ಯಾದಗಿರಿ: ಹೈದರಾಬಾದ್ ಮೂಲದ ಶಾಸಕ ರಾಜಾಸಿಂಗ್ ಠಾಕೂರ್ ಅವರಿಗೆ ಯಾದಗಿರಿ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಛತ್ರಪತಿ ಶಿವಾಜಿ ಮಹಾರಾಜ ಸೇನಾ ಹಾಗೂ ವೀರ ಸಾವರ್ಕರ ಸೇನಾ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ಮಾಡಿದರು.

ಇಲ್ಲಿನ ನೇತಾಜಿ ವೃತ್ತದಲ್ಲಿ ರಸ್ತೆ ತಡೆದ ಪ್ರತಿಭಟನಕಾರರು ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು. ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಶಾಸಕ ಟಿ. ರಾಜಾಸಿಂಗ್ ಅವರಿಗೆ ಜಿಲ್ಲೆಗೆ ಬರದಂತೆ ನಿರ್ಬಂಧ ವಿಧಿಸಿದ್ದು ಅಸಂವಿಧಾನಿಕವಾಗಿದೆ. ತಕ್ಷಣವೇ ನಿರ್ಬಂಧವನ್ನು ಹಿಂಪಡೆದು ಶಿವಾಜಿ ಜಯಂತಿ ಉತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡಬೇಕು ಎಂದು ಕೋರಿದರು.

ಏಪ್ರಿಲ್ 18ರಂದು ಗಾಂಧಿ ವೃತ್ತದಲ್ಲಿ ಶಿವಾಜಿ ಜಯಂತಿ ಆಚರಿಸಲು ಉದ್ದೇಶಿಸಿ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಹತ್ತಿಕುಣಿ ರಸ್ತೆಯ ಕಡೆಗೆ ಮೆರವಣಿಗೆ ತೆರಳ ಬಾರದು ಎಂದು ಹೇಳಿ ಕಾರ್ಯಕ್ರಮವನ್ನು ರದ್ದು ಮಾಡಿದ್ದರು. ಕಳೆದ ಮೂರು ವರ್ಷಗಳಿಂದ ಇದೇ ರಸ್ತೆಯಲ್ಲಿ ಮೆರವಣಿಗೆ ಮಾಡಿ ಶಾಂತಿಯುತವಾಗಿ ಜಯಂತಿ ಆಚರಿಸಿದ್ದೇವೆ. ಆದರೆ, ಈ ವರ್ಷ ಬೇರೆಯದ್ದೆ ನೆಪ ಹೇಳಿ ಮೆರವಣಿಗೆಗೆ ಅನುಮತಿಸಲಿಲ್ಲ ಎಂದು ಆರೋಪಿಸಿದರು.

ಒಂದು ತಿಂಗಳು ಸತಾಯಿಸಿ ಮೇ 21ರಂದು ಶಿವಾಜಿ ಜಯಂತಿ ಆಚರಣೆಗೆ ಅನುಮತಿ ನೀಡಲಾಯಿತು. ಎರಡು ದಿನಗಳಲ್ಲಿ ಕಾರ್ಯಕ್ರಮಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡು, ಶಾಸಕ ರಾಜಾಸಿಂಗ್ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಜಿಲ್ಲಾಡಳಿತ ಅನುಮತಿ ಕೊಟ್ಟ ಬಳಿಕವೂ ರಾಜಾಸಿಂಗ್ ಅವರಿಗೆ ಜಿಲ್ಲೆಗೆ ಬರದಂತೆ ನಿರ್ಬಂಧ ವಿಧಿಸಿದೆ. ಅವರಿಗೆ ನೋಟಿಸ್ ಕೊಟ್ಟಿಲ್ಲ, ಅವರಿಂದ ಉತ್ತರವೂ ಪಡೆದಿಲ್ಲ ಎಂದು ದೂರಿದರು.

ಮಾತನಾಡುವ ಸ್ವಾತಂತ್ರ್ಯದ ಹಕ್ಕು ಪ್ರತಿಯೊಬ್ಬರಿಗೆ ಇದೆ ಎಂಬುದನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಆದರೆ, ಜಿಲ್ಲಾಧಿಕಾರಿಗಳು ನಾವು ಆಯೋಜಿಸಿದ ಕಾರ್ಯಕ್ರಮದ ಕುರಿತು ನಡೆದುಕೊಂಡ ನಡವಳಿಕೆಗಳು ಅನುಮಾನ ಮೂಡಿಸುತ್ತಿದೆ. ಇದರ ಹಿಂದೆ ಕಾಣದ ಕೈಗಳು ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೊಸ ಜಿಲ್ಲಾಧಿಕಾರಿ ಶಿವಾಜಿ ಜಯಂತಿ ಆಚರಣೆಗೆ ಅನಕಾಶ ಮಾಡಿಕೊಡಬೇಕು ಎಂದು ಪ್ರತಿಭಟನಕಾರರು ಕೋರಿದರು.

ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಅವರಿಗೆ ಮನವಿ ಪತ್ರ ಸಲ್ಲಿಕೆ ಮಾಡಿದರು.

ಪ್ರತಿಭಟನೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಸೇನಾ ಅಧ್ಯಕ್ಷ ಪರಶುರಾಮ ಶೇಗುರಕರ್, ವೀರ ಸಾವರ್ಕರ ಸೇನಾ ಜಿಲ್ಲಾ ಅಧ್ಯಕ್ಷ ತ್ಯಾಗರಾಜ ತಾಂಡೂರಕರ್, ಪ್ರಮುಖರಾದ ಸುರೇಶ ನಾಯಕ, ಪವನ ಲಿಂಗೇರಿ ಸೇರಿ ಇತರರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-30-1298631925

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.