ಶಹಾಪರ: ತಾಲ್ಲೂಕಿನ ನಾಗಟನಗಿ ಡೊಂಗ್ರಿ ನಾಯಕ ತಾಂಡಾದಲ್ಲಿ ಮೇ 5ರ ಮಂಗಳವಾರದಂದು ನಡೆಯಬೇಕಿದ್ದ ಸೇವಾಲಾಲ ಮಹಾರಾಜ ಹಾಗೂ ಜಗದಂಬಾದೇವಿ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಿ ತಹಶೀಲ್ದಾರ್ ಸಿದ್ದಾರೂಢ ಬನ್ನಿಕೊಪ್ಪ ಸೋಮವಾರ ಆದೇಶ ಹೊರಡಿಸಿದ್ದಾರೆ.

ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಾತ್ರಾ ಮಹೋತ್ಸವವನ್ನು ರದ್ದುಪಡಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ತಾಂಡಾದ ಎರಡು ಗುಂಪುಗಳ ಸ್ವಪ್ರತಿಷ್ಠೆಗೆ ಜಾತ್ರಾ ಮಹೋತ್ಸವ ರದ್ದಾಗಿದ್ದು ತಾಂಡಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ತಾಂಡಾದ ಒಂದು ಗುಂಪು ಮೇ 5ರಂದು ಜಾತ್ರೆ ನಡೆಸುವುದಾಗಿ ತಿಳಿಸಿದರೆ ಇನ್ನೊಂದು ಗುಂಪು ಮೇ 12ರಂದು ಮಾಡುವುದಾಗಿ ಹಠ ಹಿಡಿದಿದ್ದರು. ಕಾರ್ಯಕ್ರಮದಲ್ಲಿ ಎರಡು ಗುಂಪುಗಳಿಗೆ ಅವಕಾಶ ನೀಡಿದ್ದಲ್ಲಿ ತಾಂಡಾದಲ್ಲಿ ಅಶಾಂತಿ ಉಂಟಾಗುವ ಸಂಭವ ಇರುವುದರಿಂದ ಜಾತ್ರೆಯನ್ನು ರದ್ದುಪಡಿಸಿ ಆದೇಶಿಸಲು ಸಿಪಿಐ ಅವರು ಕೋರಿರುವುದಾಗಿ ಬನ್ನಿಕೊಪ್ಪ ಅವರು ಆದೇಶದಲ್ಲಿ ನಮೂದಿಸಿದ್ದಾರೆ.

ತಾಂಡಾದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇನ್ನಷ್ಟು ಸಿಬ್ಬಂದಿಯನ್ನು ತಾಂಡಾಕ್ಕೆ ಕಳುಹಿಸಲಾಗುವುದು ಎಂದು ಗೋಗಿ ಠಾಣೆಯ ಪಿಎಸ್ಐ ಅವರು ಮಾಹಿತಿ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-30-1892079200

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.