ಭಾನುವಾರ, ಜೂಲೈ 12, 2020
25 °C

ಯಾದಗಿರಿ | ರಜೆ ಇಲ್ಲದೆ ಜವಾಬ್ದಾರಿ ನಿರ್ವಹಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಲಾಕ್‌ಡೌನ್‌ ಆದ 45 ದಿನಗಳ ತನಕ ಕೋವಿಡ್‌ ಪತ್ತೆಯಾಗಿರಲಿಲ್ಲ. ಜಿಲ್ಲೆ ಹಸಿರು ವಲಯದಲ್ಲಿ ಗುರುತಿಸಿಕೊಂಡಿತ್ತು. ಜಿಲ್ಲೆಯಲ್ಲಿ ಎಲ್ಲಿಂದಾದರೂ ಕೋವಿಡ್‌ ಪತ್ತೆಯಾಗುತ್ತದೆ ಎಂಬುದನ್ನು ಅರಿತು ಅದನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಊಹಿಸಿದಂತೆ ಮೊದಲು ಇಬ್ಬರಲ್ಲಿ ಕೋವಿಡ್‌ ಪತ್ತೆಯಾಯಿತು. ಆನಂತರ ಕೋವಿಡ್‌ ‍ಪೀಡಿತರ ಸಂಖ್ಯೆ ಏರುತ್ತಲೇ ಇತ್ತು. ಈಗ ನಿಯಂತ್ರಣಕ್ಕೆ ಬಂದಿದೆ.

ರಾತ್ರಿ 9.30ಕ್ಕೆ ಪಾಸಿಟಿವ್‌ ಬಂದವರ ಕುರಿತು ಬೆಂಗಳೂರಿನಿಂದ ಕರೆ ಬರುತ್ತಿತ್ತು. ಅಲ್ಲಿಗೆ ಮಾಹಿತಿ ನೀಡುತ್ತೇವೆ. ಇನ್ನು ಕ್ವಾರಂಟೈನ್‌ ಇರುವವರನ್ನು ಪತ್ತೆ ಹಚ್ಚುವುದೇ ಸವಾಲು. ಸೋಂಕಿತರನ್ನು ಗುರುತಿಸಿ ಕೋವಿಡ್‌ ಆಸ್ಪತ್ರೆಗೆ ಕರೆ ತರಬೇಕಾಗುತ್ತೆ. ಈ ವೇಳೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರೂ ನಮ್ಮ ಕರ್ತವ್ಯ ಮಾಡಲೇಬೇಕಾಗಿತ್ತು.

ಕಳೆದ ವರ್ಷ ನನಗೆ ಬೈ‍ಪಾಸ್‌ ಸರ್ಜರಿ ಆಗಿದೆ. ಆದರೂ ಕೆಲಸ ಮಾಡಲು ಹೆದರಿಲ್ಲ. ನಮ್ಮ ಸಿಬ್ಬಂದಿಗೂ ಭಯಬೇಡ, ಆತ್ಮವಿಶ್ವಾಸ ಇರಲಿ ಎಂದು ಹೇಳುತ್ತೇನೆ. ಲಾಕ್‌ಡೌನ್‌ ವೇಳೆ ಮಗಳು ಬೆಂಗಳೂರಿನಲ್ಲಿ ಸಿಲುಕಿಕೊಂಡಿದ್ದಳು. ಆದರೂ ನಿಯಮಗಳನ್ನು ಮೀರಿ ಕರೆಸಿಕೊಳ್ಳಲಿಲ್ಲ.

**

ಇನ್ನು ದಿನಕ್ಕೆ ಹತ್ತಾರು ಸಭೆಗಳು ನಡೆಯುತ್ತವೆ. ವಿಡಿಯೊ ಕಾನ್ಫ್‌ರೆನ್ಸ್‌ನಲ್ಲಿ ಭಾಗವಹಿಸಬೇಕಾಗುತ್ತದೆ. ನಾನು ಸೇರಿದಂತೆ ನಮ್ಮ ಸಿಬ್ಬಂದಿ ರಜೆ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದೇವೆ.
-ಡಾ.ಎಂ.ಎಸ್.ಪಾಟೀಲ, ಡಿಎಚ್ಒ, ಯಾದಗಿರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು