ಯಾದಗಿರಿ: ಕಳೆದ ಮೂರು ವರ್ಷಗಳ ಅವಧಿಯಲ್ಲಿ ಗರ್ಭಿಣಿಯರ ದಾಖಲಾತಿ ಮತ್ತು ಅದರ ಫಲಿತಾಂಶಗಳ ಸಂಪೂರ್ಣ ವಿವರವನ್ನು ಹತ್ತು ದಿನಗಳ ಒಳಗಾಗಿ ಸಲ್ಲಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈಚೆಗೆ ನಡೆದ ಶಿಶು ಮರಣ, ನಿರ್ಜೀವ ಜನನ ಹಾಗೂ ಗರ್ಭಪಾತಗಳ ಕುರಿತ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ವೈದ್ಯಾಧಿಕಾರಿಗಳು ಪ್ರತಿ ತಿಂಗಳು ಗಂಡಾಂತರ ಗರ್ಭಿಣಿಯರನ್ನು ಗುರುತಿಸಿ ಮೂರನೇ ತ್ರೈಮಾಸಿಕ ಮತ್ತು ನಿರೀಕ್ಷಿತ ಹೆರಿಗೆ ದಿನಾಂಕದ ಮೊದಲು 7 ದಿನಗಳಲ್ಲಿ ಆರೋಗ್ಯ ಪರಿಶೀಲಿಸಲು ಆಸ್ಪತ್ರೆಗೆ ದಾಖಲಿಸಬೇಕು’ ಎಂದು ಹೇಳಿದರು.

‘ಆಶಾ ಕಾರ್ಯಕರ್ತೆಯರು ಗೃಹ ಆಧಾರಿತ ನವಜಾತ ಶಿಶು ಆರೈಕೆಯನ್ನು (ಎಚ್ಬಿಎನ್ಸಿ) ಕಡ್ಡಾಯವಾಗಿ ಮಾಡಬೇಕು. ಮನೆ ಭೇಟಿ ನೀಡಿ ನವಜಾತ ಶಿಶುಗಳ ಆರೋಗ್ಯ ತಪಾಸಣೆ ಮಾಡಬೇಕು. ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ಸಂಬಂಧಪಟ್ಟ ವೈದ್ಯಾಧಿಕಾರಿಗಳ ಗಮನಕ್ಕೆ ತರಬೇಕು’ ಎಂದು ಸೂಚಿಸಿದರು.

‘ವೈದ್ಯಾಧಿಕಾರಿಗಳು ಪ್ರತಿವಾರ ವಾರದ ಸಭೆಯನ್ನು ಹಮ್ಮಿಕೊಂಡು ಆಶಾ ಕಾರ್ಯಕರ್ತೆಯರ ದಿನಚರಿಯನ್ನು ಪರಿಶೀಲಿಸಬೇಕು’ ಎಂದು ತಾಕೀತು ಮಾಡಿದರು.

‘2025-26ನೇ ಸಾಲಿನಲ್ಲಿ 25,612 ಹೆರಿಗೆಗಳಾಗಿದ್ದು, ಅದರಲ್ಲಿ 102 ಶಿಶುಮರಣಗಳಾಗಿವೆ. 91 ಶಿಶುಮರಣಗಳು ಬೇರೆ ಜಿಲ್ಲೆಯಲ್ಲಿ ಸಂಭವಿಸಿರುತ್ತವೆ. ಗುತ್ತಿಬಸವೇಶ್ವರ, ದೇವರಗೋನಾಳ, ಕಲದೇವನಹಳ್ಳಿ, ಬಳಿಚಕ್ರ, ಗಾಜರಕೋಟ, ಕೋಟಗೇರಾ ಮತ್ತು ಮಾದ್ವಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶಿಶುಮರಣ ಶೂನ್ಯವಾಗಿದೆ’ ಎಂದರು.

‘ಶೂನ್ಯ ಮತ್ತು ಅತಿ ಕಡಿಮೆ ಶಿಶುಮರಣ ಸಂಭವಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರಿಶೀಲನೆ ಮಾಡಿ ವರದಿ ನೀಡಬೇಕು. 2025-26ನೇ ಸಾಲಿನಲ್ಲಿ 117 ನಿರ್ಜೀವ ಜನನ ಸಂಭವಿಸಿರುತ್ತವೆ. ಶಹಾಪುರದಲ್ಲಿ 32, ಸುರಪುರದಲ್ಲಿ 70 ಮತ್ತು ಯಾದಗಿರಿಯಲ್ಲಿ 15 ನಿರ್ಜೀವ ಜನನವಾಗಿದೆ’ ಎಂದು ಹೇಳಿದರು.

‘ಮಾರ್ಚ್ ತಿಂಗಳಲ್ಲಿ 36 ಗರ್ಭಪಾತ ಸಂಭವಿಸಿವೆ. ಶಹಾಪುರದಲ್ಲಿ 14, ಸುರಪುರದಲ್ಲಿ 12 ಹಾಗೂ ಯಾದಗಿರಿಯಲ್ಲಿ 11 ಪ್ರಕರಣಗಳು ಕಂಡುಬಂದಿವೆ’ ಎಂದರು.

‘ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮಾಡಲಾದ ಹೆರಿಗೆಗಳ ದಾಖಲಾತಿಯನ್ನು ಆರ್ಸಿಎಚ್ ಪೋರ್ಟಲ್ನಲ್ಲಿ ಹೆರಿಗೆ ಕಾಲಂನಲ್ಲಿ ನಮೂದು ಮಾಡಿಲ್ಲ. ಬದಲಿಗೆ ನೇರವಾಗಿ ಮಕ್ಕಳ ನೋಂದಣಿ ಕಾಲಂನಲ್ಲಿ ನಮೂದಿಸಿದ್ದರಿಂದ ಗರ್ಭಿಣಿಯರ ಫಲಿತಾಂಶದಲ್ಲಿ ವ್ಯತ್ಯಾಸವಾಗಿದೆ’ ಎಂದು ಹೇಳಿದರು.

ಸಭೆಯಲ್ಲಿ ಡಿಎಚ್ಒ ಡಾ. ಮಹೇಶ್ ಬಿರಾದಾರ, ಜಿಲ್ಲಾ ಆರ್ಸಿಎಚ್ಒ ಡಾ.ಕೆ.ಮಲ್ಲಪ್ಪ ಸೇರಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-30-1018899576

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.