ಯಾದಗಿರಿ: ‘ರಾಜ್ಯ ಸರ್ಕಾರದ ಆಡಳಿತದ ಚುಕ್ಕಾಣಿ ಹಿಡಿಯುವವರು ಜನರ ಭಾವನೆಗಳನ್ನು ಅರ್ಥ ಮಾಡಿ ಕೊಂಡು ಅಭಿವೃದ್ಧಿಯ ರಾಜಕಾರಣ ಮಾಡಬೇಕು’ ಎಂದು ಶಾಸಕ ಶರಣಗೌಡ ಕಂದಕೂರು ಹೇಳಿದರು.

ತಾಲ್ಲೂಕಿನ ಹೋರುಂಚಾ ಹಾಗೂ ಯರಗೋಳ ಗ್ರಾಮದ ವ್ಯಾಪ್ತಿಯಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ, ಜನತಾ ದರ್ಶನ, ಗ್ರಾಮ ವಾಸ್ತವ್ಯ, ಸುವರ್ಣ ಗ್ರಾಮದಂಥ ಯೋಜನೆ ತಂದು ಜನರ ಮೆಚ್ಚುಗೆ ಗಳಿಸಿದ್ದರು. ಬಿ.ಎಸ್.ಯಡಿಯೂರಪ್ಪ ಅವರು ಭಾಗ್ಯಲಕ್ಷ್ಮಿ, ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಯೋಜನೆ ತಂದು ಅನುಕೂಲ ಮಾಡಿಕೊಟ್ಟರು. ಸಿದ್ದರಾಮಯ್ಯ ಅವರು ಅನೇಕ ಭಾಗ್ಯಗಳ ಮೂಲಕ ಜನರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ’ ಎಂದರು.

‘ಹೊಸದಾಗಿ ಆಡಳಿತದ ಚುಕ್ಕಾಣಿ ಹಿಡಿಯುವವರು ಈ ಮೂವರು ನಾಯಕರ ಕಾರ್ಯಕ್ರಮಗಳನ್ನು ಆದರ್ಶವಾಗಿ ಇರಿಸಿಕೊಂಡು ಉತ್ತಮ ಆಡಳಿತ ಕೊಡಬೇಕು’ ಎಂದು ಹೇಳಿದರು.

ಉತ್ತರಾದಿ ಮಠದ ಪಂಡಿತ್ ಸತ್ಯಬೋಧಾಚಾರ್ಯ ಘಟಾಲಿ ಮಾತನಾಡಿ, ‘ಥಾವರು ನಾಯಕ ತಾಂಡಾ ರಸ್ತೆ ಸುಧಾರಣೆಯಿಂದ ಈ ಭಾಗದ ಜನರ ಸಂಚಾರಕ್ಕಾಗಿ ಪಡುತ್ತಿರುವ ಕಷ್ಟ ದೂರವಾಗಲಿದೆ’ ಎಂದು ಹರಸಿದರು.

ಕ್ರಮಕ್ಕೆ ಸೂಚನೆ: ಯರಗೋಳ ಗ್ರಾಮಸ್ಥರು ಜೆಸ್ಕಾಂ ಸಿಬ್ಬಂದಿ ಬೇಜವಾಬ್ದಾರಿತನದ ಬಗ್ಗೆ ಶಾಸಕರಿಗೆ ದೂರು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ‘ಸರ್ಕಾರ ಕೊಡುವ ಸಂಬಳಕ್ಕೆ ಕೆಲಸ ಮಾಡಿ. ಇಲ್ಲದಿದ್ದರೆ ನಾನೇ ಬದಲಾಯಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಜೊತೆಗೆ ಜೆಸ್ಕಾಂ ಇಇ ರಾಘವೇಂದ್ರ ಅವರಿಗೆ ದೂರವಾಣಿ ಮೂಲಕ ಮಾತನಾಡಿ, ‘ವಡ್ನಳ್ಳಿ ಗ್ರಾಮದಲ್ಲಿ ಟಿಸಿ ಸುಟ್ಟು ವಾರಗಳು ಕಳೆದಿವೆ. ಗ್ರಾಮಸ್ಥರು ವಾಹನ ವ್ಯವಸ್ಥೆ ಮಾಡುತ್ತೇವೆ ಎಂದರೂ ಜೆಸ್ಕಾಂ ಸಿಬ್ಬಂದಿ ಸ್ಪಂದಿಸುತ್ತಿಲ್ಲ. ಕೂಡಲೇ ಅವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

₹ 7 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ: ಕೆಕೆಆರ್ಡಿಬಿ ಮೈಕ್ರೋ ಎಸ್ಸಿಪಿ ಯೋಜನೆಯಡಿ ಗುರುಮಠಕಲ್ ಮತ ಕ್ಷೇತ್ರದ ಥಾವರು ನಾಯಕ ತಾಂಡಾದಿಂದ ತಾನು ನಾಯಕ ತಾಂಡಾವರೆಗಿನ ಮುಖ್ಯರಸ್ತೆಗೆ ₹ 4 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಹಾಗೂ ಹೋರುಂಚಾ ಗ್ರಾಮದ ನಡುವಿನ ತಾಂಡಾದಿಂದ ಯಡ್ಡಳ್ಳಿ ಗ್ರಾಮದ ಹರಿಜನವಾಡಾದ ವರೆಗೆ ₹ 3 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆಯ ಭೂಮಿಪೂಜೆ ನೆರವೇರಿಸಿದರು.

ಲೋಕೋಪಯೋಗಿ ಇಲಾಖೆ ಎಇಇ ಪರಶುರಾಮ, ತಾ.ಪಂ. ಎಡಿ ರಾಮಚಂದ್ರ, ಕಂದಾಯ ನಿರೀಕ್ಷಕ ರಾಜಶೇಖರ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಮುಖಂಡರಾದ ಭೋಜನಗೌಡ ಯಡ್ಡಳ್ಳಿ, ರವಿ ಪಾಟೀಲ, ಬಸಣ್ಣ ದೇವರಳ್ಳಿ, ಶಂಕ್ರಪ್ಪ ದಿಬ್ಬಾ, ಶಿವಣ್ಣ ಹಿರಿಕೇರಾ, ಶಿವು ಭೀಮನಳ್ಳಿ, ಮಾರ್ಥಂಡ ಯರಗೋಳ, ಸಿದ್ದಪ್ಪ ಹೋರುಂಚಾ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-30-2060522475

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.