ಯಾದಗಿರಿ: ನಿವೃತ್ತ ನೌಕರರೊಬ್ಬರಿಗೆ ವಂಚಕರು ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಬೆದರಿಸಿ ₹ 53.80 ಲಕ್ಷ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಸುಲಿಗೆ ಮಾಡಿದ್ದಾರೆ.

ಕಾಜಗರ್ ವಾಡಿ ನಿವಾಸಿ ಶ್ರೀನಿವಾಸ್ ರಾವ್ ಹಣ ಕಳೆದುಕೊಂಡ ಸಂತ್ರಸ್ತರು. ಮುಂಬೈ ಮೂಲದವರ ವಿರುದ್ಧ ನಗರದ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏಪ್ರಿಲ್ 7ರಂದು ಶ್ರೀನಿವಾಸ್ ಅವರಿಗೆ ಫೋನ್ ಕರೆ ಬಂದಿತ್ತು. ಮಾತನಾಡಿದ ಮಹಿಳೆ ತನ್ನ ಹೆಸರು ನೇಹಾ ಶರ್ಮಾ, ಡಾಟಾ ಪ್ರೋಟೆಕ್ಷನ್ ಬೋರ್ಡ್ ಆಫ್ ಇಂಡಿಯಾದವಳು ಎಂದು ಹೇಳಿಕೊಂಡಳು. ನಿಮ್ಮ ಫೋನ್ ನಂಬರ್ ಮೇಲೆ ಮುಂಬೈ ಕ್ರೈಮ್ ಬ್ಯಾಚ್ನಲ್ಲಿ 20 ಪ್ರಕರಣಗಳು ದಾಖಲಾಗಿವೆ ಎಂದಳು.

ವಾಟ್ಸ್ಆ್ಯಪ್ನಲ್ಲಿ ವಿಡಿಯೊ ಕಾಲ್ ಮಾಡಿದ ಖಾಕಿ ಧರಿಸಿದ ವ್ಯಕ್ತಿಯೊಬ್ಬ, ನಿಮ್ಮ ಮೊಬೈಲ್ ನಂಬರ್ ಮೇಲೆ ₹ 2 ಕೋಟಿ ಮನಿ ಲಾಂಡರಿಂಗ್ ಹಾಗೂ ಭಯೋತ್ಪಾದಕರಿಗೆ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ ಎಂದು ಬೆದರಿಕೆ ಹಾಕಿದ. ವಿಚಾರಣೆಯ ನೆಪದಲ್ಲಿ ಮತ್ತೊಬ್ಬ ವ್ಯಕ್ತಿಗೆ ಫೋನ್ ಸಂಪರ್ಕ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಜಿಟಲ್ ಅರೆಸ್ಟ್ ಮಾಡಿ ವಂಚಕರು ಮರುದಿನ (ಏ.8) ವಿಚಾರಣೆಯ ಹಾಲ್ನಂತೆ ಸೃಷ್ಟಿಸಿ ಮತ್ತೆ ವಾಟ್ಸ್ಆ್ಯಪ್ ಕಾಲ್ ಮಾಡಿದರು. ಮುಂಬೈ ಎಜಿಪಿ ಎಂದು ಪರಿಚಯಿಸಿಕೊಂಡ ವಂಚಕ, ಅರೆಸ್ಟ್ ಮಾಡುವಂತೆ ತಾಕೀತು ಮಾಡಿ ಬೆದರಿಸಿದ. 72 ಗಂಟೆಗಳ ಕಾಲಾವಕಾಶ ನೀಡಿ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್, ಮನೆಯಲ್ಲಿ ಚಿನ್ನಾಭರಣದ ಮಾಹಿತಿ ಪಡೆದರು. ತಾವು ಹೇಳಿದ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದರೆ, ಹಣವನ್ನು ಪರಿಶೀಲಿಸಿ ಮನಿ ಲಾಂಡರಿಂಗ್ನಲ್ಲಿ ಭಾಗಿಯಾಗದೆ ಇದ್ದರೆ ಹಿಂದಿರುಗಿಸುವುದಾಗಿ ಹೇಳಿ ನಂಬಿಸಿದರು. ವಂಚಕರ ಮಾತು ನಂಬಿದ ಶ್ರೀನಿವಾಸ್, ವಂಚಕರು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಏ.8ರಂದು ₹ 28.20 ಲಕ್ಷ, ಏ.9ರಂದು ₹ 15 ಲಕ್ಷ ಹಾಗೂ ಏ.10ರಂದು ₹ 10.55 ಲಕ್ಷ ಸೇರಿ ಒಟ್ಟು ₹ 53.80 ಲಕ್ಷ ವರ್ಗಾವಣೆ ಮಾಡಿದರು. ಸ್ಥಳೀಯ ಹಣಕಾಸು ಸಲಹೆಗಾರ ಮತ್ತು ಒಬ್ಬ ವಕೀಲ ಮನೆಗೆ ಬಂದು ವಿಚಾರಣೆ ನಡೆಸುವರು ಎಂದರು. ಯಾರೂ ಬಾರದೆ ಇದ್ದಾಗ ವಂಚನೆಗೆ ಒಳಗಾಗಿದ್ದು ಗೊತ್ತಾಗಿ ‘ಸೆನ್’ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-30-1439136660

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.