ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 20ರಷ್ಟು ಏರಿಕೆಯಾದ ಫಲಿತಾಂಶ

2018–19ರಲ್ಲಿ ಶೇ 58, 2021–22ರಲ್ಲಿ ಶೇ 78.69
Last Updated 19 ಮೇ 2022, 16:36 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ 2021–2022ನೇ ಸಾಲಿನಲ್ಲಿ ಶೇ 78.69 ಫಲಿತಾಂಶ ಬಂದಿದ್ದು, ಶೇ 20ರಷ್ಟು ಏರಿಕೆಯಾಗಿದೆ. ಕೊರೊನಾಗಿಂತ ಹಿಂದೆ 2018–19ರಲ್ಲಿ ಶೇ 58 ರಷ್ಟು ಫಲಿತಾಂಶ ಬಂದಿತ್ತು. 2020–21ನೇ ಸಾಲಿನಲ್ಲಿ ಕೋವಿಡ್‌ ಕಾರಣ ಶೇ 100ರಷ್ಟು ಫಲಿತಾಂಶ ಬಂದಿದೆ.

2021-22ರ ಸಾಲಿನಲ್ಲಿ 16,413 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 12,915 ಉತ್ತೀರ್ಣರಾಗಿದ್ದಾರೆ. ಸುರಪುರ ತಾಲ್ಲೂಕಿನಲ್ಲಿ ಹೆಚ್ಚು ಫಲಿತಾಂಶ ಬಂದಿದೆ. 18,656 ಒಟ್ಟಾರೆ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. 71 ಪರೀಕ್ಷಾ ಕೇಂದ್ರಗಳು ಇದ್ದವು.

ಶಹಾಪುರ ತಾಲ್ಲೂಕಿನಲ್ಲಿ 75, ಸುರಪುರ ತಾಲ್ಲೂಕಿನಲ್ಲಿ 85, ಯಾದಗಿರಿ ತಾಲ್ಲೂಕಿನಲ್ಲಿ 84 ಪ್ರೌಢಶಾಲೆ ಸೇರಿದಂತೆ 244 ಪ್ರೌಢಶಾಲೆಗಳಿವೆ.

ತಾಲ್ಲೂಕುವಾರು ಫಲಿತಾಂಶ: ಶಹಾಪುರ ತಾಲ್ಲೂಕಿನಲ್ಲಿ ಬಾಲಕ 2,656, ಬಾಲಕಿಯರು 2,516, ಸುರಪುರ ತಾಲ್ಲೂಕಿನಲ್ಲಿ ಬಾಲಕ 2,699, ಬಾಲಕಿಯರು 2,426, ಯಾದಗಿರಿ ತಾಲ್ಲೂಕಿನಲ್ಲಿ ಬಾಲಕ 3168, ಬಾಲಕಿಯರು 2,948 ಸೇರಿದಂತೆ 16,413 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಶಹಾಪುರ ತಾಲ್ಲೂಕಿನಲ್ಲಿ ಶೇ 77.17, ಸುರಪುರ ತಾಲ್ಲೂಕಿನಲ್ಲಿ ಶೇ 80.70, ಯಾದಗಿರಿ ತಾಲ್ಲೂಕಿನಲ್ಲಿ ಶೇ 78.29 ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ ಶೇ 78.69 ಫಲಿತಾಂಶ ಬಂದಿದೆ.

ಶಿಕ್ಷಕರ ಕೊರತೆ ನಡುವೆಯೂ ಸಾಧನೆ: ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ನಡುವೆಯೂ ಉತ್ತಮ ಸಾಧನೆ ಮಾಡಲಾಗಿದೆ. ವಿಶೇಷವಾಗಿ ಇಂಗ್ಲೀಷ್, ವಿಜ್ಞಾನ, ಗಣಿತ ಬೋಧಕರ ಸಂಖ್ಯೆ ಮಂಜೂರಿಗಿಂತ ಕಡಿಮೆ ಇದೆ. ಕೇವಲ ಅತಿಥಿ ಶಿಕ್ಷಕರಿಂದಲೇ ಶಾಲೆಗಳನ್ನು ನಡೆಸಲಾಗುತ್ತಿದೆ. ಆದರೂ ಕಳೆದ ಎರಡು ವರ್ಷಗಳಿಗಿಂತ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ. ಪ್ರತಿ ವರ್ಷ ಕಳಪೆ ಮಟ್ಟದ ಫಲಿತಾಂಶದಿಂದ ಜಿಲ್ಲೆ ಕೊನೆ ಸ್ಥಾನ ಎನ್ನುವಂತೆ ಆಗಿದೆ. ಈ ಬಾರಿ ಬಿ ಗ್ರೇಡ್‌ ಪಡೆದಿದೆ. ಸ್ಥಾನಗಳಲ್ಲಿ ಕೊನೆಯಲ್ಲಿದೆ.

***

ನಾಲ್ಕು ಶಾಲೆಗಳಿಗೆ ಶೂನ್ಯ ಫಲಿತಾಂಶ

ಜಿಲ್ಲೆಯ 4 ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸೊನ್ನೆ ಫಲಿತಾಂಶ ಬಂದಿದೆ. ಇದರಿಂದ ಒಟ್ಟಾರೆ ಫಲಿತಾಂಶದ ಮೇಲೆಯೂ ಪರಿಣಾಮ ಬಿದ್ದಿದೆ.

ಸುರಪುರ ತಾಲ್ಲೂಕಿನ ಮಲ್ಲಾ ಬಿ ಗ್ರಾಮದ ರಾಮಗುಂಡಪ್ಪಗೌಡ ಬಿರಾದಾರ ಸ್ಮಾರಕ ಪ್ರೌಢಶಾಲೆ, ತಿಂಥಣಿ ಶಾಂತಪುರ ಕ್ರಾಸ್‌ ಸಮೀಪದ ಬಸಪ್ಪ ಮಲ್ಲಪ್ಪ ಪಾಟೀಲ ಪ್ರೌಢಶಾಲೆ, ಹಸನಪುರ ಯುಕೆಪಿ ಕಾಡಾ ಕ್ಯಾಂಪ್‌ನ ಡಾ.ಬಾಬಾ ಸಾಹೇಬ ಅಂಬೇಡ್ಕರ್‌ ಪ್ರೌಢಶಾಲೆ, ಶಹಾಪುರ ತಾಲ್ಲೂಕಿನ ಕನ್ನೆಕೊಳ್ಳೂರು ಬಾಬು ಜಗಜೀವನರಾಂ ಪ್ರೌಢಶಾಲೆಗಳಲ್ಲಿ ಫಲಿತಾಂಶ ಸೊನ್ನೆ ಬಂದಿದೆ.

ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳು ಅನ್ನುತ್ತೀರ್ಣ ಆಗುವ ಮೂಲಕ ಫಲಿತಾಂಶದಲ್ಲಿ ಸೊನ್ನೆ ಸುತ್ತಿದ್ದಾರೆ.
***


13 ಶಾಲೆಗಳಿಗೆ ಶೇ 100

ಜಿಲ್ಲೆಯಲ್ಲಿ 13 ಪ್ರೌಢಶಾಲೆಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದಿವೆ.

ಗುರುಮಠಕಲ್‌ನ ಸಿದ್ಧಾರ್ಥ ಪ್ರೌಢಶಾಲೆ, ಹುಣಸಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಹುಣಸಗಿ ತಾಲ್ಲೂಕಿನ ಕೋಡೆಕಲ್ಲ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬಸನಗೌಡ ನಂದನಗೌಡ ಪಾಟೀಲ ಸ್ಮಾರಕ ಪ್ರೌಢಶಾಲೆ, ರಾಜನಕೊಳ್ಳೂರು ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ, ಶಹಾಪುರ ಡಿ.ದೇವರಾಜ ಅರಸ್‌, ಸುರಪುರದ ಕುಂಬಾರಪೇಟೆ ಪ್ರೇರಣಾ ಪ್ರೌಢಶಾಲೆ, ಕೆಂಭಾವಿಯ ಹೋಲಿ ಫೆತ್‌ ಪ್ರೌಢಶಾಲೆ, ಗುಲಬಾಲ ಶ್ರೀರಾಮಲಿಂಗೇಶ್ವರ ಪ್ರೌಢಶಾಲೆ, ಸುರಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಶಹಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಶಹಾಪುರದ ಡಾ.ಬಿ.ಆರ್.ಅಂಬೇಡ್ಕರ್‌ ವಸತಿ ಶಾಲೆ, ವಡಗೇರಾ ತಾಲ್ಲೂಕಿನ ಗುರುಸುಣಗಿ ಅಜೀಂ ಪ್ರೇಮ್‌ಜಿ ಪ್ರೌಢಶಾಲೆಯಲ್ಲಿ ಶೇ 100ರಷ್ಟು ಫಲಿತಾಂಶ ಬಂದಿದೆ.

***

ಜಿಲ್ಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಉತ್ತಮವಾಗಿ ಬಂದಿದೆ. ರಾಜ್ಯಮಟ್ಟದಲ್ಲಿಯೇ ಜಿಲ್ಲೆಯೂ ಶೇ 20ರಷ್ಟು ಫಲಿತಾಂಶ ಏರಿಕೆ ಕಂಡಿದೆ
ಶಾಂತಗೌಡ ಪಾಟೀಲ, ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT