ಯಾದಗಿರಿ: ತಳಮಟ್ಟದ ಆಡಳಿತವನ್ನು ಬಲಪಡಿಸಿ, ಸರ್ವರನ್ನೂ ಒಳಗೊಂಡ ಗ್ರಾಮೀಣ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳು ನಿರೀಕ್ಷಿತ ಮಟ್ಟದಲ್ಲಿ ಸಾಧನೆ ತೋರುತ್ತಿಲ್ಲ ಎಂಬುದು ಪಂಚಾಯಿತಿ ಅಭಿವೃದ್ಧಿ ಸೂಚ್ಯಂಕ (ಪಿಎಐ) ವರದಿಯಿಂದ ಗೊತ್ತಾಗಿದೆ.

ಪಂಚಾಯತ್ ರಾಜ್ ಸಚಿವಾಲಯ ಕಳೆದ ತಿಂಗಳ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಅಂಗವಾಗಿ 2023-24ರ ಹಣಕಾಸು ವರ್ಷದ ಪಂಚಾಯತ್ ಅಭಿವೃದ್ಧಿ ಸೂಚ್ಯಂಕ 2.0 ವರದಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಯಾದಗಿರಿ ಜಿಲ್ಲೆಯ 122 ಗ್ರಾಮ ಪಂಚಾಯಿತಿಗಳ ಸೂಚ್ಯಂಕವೂ ಒಳಗೊಂಡಿದ್ದು, ಒಂದೇ ಒಂದು ಪಂಚಾಯಿತಿಯೂ ‘ಎ’ ಗ್ರೇಡ್ ಸ್ಥಾನ ಪಡೆದಿಲ್ಲ.

ಬದಲಾಗಿ, ರಾಜ್ಯದಲ್ಲಿ ಅತಿ ಕಡಿಮೆ ಪಿಎಐ ಅಂಕ ಪಡೆದ ಪಂಚಾಯಿತಿಗಳಲ್ಲಿ ಗುರುಮಠಕಲ್ನ ಚಿನ್ನಾಕಾರ ಗ್ರಾಮ ಪಂಚಾಯಿತಿ ಇದ್ದು, ಅದು ಕೇವಲ 31.50 ಅಂಕ ಗಳಿಸಿದೆ. ಜಿಲ್ಲೆಯ 29 ಗ್ರಾಮ ಪಂಚಾಯಿತಿಗಳಿಗೆ ‘ಬಿ’ ಗ್ರೇಡ್, 88 ಗ್ರಾ.ಪಂ.ಗಳಿಗೆ ‘ಸಿ’ ಗ್ರೇಡ್ ಹಾಗೂ ಐದು ಗ್ರಾ.ಪಂ.ಗಳಿಗೆ ‘ಡಿ’ ಗ್ರೇಡ್ ಸ್ಥಾನ ನೀಡಲಾಗಿದೆ.

ಹುಣಸಗಿ ತಾಲ್ಲೂಕಿನ ಐದು ಗ್ರಾಮ ಪಂಚಾಯಿತಿಗಳಿಗೆ ‘ಬಿ’ ಗ್ರೇಡ್ ಹಾಗೂ 13 ಪಂಚಾಯಿತಿಗೆ ‘ಸಿ’ ಗ್ರೇಡ್ ಸಿಕ್ಕಿದೆ. ಗುರುಮಠಕಲ್ನ ಒಂದೇ ಪಂಚಾಯಿತಿಗೆ ‘ಬಿ’ ಗ್ರೇಡ್ ಲಭಿಸಿದ್ದರೆ, 13 ಪಂಚಾಯಿತಿಗಳಿಗೆ ‘ಸಿ’ ಹಾಗೂ 4 ಪಂಚಾಯಿತಿಗಳಿಗೆ ಕೊನೆಯ ‘ಡಿ’ ಗ್ರೇಡ್ ದಕ್ಕಿದೆ.

ಶಹಾಪುರ ಹಾಗೂ ಸುರಪುರ ತಾಲ್ಲೂಕಿನ ತಲಾ 9 ಪಂಚಾಯಿತಿಗಳು ‘ಬಿ’ ಗ್ರೇಡ್ನಲ್ಲಿದ್ದರೆ ‘ಸಿ’ ಗ್ರೇಡ್ನಲ್ಲಿ ಕ್ರಮವಾಗಿ 15 ಹಾಗೂ 14 ಪಂಚಾಯಿತಿಗಳಿವೆ. ವಡಗೇರಾದ 17 ಪಂಚಾಯಿತಿಗಳಲ್ಲಿ ಒಂದು ಮಾತ್ರ ‘ಬಿ’ ಗ್ರೇಡ್ನಲ್ಲಿದ್ದು, ಉಳಿದವು ‘ಸಿ’ ಗ್ರೇಡ್ ಪಡೆಯಲು ಸಾಧ್ಯವಾಗಿವೆ. ಜಿಲ್ಲಾ ಕೇಂದ್ರವಾದ ಯಾದಗಿರಿ ತಾಲ್ಲೂಕಿನ 22 ಗ್ರಾ.ಪಂ.ಗಳಲ್ಲಿ ಒಂದು ಪಂಚಾಯಿತಿ ‘ಡಿ’ ಗ್ರೇಡ್ನಲ್ಲಿದ್ದು, ‘ಬಿ’ ಗ್ರೇಡ್ನಲ್ಲಿ 4 ಹಾಗೂ ‘ಸಿ’ ಗ್ರೇಡ್ನಲ್ಲಿ 17 ಪಂಚಾಯಿತಿಗಳಿವೆ.

ಬಡತನ ಮುಕ್ತ, ಆರೋಗ್ಯ, ಮಕ್ಕಳ ಸ್ನೇಹಿ ಆಡಳಿತ, ಅಗತ್ಯವಾದಷ್ಟು ನೀರು ಪೂರೈಕೆ, ಸ್ವಚ್ಛ ಪರಿಸರ ಮತ್ತು ಹಸಿರೀಕರಣ, ಸ್ವಾವಲಂಬಿ ಮೂಲಸೌಕರ್ಯಗಳು, ಸಾಮಾಜಿಕ ನ್ಯಾಯ, ಉತ್ತಮವಾದ ಆಡಳಿತ ಹಾಗೂ ಮಹಿಳಾ ಸಬಲೀಕರಣದಲ್ಲಿ ಪ್ರತಿ ಗ್ರಾಮ ಪಂಚಾಯಿತಿ ತೋರಿದ್ದ ಅಭಿವೃದ್ಧಿಗೆ ಶೂನ್ಯದಿಂದ 100 ಅಂಕಗಳನ್ನು ನೀಡಲಾಗಿದೆ. ಅವುಗಳನ್ನು ‘ಎ+’, ‘ಎ’, ‘ಬಿ’, ‘ಸಿ’ ಮತ್ತು ‘ಡಿ’ ಗ್ರೇಡ್ಗಳಾಗಿಯೂ ವರದಿಯಲ್ಲಿ ವಿಭಾಗಿಸಲಾಗಿದೆ.

90ಕ್ಕಿಂತ ಹೆಚ್ಚು ಅಂಕಗಳಿಗೆ ‘ಎ+’ ಗ್ರೇಡ್ ಸ್ಥಾನದೊಂದಿಗೆ ‘ಸಾಧಕ’ ಪಂಚಾಯಿತಿಗಳು; 75 ರಿಂದ 90 ಅಂಕ ಪಡೆದರೆ ‘ಎ’ ಗ್ರೇಡ್ನೊಂದಿಗೆ ‘ಮುಂಚೂಣಿ’ಯಲ್ಲಿರುವ ಪಂಚಾಯಿತಿ; 60 ರಿಂದ 75ಕ್ಕಿಂತ ಕಡಿಮೆ ಅಂಕಗಳಿಸಿದರೆ ‘ಬಿ’ ಗ್ರೇಡ್ ಜೊತೆಗೆ ‘ಪ್ರದರ್ಶಕ’ ಪಂಚಾಯಿತಿ; 40 ರಿಂದ 60ಕ್ಕಿಂತ ಕಡಿಮೆ ಅಂಕ ಪಡೆದರೆ ‘ಸಿ’ ಗ್ರೇಡ್ನೊಂದಿಗೆ ‘ಮಹಾತ್ವಾಕಾಂಕ್ಷಿ’ ಪಂಚಾಯಿತಿ ಹಾಗೂ 40 ಅಂಕಗಳಿಗಿಂತ ಕಡಿಮೆ ಪಡೆದರೆ ‘ಡಿ’ ದರ್ಜೆ ಸ್ಥಾನದೊಂದಿಗೆ ‘ಆರಂಭಿಕ’ ಪಂಚಾಯಿತಿ ಎಂದು ಗುರುತಿಸಲಾಗಿದೆ.

ಜಿಲ್ಲೆಯ ಬಹುತೇಕ ಪಂಚಾಯಿತಿಗಳು ‘ಸಿ’ ಗ್ರೇಡ್ನಲ್ಲಿದ್ದು, 60ಕ್ಕಿಂತ ಕಡಿಮೆ ಅಂಕಗಳಿಸಿವೆ. ಗ್ರಾಮೀಣಾಭಿವೃದ್ಧಿಯ ಮೂಲ ಆಶಯಗಳಾದ ಹಳ್ಳಿಗಳ ಸ್ವಾವಲಂಬನೆಯು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಗ್ರಾಮ ಸ್ವರಾಜ್ಯದ ಕನಸು ಹೊತ್ತು ಅನುಷ್ಠಾನಕ್ಕೆ ತರಲಾದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುತ್ತಿಲ್ಲ ಎಂಬುದನ್ನು ಈ ಸೂಚ್ಯಂಕ ವರದಿ ಬಿಂಬಿಸುತ್ತದೆ.

‘ಸೂಚ್ಯಂಕ ಅನುಸಾರ ಜಾಗೃತಿ ಶಿಬಿರ’

‘ಪಂಚಾಯಿತಿ ಅಭಿವೃದ್ಧಿ ಸೂಚ್ಯಂಕ ವರದಿಯಲ್ಲಿನ ಯಾವೆಲ್ಲ ಸೂಚ್ಯಂಕಗಳಲ್ಲಿ ಹಿಂದೆ ಇದ್ದವೆ ಎಂಬುದನ್ನು ಪರಿಶೀಲಿಸಿ, ಆ ಸೂಚ್ಯಂಕಗಳ ಸಂಬಂಧ ಜಾಗೃತಿ ಶಿಬಿರಗಳು, ಕಾರ್ಯ ಚಟುವಟಿಕೆಗಳನ್ನು ನಡೆಸುವಂತೆ ಪಂಚಾಯಿತಿ ಸಿಬ್ಬಂದಿಗೆ ಸೂಚಿಸಲಾಗಿದೆ. ಶಿಬಿರಗಳು ಮುಗಿದ ನಂತರ ಏನೆಲ್ಲ ಬದಲಾವಣೆಯಾಗಿದೆ ಎಂಬುದನ್ನು ಪರಿಶೀಲಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಡಗೇರಾ ತಾಲ್ಲೂಕಿನ ಹೆಚ್ಚಿನ ಗ್ರಾಮ ಪಂಚಾಯಿತಿಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಇರುವ ಪಿಡಿಒಗಳಿಗೆ ಎರಡ್ಮೂರು ಪಂಚಾಯಿತಿಗಳ ಪ್ರಭಾರ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸೂಚ್ಯಂಕ ಸುಧಾರಣೆಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದರು.

ದೇವರಗೋನಾಳ ಅತ್ಯುತ್ತಮ ಗ್ರಾ.ಪಂ

ಪಂಚಾಯಿತಿ ಅಭಿವೃದ್ಧಿ ಸೂಚ್ಯಂಕ ವರದಿಯಲ್ಲಿ ಸುರಪುರ ತಾಲ್ಲೂಕಿನ ದೇವರಗೋನಾಳ ಗ್ರಾಮ ಪಂಚಾಯಿತಿಯು ಒಂಬತ್ತು ಸೂಚ್ಯಂಕಗಳಲ್ಲಿ ಉತ್ತಮದ ಪ್ರದರ್ಶನ ತೋರಿದೆ. 66.51 ಅಂಕಗಳೊಂದಿಗೆ ಜಿಲ್ಲೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪಂಚಾಯಿತಿಯಾಗಿದೆ.

ಗುರುಮಠಕಲ್ನ ಯಲ್ಹೇರಿ ಗ್ರಾ.ಪಂ. 64.5 ಅಂಕ, ಹುಣಸಗಿಯ ಜೋಗುಂಡಭಾವಿ 66.49 ಅಂಕ, ಶಹಾಪುರದ ನಾಗನಟಗಿ 66.21 ಅಂಕ, ವಡಗೇರಾದ ಬೆಂಡೆಬೆಂಬಳ್ಳಿ 64.97 ಅಂಕ ಹಾಗೂ ಯಾದಗಿರಿಯ ಕಡೇಚೂರು 62.88 ಅಂಕಗಳೊಂದಿಗೆ ತಾಲ್ಲೂಕುವಾರು ಪ್ರದರ್ಶನದಲ್ಲಿ ಮುಂಚೂಣಿಯಲ್ಲಿವೆ.

ಒಂಬತ್ತು ಸೂಚ್ಯಂಕಗಳಲ್ಲಿ ಅತ್ಯಧಿಕ ಅಂಕಪಡೆದ ಗ್ರಾ. ಪಂ.ಗಳು: ಬಡತನ ಮುಕ್ತದಲ್ಲಿ ಮಾಲಗತ್ತಿ 84.27 ಅಂಕ, ಆರೋಗ್ಯದಲ್ಲಿ ನಾಗನೂರು 79.06 ಅಂಕ, ಮಕ್ಕಳ ಸ್ನೇಹಿಯಲ್ಲಿ ಬೆಡಂಬೆಂಬಳ್ಳಿ 63.64 ಅಂಕ, ಅಗತ್ಯವಾದಷ್ಟು ನೀರು ಸರಬರಾಜಿನಲ್ಲಿ ಪಸಪೂಲ 76.41 ಅಂಕ, ಶುದ್ಧ ಪರಿಸರದಲ್ಲಿ ಮದ್ರಕಿ 70.91 ಅಂಕ, ಸ್ವಾವಲಂಬಿ ಮೂಲಸೌಕರ್ಯದಲ್ಲಿ ಚಾಮನಾಳ 83.62 ಅಂಕ, ಸಾಮಾಜಿಕ ನ್ಯಾಯ ಮತ್ತು ಸುರಕ್ಷತೆಯಲ್ಲಿ ಮಲ್ಹಾರ 80.58 ಅಂಕ, ಉತ್ತಮ ಆಡಳಿತದಲ್ಲಿ ಯೆವೂರ 79.19 ಅಂಕ ಹಾಗೂ ಮಹಿಳಾ ಸ್ನೇಹಿ ಪಂಚಾಯಿತಿಯಲ್ಲಿ ಮುದನೂರು 66.19 ಅಂಕಪಡೆದಿವೆ.

9 ಸೂಚ್ಯಂಕಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಗ್ರಾಮ ಪಂಚಾಯಿತಿಗಳು

ತಾಲ್ಲೂಕುಗಳು: ಗುರುಮಠಕಲ್;ಹುಣಸಗಿ;ಶಹಾಪುರ; ಸುರಪುರ; ವಡಗೇರಾ;ಯಾದಗಿರಿ

ಬಡತನ ಮುಕ್ತ: ಯಲ್ಹೇರಿ;ಮಾಳನೂರು;ಹೊಸಕೇರಾ; ಮಾಲಗತ್ತಿ; ತಡಿಬಿಡಿ;ಮಲ್ಹಾರ

ಆರೋಗ್ಯ: ಪಸಪೂಲ;ಮಾಳನೂರು;ವನದುರ್ಗ;ನಾಗನೂರು; ಬೆಡಂಬೆಂಬಳ್ಳಿ; ಅರಕೇರಾ(ಕೆ)

ಮಕ್ಕಳ ಸ್ನೇಹಿ: ಯಲ್ಹೇರಿ;ರಾಜನಕೋಳೂರು;ಇಬ್ರಾಹಿಂಪುರ;ಯಕ್ತಾಪುರ;ಬೆಂಡೆಬೆಂಬಳ್ಳಿ; ಕಡೇಚೂರು

ನೀರು: ಪಸಪೂಲ;ಅರಕೇರಾ(ಜೆ);ಹೊಸಕೇರಾ;ದೇವರಗೋನಾಳ; ಐಕೂರು;ಅರಕೇರಾ(ಕೆ)

ಪರಿಸರ: ಕಂದಕೂರ;ಜೋಗುಂಡಭಾವಿ;ಮದ್ರಕಿ;ಹೆಗ್ಗಣದೊಡ್ಡಿ; ಉಳೆಸೂಗುರು; ರಾಮಸಮುದ್ರ

ಮೂಲಸೌಕರ್ಯ: ಯಲ್ಹೇರಿ;ಜೋಗುಂಡಭಾವಿ;ಚಾಮನಾಳ; ವಾಗಣಗೇರಾ; ಐಯ್ಯಾಳ (ಬಿ);ರಾಮಸಮುದ್ರ

ಸಾಮಾಜಿಕ ನ್ಯಾಯ: ಪುಟಪಾಕ್;ಜೋಗುಂಡಭಾವಿ;ಹೊಸಕೇರಾ; ಪೇಠಅಮ್ಮಪುರ; ಬೆಂಡೆಬೆಂಬಳ್ಳಿ;ಮಲ್ಹಾರ

ಉತ್ತಮ ಆಡಳಿತ: ಯಲ್ಹೇರಿ;ಕೊಡೇಕಲ್ಲ;ನಾಗನಟಗಿ;ಯೆವೂರು;
ಟಿ. ವಡಗೇರಾ;ಮೋಟ್ನಳ್ಳಿ

ಮಹಿಳಾ ಸಬಲೀಕರಣ: ಚಪೆಟ್ಲಾ;ಮುದನೂರು(ಕೆ);ದೋರನಹಳ್ಳಿ; ಕಾಚಕನೂರು;ಹಳಗೇರಾ; ಅಲ್ಲಿಪುರ

ಆಧಾರ: ಪಂಚಾಯಿತಿ ಅಭಿವೃದ್ಧಿ ಸೂಚ್ಯಂಕ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.