ಯಾದಗಿರಿ: ‘ಗುರುಗಳಲ್ಲಿ ಪ್ರಾರ್ಥಿಸ ಬೇಕಾಗಿರುವುದು ಅನುಗ್ರಹ. ಗುರುಕೃಪೆ ನಮ್ಮ ಮೇಲೆ ಹರಿಯಿತೆಂದರೆ ಸಕಲವೂ ಲಭಿಸುತ್ತದೆ’ ಎಂದು ಪಂಡಿತ್ ನರಸಿಂಹಾಚಾರ್ ಪುರಾಣಿಕ ಹೇಳಿದರು.

ಶ್ರೀಮದ್ ಉತ್ತರಾದಿ ಮಠ ಹಾಗೂ ವಿಶ್ವ ಮಾಧ್ವ ಮಹಾ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಇಲ್ಲಿನ ಉತ್ತರಾದಿ ಮಠ ರಾಘವೇಂದ್ರ ಸ್ವಾಮಿಗಳ ಪರಿಮಳ ಮಂಟಪದಲ್ಲಿ ಭಾನುವಾರ ನಡೆದ ಧಾರ್ಮಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕಲಿಕಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

‘ಶಾಸ್ತ್ರಗಳು, ವಿದ್ಯೆಯನ್ನು ಪಡೆಯುವುದು ದೊಡ್ಡ ಸಾಧನೆ ಆಗಲಾರದು. ವಿದ್ಯೆಯ ಜೊತೆಗೆ ನಮ್ರತೆಯೂ ಇರಬೇಕು. ವಿದ್ಯೆಯು ವಿನಯದಿಂದ ಭೂಷಿತವಾದಾಗ ಮಾತ್ರ ಅದು ಪರಿಪೂರ್ಣವಾಗಿ ನಮಗೆ ದೊರಕುತ್ತದೆ’ ಎಂದರು.

ಏಳು ದಿನ ನಡೆದ ಶಿಬಿರದಲ್ಲಿ ದೇವರ ನಾಮ, ದೇವರ ಸ್ತೋತ್ರಗಳು, ಹರಿಕಥಾಮೃತಸಾರ, ತ್ರಿಕಾಲ ಸಂಧ್ಯಾವಂದನೆ, ಸೂಳಾದಿಗಳು, ನಿತ್ಯ ನೈಮೆತಿಕ ವಿಚಾರ, ಯತಿಗಳ ದಾಸರ ಪರಿಚಯ ಸೇರಿ ವಿವಿಧ ಧಾರ್ಮಿಕ ಚಟುವಟಿಕೆಗಳನ್ನು ತಿಳಿಸಿ ಕೊಡಲಾಯಿತು.

ಮಠದ ವ್ಯವಸ್ಥಾಪಕ ರಾಘವೇಂದ್ರ ಜೋಶಿ ಅವರು ಕಲಿಕಾರ್ಥಿಗಳಿಗೆ ವ್ಯವಸ್ಥೆಯನ್ನು ಕಲ್ಪಿಸಿದರು. ಪತ್ರಕ ರ್ತರಾದ ದಿನೇಶ ವಿಸಿ ಮತ್ತು ಲಕ್ಷ್ಮಿಕಾಂತ್ ಕುಲಕರ್ಣಿ ಅವರಿಗೆ ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-30-1094779176

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.