ಯಾದಗಿರಿ: ನಗರವೂ ಸೇರಿದಂತೆ ಜಿಲ್ಲೆಯ ಹಲವು ಕಡೆ ಮೂರ್ನಾಲ್ಕು ದಿನಗಳಿಂದ ಅನಿಯಮಿತ ವಿದ್ಯುತ್ ಕಡಿತ ಮಾಡಲಾಗುತ್ತಿದ್ದು, ಬೇಸಿಗೆಯ ಬಿಸಿಲಿನ ಪ್ರತಾಪ ಮತ್ತು ಧಗೆಯಿಂದಾಗಿ ಜನ ತತ್ತರಿಸುವಂತಾಗಿದೆ.

ಬೆಳಿಗ್ಗೆ 9 ಗಂಟೆ ಆಗುತ್ತಲೇ ನೆತ್ತಿ ಸುಡುವ ಬಿಸಿಲು, ಮಧ್ಯಾಹ್ನ ಕಾದ ಹೆಂಚಾಗುವ ನೆಲ, ಸಂಜೆ ಬಿರುಗಾಳಿ ಸಹಿತ ಅಲ್ಪ ಮಳೆ, ರಾತ್ರಿಯ ಧಗೆಯ ಅನುಭವ. ಇದರ ನಡುವೆ ವಿದ್ಯುತ್ ಕಣ್ಣಾಮುಚ್ಚಾಲೆಯ ಆಟದಿಂದಾಗಿ ಜನ ಜೀವನ ಅಸಹನೀಯವಾಗಿದೆ.

ನಾಲ್ಕ ದಿನಗಳ ಹಿಂದೆ ತಡರಾತ್ರಿ ಬಿರುಗಾಳಿ ಸಹಿತ ಗುಡುಗು, ಮಿಂಚಿನೊಂದಿಗೆ ಜೋರು ಮಳೆಯಾಯಿತು. ಆ ದಿನ ಇಡೀ ರಾತ್ರಿ ವಿದ್ಯುತ್ ಕಡಿತವಾಗಿ, ಬಹುತೇಕ ನಗರ ಕತ್ತಲಲ್ಲೇ ಕಳೆಯುವಂತೆ ಆಯಿತು. ಮರುದಿನ ಅಲ್ಲಲ್ಲಿ ವಿದ್ಯುತ್ ಪರಿವರ್ತಕಗಳಿಗೆ ಹಾನಿ, ವಿದ್ಯುತ್ ಲೈನ್ಗಳಲ್ಲಿ ಸಮಸ್ಯೆ ಕಂಡುಬಂದು ಇಡೀ ದಿನವೂ ವಿದ್ಯುತ್ ಕಣ್ಣಾಮುಚ್ಚಾಲೆ ಮುಂದುವರಿಯಿತು.

‘ಗಾಳಿ ಮಳೆಯೂ ಇಲ್ಲದ ದಿನಗಳಲ್ಲಿ ವಿದ್ಯುತ್ ಕಡಿತ ಸಾಮಾನ್ಯವಾಗಿದೆ. ಪ್ರತಿ ಬೇಸಿಗೆಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಎಂಬುದು ನಗರದ ನಿವಾಸಿಗಳಿಗೆ ಅಭ್ಯಾಸವಾಗಿ ಹೋಗಿದೆ. ಜೆಸ್ಕಾಂ ಎಂಜಿನಿಯರ್ಗಳನ್ನು ಕೇಳಿದರೆ, ‘ತುರ್ತು ಕೆಲಸ ಇದೆ, ತಂತಿ ಹಾಗೂ ಫೀಡರ್ ಬದಲಾವಣೆ ಮಾಡುತ್ತಿದ್ದೇವೆ, ಲೈನ್ ಕಟ್ ಆಗಿದೆ, ಟಿ.ಸಿ. ಬದಲಾಯಿಸುತ್ತಿದ್ದೇವೆ’ ಎಂದು ಸಬೂಬು ಹೇಳಿಕೊಂಡು ಅನಿಯಮಿತವಾಗಿ ಕಡಿತ ಮಾಡುತ್ತಿರುತ್ತಾರೆ’ ಎನ್ನುತ್ತಾರೆ ನಗರದ ನಿವಾಸಿ ವೆಂಕಟೇಶ.

‘ಕೆಲವು ವಾರಗಳ ಹಿಂದೆ ಗಾಳಿ ಮಳೆ ಇಲ್ಲದೆ ಇದ್ದರೂ ಮಧ್ಯರಾತ್ರಿಯಲ್ಲಿ ಏಕಾಏಕಿ ವಿದ್ಯುತ್ ಕಡಿತವಾಗಿತ್ತು. ಜೆಸ್ಕಾಂ ಸಹಾಯವಾಣಿಗೆ ಸಂಪರ್ಕಿಸಿದರು ಪ್ರತಿಕ್ರಿಯೆ ಬರಲಿಲ್ಲ. ಬೆಳಿಗ್ಗೆ ಬೆಳಕು ಹರಿಯುವವರೆಗೂ ಫ್ಯಾನ್, ಕೂಲರ್ ಇಲ್ಲದ್ದರಿಂದ ನಿದ್ರೆ ಮಾಡಲೂ ಪರದಾಡುವಂತಾಯಿತು’ ಎಂದು ಶಂಕರ್ ರಾಠೋಡ ಬೇಸರ ವ್ಯಕ್ತಪಡಿಸಿದರು.

ಬೇಸಿಗೆಯಲ್ಲಿ 42ರಿಂದ 44 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ತಾಪಮಾನ ಇರುತ್ತದೆ. ಹೀಟ್ವೇವ್ ನಿರ್ವಹಣೆ ಅನ್ವಯ ವಿದ್ಯುತ್ ಕಡಿತ ಮಾಡದಂತೆ ನೋಡಿಕೊಳ್ಳವ ಜವಾಬ್ದಾರಿ ಜೆಸ್ಕಾಂ ಎಂಜಿನಿಯರ್ಗಳದ್ದು. ಬೇಸಿಗೆಗೆ ಸರಿಯಾಗಿ ಸಿದ್ಧತೆ ಮಾಡಿಕೊಳ್ಳದೆ ಜನರನ್ನು ಪರಿತಪಿಸುವಂತೆ ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.

ಜಂಗಲ್ ಕಟ್ಟಿಂಗ್ ಆಗಿಲ್ಲ: ‘ಹೊಸಳ್ಳಿಯ ರಸ್ತೆಯ 110 ಕೆವಿ ಕೇಂದ್ರದ ಸುತ್ತಲೂ, ನಗರದ ಹಲವೆಡೆಯ ವಿದ್ಯುತ್ ತಂತಿಗಳ ಮಾರ್ಗದಲ್ಲಿ ಗಿಡ–ಗಂಟಿಗಳು ಬೆಳೆದು ನಿಂತಿದ್ದು, ಜಂಗಲ್ ಕಟ್ಟಿಂಗ್ ಆಗಿಲ್ಲ. ಹೀಗಾಗಿ, ಸ್ವಲ್ಪವೇ ಗಾಳಿ ಬೀಸಿದರು ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗುತ್ತದೆ. ನಗರ ವ್ಯಾಪ್ತಿಯಲ್ಲಿ ಆರು ಫೀಡರ್ಗಳು ಬರುತ್ತವೆ. ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ. ಜಂಗಲ್ ಕಟ್ಟಿಂಗ್ ಟೆಂಡರ್ ನೀಡುವ ಬಗ್ಗೆ ಚರ್ಚೆಯಾಗಿದ್ದು, ನಾಲ್ಕು ದಿನಗಳು ಗಾಳಿ ಮಳೆ ಇಲ್ಲದೆ ಇದ್ದರೆ ಜಂಗಲ್ ಕಟ್ಟಿಂಗ್ ಪ್ರಕ್ರಿಯೆ ಶುರುವಾಗಲಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಎಂಜಿನಿಯರ್ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿದ್ಯುತ್ ಮೇಲೆ ಲೋಡ್ ಬಿದ್ದು ಕಡಿತ’

‘ಬೇಸಿಗೆಯಲ್ಲಿ ಎ.ಸಿ., ಫ್ಯಾನ್, ಕೂಲರ್ಗಳು ಹೆಚ್ಚಾಗಿ ಬಳಸುವುದರಿಂದ ಟಿ.ಸಿ.ಗಳ ಮೇಲೆ ಲೋಡ್ ಬಿದ್ದು ಕಡಿತವಾಗುತ್ತದೆ. ದೂರು ಬಂದ ತಕ್ಷಣವೇ ಅವುಗಳನ್ನು ಸರಿಪಡಿಸಲಾಗುತ್ತದೆ’ ಎಂದು ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಾರ್ಕಂಡೇಶ್ವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಮಸ್ಯೆ ಇರುವ ವಿದ್ಯುತ್ ಪರಿವರ್ತಕಗಳನ್ನು ಇತ್ಯರ್ಥ ಮಾಡಲಾಗಿದೆ. ನಾಲ್ಕು ದಿನಗಳ ಹಿಂದಿನ ಗಾಳಿ ಮಳೆಗೆ ಐದಾರು ಟಿಸಿಗಳಲ್ಲಿ ತೊಂದರೆ ಕಂಡುಬಂದಿತ್ತು. ಅವುಗಳನ್ನು ಸರಿಪಡಿಸಲಾಗಿದೆ. ಗಾಳಿ ಮಳೆಯಾದಾಗ ಫ್ಯೂಸ್ ಕಟ್ ಆಗುವುದು, ಕಾರ್ಬನ್ ಬಂದು ಕಡಿತ ಆಗುವಂತಹ ಸಾಕಷ್ಟು ದೂರುಗಳು ಬರುತ್ತಿವೆ. ನಮ್ಮ ಸಿಬ್ಬಂದಿ ಅವುಗಳನ್ನು ಅಟೆಂಡ್ ಮಾಡಿ ದುರಸ್ತಿ ಮಾಡುತ್ತಿರುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.