ಶನಿವಾರ, ಜುಲೈ 2, 2022
27 °C
ಗಣಿತಶಾಸ್ತ್ರ–2,229, ಶಿಕ್ಷಣಶಾಸ್ತ್ರ– 111 ವಿದ್ಯಾರ್ಥಿ ನೋಂದಣಿ

ಪಿಯು ಪರೀಕ್ಷೆ: 135 ವಿದ್ಯಾರ್ಥಿ ಗೈರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ದ್ವಿತೀಯ ಪಿಯು ಪರೀಕ್ಷೆಯ ಎರಡನೇ ದಿನವಾದ ಶನಿವಾರ ಗಣಿತಶಾಸ್ತ್ರ ಮತ್ತು ಶಿಕ್ಷಣಶಾಸ್ತ್ರದ ವಿಷಯದ ಪರೀಕ್ಷೆ ನಡೆದವು.

95 ಕಾಲೇಜುಗಳ 17 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಗಣಿತಶಾಸ್ತ್ರದ 2,229 ವಿದ್ಯಾರ್ಥಿಗಳು ಹೆಸರು ನೋಂದಣಿ ಮಾಡಿದ್ದರು. ಇದರಲ್ಲಿ 2,201 ವಿದ್ಯಾರ್ಥಿಗಳು ಹಾಜರಾಗಿ, 115 ವಿದ್ಯಾರ್ಥಿಗಳು ಗೈರಾದರು.

ಶಿಕ್ಷಣಶಾಸ್ತ್ರದ ಪರೀಕ್ಷೆಗೆ 111 ಹೆಸರು ನೋಂದಾಯಿಸಿದ್ದು 20 ವಿದ್ಯಾರ್ಥಿಗಳು ಗೈರಾದರು.

ಹುಣಸಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 45 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರೆ, 37 ಹಾಜರಾಗಿ, 8 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಸುರಪುರ ನಗರದ ರಂಗಂಪೇಟೆಯ ಅಂಬೇಡ್ಕರ್‌ ಪದವಿ ಪೂರ್ವ ಕಾಲೇಜಿನಲ್ಲಿ 50 ವಿದ್ಯಾರ್ಥಿಗಳು ಹಾಜರಾಗಿ, 12 ವಿದ್ಯಾರ್ಥಿಗಳು ಪರೀಕ್ಷೆ ಬರೆದಿಲ್ಲ. ಶಹಾಪುರದ ಸರ್ಕಾರಿ ‍ಪದವಿ ಪೂರ್ವ ಕಾಲೇಜಿನಲ್ಲಿ ನಾಲ್ವರು ವಿದ್ಯಾರ್ಥಿಗಳು ಹೆಸರು ನೋಂದಾಯಿಸಿ ಅಷ್ಟು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾದರು.

ಗಣಿತಶಾಸ್ತ್ರದ ಪರೀಕ್ಷೆಯಲ್ಲಿ ಯಾದಗಿರಿ ನಗರದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು 14, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು 3, ನ್ಯೂ ಕನ್ನಡ 1 ಮತ್ತು ಸಭಾ ಪಿಯು ಕಾಲೇಜು 5 ವಿದ್ಯಾರ್ಥಿಗಳು ಗೈರಾಗಿದ್ದರು.

ಜಿಲ್ಲೆ ವ್ಯಾಪ್ತಿಯ ಶಹಾಪುರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು 20, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು 8, ಭೀಗುಡಿ ಪದವಿ ಪೂರ್ವ ಕಾಲೇಜು 2, ಸಿಬಿ ಪಿಯು ಕಾಲೇಜು 3, ಸುರಪುರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು 12, ರಂಗಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು 4, ಪ್ರಭು ಪಿಯು ಕಾಲೇಜು 1, ರಂಗಪೇಟೆ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಪದವಿ ಪೂರ್ವಕಾಲೇಜು 9, ಕೆಂಭಾವಿಯ ಸರ್ಕಾರಿ ಪದವಿ ಪೂರ್ವ ಕಾಲೇಜು 7, ಗುರುಮಠಕಲ್‌ನ ಸರ್ಕಾರಿ ಪದವಿ ಪೂರ್ವ ಕಾಲೇಜು 2, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು 4 ಹಾಗೂ ಹುಣಸಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 3 ವಿದ್ಯಾರ್ಥಿಗಳು ಪರೀಕ್ಷೆಯಿಂದ ದೂರ ಉಳಿದಿದ್ದರು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು