ಯಾದಗಿರಿ: ಬಿರು ಬೇಸಿಗೆಯ ಬಿಸಿಲ ಝಳ ಕಡಿಮೆಯಾಗಿ ಗುಡುಗು ಮಿಂಚು ಸಹಿತ ಮಳೆಯ ಸಿಂಚನಾಗುತ್ತಿದ್ದು, ಸುಡುತ್ತಿದ್ದ ಇಳೆಯು ತಂಪಾಗುತ್ತಿದೆ. ಆದರೆ, ನಗರಸಭೆಯ ಸಿಬ್ಬಂದಿ ಮಳೆಗಾಲಕ್ಕೆ ಸಿದ್ಧವಾಗದ ಕಾರಣ ನಗರದ ಒಳಚರಂಡಿ ವ್ಯವಸ್ಥೆಯ ದುಸ್ಥಿಯನ್ನು ಬಿದ್ದ ಅಲ್ಪ ಮಳೆ ಎತ್ತಿ ತೋರಿಸಿತು.

ಯಾದಗಿರಿ ನಗರದಲ್ಲಿ ಬುಧವಾರ ಮುಂಜಾನೆ ಗುಡುಗು, ಮಿಂಚು ಸಹಿತ 39 ಮಿ.ಮೀಟರ್ನಷ್ಟು ಮಳೆಯಾಯಿತು. ಪ್ರಮುಖ ರಸ್ತೆಗಳ ಬದಿಯ ಚರಂಡಿಗಳಲ್ಲಿ ನೀರು ಹರಿದು ಹೋಗದೆ ರಸ್ತೆಗಳ ಮೇಲೆ ಮೊಳಕಾಲುದ್ದ ಹರಿದು, ಸಾರ್ವಜನಿಕರ ಓಡಾಟಕ್ಕೆ ಅಡ್ಡಿ ಮಾಡಿತು. ಜನವಸತಿ ಪ್ರದೇಶಗಳ ತಗ್ಗು ಪ್ರದೇಶ, ರಸ್ತೆಯ ಬದಿ, ಚರಂಡಿಗಳಲ್ಲಿ ನೀರು ನಿಂತಿತು.

ಮಳೆಯಿಂದ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ನಗರಸಭೆ ಇನ್ನೂ ಸಜ್ಜಾಗಿಲ್ಲ ಎನ್ನುವುದನ್ನು ಈ ಮಳೆಯೂ ಸಾಬೀತು ಮಾಡಿತು. ಪೂರ್ವಮುಂಗಾರು ಮಳೆ ಈಗಷ್ಟೇ ಆರಂಭವಾಗಿದೆ. ಮಳೆಗಾಲಕ್ಕೂ ಮುನ್ನ ನಗರದ ಚರಂಡಿ, ಕಾಲುವೆಗಳನ್ನು ಸ್ವಚ್ಛಗೊಳಿಸಿ, ಸುಸಜ್ಜಿತವಾಗಿ ಇರಿಸುವ ಕೆಲಸವನ್ನು ನಗರಸಭೆಯು ಮರೆತಂತೆ ಇದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ಕೆರೆಯಂತಾದ ರೈಲ್ವೆ ಸ್ಟೇಷನ್ ರಸ್ತೆ: ಮಳೆಯಿಂದಾಗಿ ನಗರದ ರೈಲ್ವೆ ಸ್ಟೇಷನ್ ರಸ್ತೆಯು ಕೆರೆಯಂತೆ ಆಗಿ ಪ್ರಯಾಣಿಕರು, ವಾಹನ ಚಾಲಕರು ಪರದಾಡಿದರು. ಆರಕ್ಷಕ ವೃತ್ತ ನಿರೀಕ್ಷಿಕರ ಕಚೇರಿಯಿಂದ ಸಾಯಿ ಪ್ಯಾಲೆಸ್ ಹೋಟೆಲ್ ವರೆಗಿನ ರಸ್ತೆ ಮೇಲೆ ಮೊಣಕಾಲುದ್ದು ನೀರು ಹರಿದಾಡಿತು.

‘ವ್ಯಾಪಾರಸ್ಥರು ಪಾದಚಾರಿ, ಮಾರ್ಗ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಚರಂಡಿಯಲ್ಲಿ ತುಂಬಿರುವ ತ್ಯಾಜ್ಯ ತೆಗೆಯಲು ಆಗುತ್ತಿಲ್ಲ. ನಗರಸಭೆಯ ಗಮನಕ್ಕೆ ತಂದರೂ ಕಿವಿಗೊಡುತ್ತಿಲ್ಲ. ಮಳೆಯಾದಾಗ ರೈಲು ನಿಲ್ದಾಣ, ಹಳೇ ಬಸ್ ನಿಲ್ದಾಣಕ್ಕೆ ಹೋಗಲು ಪ್ರಯಾಣಿಕರು, ಸ್ಥಳೀಯರು ಪರದಾಡುವಂತೆ ಆಗಿದೆ. ಒತ್ತುವರಿ ರಸ್ತೆ ತೆರವು ಮಾಡಿ, ಚರಂಡಿ ಸ್ವಚ್ಛಗೊಳಿಸಬೇಕು’ ಎನ್ನುತ್ತಾರೆ ಸ್ಥಳೀಯ ನಿವಾಸಿಗಳಾದ ಶಶಿಧರ್ ಮತ್ತು ಅನಿಲ್.

ಆರ್ಟಿಒ ಕಚೇರಿಯ ಮುಂಭಾಗದ ವಿಶ್ವಾರಾಧ್ಯ ನಗರದ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಮಾಣದ ನೀರು ಸಂಗ್ರಹಗೊಂಡಿತು. ಚರಂಡಿಗಳಲ್ಲಿ ತ್ಯಾಜ್ಯ ತುಂಬಿಕೊಂಡಿತ್ತು. ನಗರಸಭೆಯ ಸಿಬ್ಬಂದಿ ಜೆಸಿಬಿ ಮೂಲಕ ಚರಂಡಿಗಳಲ್ಲಿನ ತ್ಯಾಜ್ಯ ತೆರವು ಮಾಡಿ ನೀರು ಹರಿದು ಹೋಗುವಂತೆ ಮಾಡಿದರು.

ಕೋಲಿವಾಡ ಸಮೀಪದ ಜನವಸತಿ ಸುತ್ತಲ್ಲಿನ ತಗ್ಗು ಪ್ರದೇಶಗಳಲ್ಲಿ ಮಳೆ ಹಾಗೂ ಚರಂಡಿಯ ಕೊಳಚೆ ನೀರು ನಿಲ್ಲುತ್ತಿದೆ. ಇದರಿಂದ ಸೊಳ್ಳೆಗಳು ಹುಟ್ಟಿಕೊಳ್ಳುತ್ತಿದ್ದು, ಎಲ್ಲೆಡೆ ದುರ್ಗಂಧ ಹರಡುತ್ತಿದೆ. ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದ್ದರೂ ನಗರಸಭೆ ನೀರು ನಿಲ್ಲುವ ಜಾಗಗಳನ್ನು ಗುರುತಿಸಿ ಅಲ್ಲಿನ ಸಮಸ್ಯೆಯನ್ನು ಪರಿಹರಿಸುವ ಗೋಜಿಗೆ ಹೋಗುತ್ತಿಲ್ಲ ಎಂದು ಸ್ಥಳೀಯರು ದೂರಿದರು.

ಎಪಿಎಂಸಿ ಆವರಣ, ಹೊಸ ಬಸ್ ನಿಲ್ದಾಣ, ಚಕ್ರಕಟ್ಟಾ, ಚಿತ್ತಾಪುರ ರಸ್ತೆ, ಹಳೆ, ಕನಕದಾಸ ವೃತ್ತ, ಹೊಸಳ್ಳಿ ಕ್ರಾಸ್, ಲಕ್ಷ್ಮಿ ನಗರ, ಕೋಳಿವಾಡ, ಗಂಜ್ ಪ್ರದೇಶ, ರಾಜೀವ ಗಾಂಧಿ ನಗರ, ಲುಂಬಿನಿ ಉದ್ಯಾನ ರಸ್ತೆ ಸೇರಿ ಹಲವೆಡೆಯ ರಸ್ತೆಗಳಲ್ಲಿ ಮಳೆಯ ನೀರು ಹರಿದಾಡಿತು. ಕೆಲವೆಡೆಗಳಲ್ಲಿ ರಸ್ತೆಯ ಉದ್ದಕ್ಕೂ ಮೊಳಕಾಲುದ್ದ ನಿಂತು ಸುಗಮ ಸಂಚಾರಕ್ಕೆ ಅಡ್ಡಿಪಡಿಸಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-30-587126330

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.