ್ದ. ಇದರಿಂದಾಗಿ ರೆಡ್ಡಿ ಜೊತೆಗೆ ಸಾಗರ್ ಜಗಳವಾಡುತ್ತಿದ್ದ. ಈ ಬಗ್ಗೆ ದ್ವೇಷ ಬೆಳೆಸಿಕೊಂಡ ರೆಡ್ಡಿ, ತನ್ನ ಸ್ನೇಹಿತ ಮಹೇಶ ಜೊತೆಗೂಡಿ ಗಲಾಟೆ ಮಾಡಿ ಜೀವಬೆದರಿಕೆಯೂ ಹಾಕಿದ್ದರು ಎಂದು ಸಾಗರ್ ತಾಯಿ ದೂರಿನಲ್ಲಿ ಆರೋಪಿಸಿದ್ದಾರೆ.

ಸಾಗರ್ ಭಾನುವಾರ ಸಂಜೆ ಮಹೇಶ ಜೊತೆಗೆ ಯಾದಗಿರಿಗೆ ಹೋಗುವುದಾಗಿ ಹೇಳಿ, ಆಟೊದಲ್ಲಿ ತೆರಳಿದ. ರಾತ್ರಿ 9.30ಕ್ಕೆ ಪತ್ನಿ ಪೂಜಾ ಫೋನ್ ಮಾಡಿದಾಗ, ಮನೆಗೆ ತಡವಾಗಿ ಬರುವುದಾಗಿ ಹೇಳಿದ. ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಆಯಿತು. ಸಂಬಂಧಿ ಸಚಿನ್ ಅವರು ಮಹೇಶಗೆ ಫೋನ್ ಮಾಡಿದಾಗ, ‘ಆತ ಕುಡಿದು ಎಲ್ಲಿಯಾದರೂ ಮಲಗಿರಬಹುದು ಹುಡುಕಾಡಬೇಡಿ’ ಎಂದು ಹೇಳಿದ.

ಸೋಮವಾರ ಬೆಳಿಗ್ಗೆ ಹೊಸಳ್ಳಿ (ಎಂ) ರಸ್ತೆಯ ಕೆಇಬಿ ಕಲ್ಯಾಣ ಮಂಟಪ ಸಮೀಪದ ರಸ್ತೆಯ ಬದಿಯಲ್ಲಿ ಸಾಗರ್ ಅವರ ಶವ ಅನುಮಾನಾಸ್ಪದ ರೀತಿಯಲ್ಲಿ ಕಂಡುಬಂತು. ಆತನ ತಲೆಯ ಮೇಲೆ ಹಾಗೂ ಹಿಂಭಾಗದಲ್ಲಿ ಗಂಭೀರ ಗಾಯವಾಗಿತ್ತು. ಮೂಗಿನಿಂದ ರಕ್ತಸ್ರಾವವೂ ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪೂಜಾ ಜೊತೆಗೆ ರೆಡ್ಡಿ ಅಕ್ರಮ ಸಂಬಂಧ ಇರಿಸಿಕೊಂಡಿದ್ದ. ಈ ಬಗ್ಗೆ ಸಾಗರ್ ಹಲವು ಬಾರಿ ರೆಡ್ಡಿಯೊಂದಿಗೆ ಜಗಳ ಮಾಡಿದ್ದ. ಈ ಸಂಬಂಧ ದ್ವೇಷ ಸಾಧಿಸಿದ ರೆಡ್ಡಿ ಮತ್ತು ಮಹೇಶ ಬೇರೆ ಕಡೆಗೆ ಆತನನ್ನು ಕರೆದೊಯ್ದು ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ಕೊಲೆಯನ್ನು ಮುಚ್ಚಿ ಹಾಕಲು ಆಟೊ ಪಲ್ಟಿ ಮಾಡಿ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದಾರೆ. ಕೊಲೆಗೆ ಪೂಜಾ ಕುಮ್ಮಕ್ಕು ನೀಡಿದ್ದಾಳೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸ್ಥಳಕ್ಕೆ ಎಸ್ಪಿ ಪೃಥ್ವಿಕ್ ಶಂಕರ್, ಡಿವೈಎಸ್ಪಿ ಸುರೇಶ ನಾಯಕ್, ಸಿಪಿಐ ಸುನೀಲ ಮೂಲಿಮನಿ, ಪಿಎಸ್ಐ ನಾಗಮ್ಮ ಸೇರಿ ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-30-386131113

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.