ಯಾದಗಿರಿ: ಭತ್ತದ ಗದ್ದೆಯಲ್ಲಿ ಪರ್ಯಾಯವಾಗಿ ತೇವಾಂಶ-ಒಣಗಿಸುವ ಪದ್ಧತಿಯಿಂದ ಬೆಳೆಯಲ್ಲಿ ಕಡಿಮೆ ನೀರು ಬಳಸಿ ಫಸಲು ಬೆಳೆಸಲಾಗುತ್ತದೆ. ಇದರಿಂದ ನೀರು ವ್ಯರ್ಥವಾಗದಂತೆ ಬಳಸುವುದರ ಜತೆಗೆ ಅಂತರ್ಜಲ ಮಟ್ಟ ಕಾಪಿಟ್ಟು, ಬೆಳೆಗೆ ಅಗತ್ಯ ನೀರೊದಗಿಸಲು ಸಾಧ್ಯ’ ಎಂದು ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಜಯಪ್ರಕಾಶ ನಾರಾಯಣ ತಿಳಿಸಿದರು.

ನಗರದ ಎನ್ವಿಎಂ ಸಭಾಂಗಣದಲ್ಲಿ ಕಲಿಕೆ ಟಾಟಾ ಟ್ರಸ್ಟ್, ಕೃಷಿ ಜೀವನೋಪಾಯ ಕಾರ್ಯಕ್ರಮ, ಅರ್ಘ್ಯಮ್ ಸಂಸ್ಥೆಯ ಸಹಯೋಗದಲ್ಲಿ ನಡೆದ ‘ಭತ್ತ ಬೆಳೆಯಲ್ಲಿ ಪರ್ಯಾಯ ತೇವಾಂಶ ಮತ್ತು ಒಣಗಿಸುವ ಪದ್ಧತಿ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಬೇಸಾಯ ತಜ್ಞ ಶಾಮರಾವ ಕುಲಕರ್ಣಿ ಮಾತನಾಡಿ, ‘ಪರ್ಯಾಯ ತೇವಾಂಶ, ಒಣಗಿಸುವ(ಎಡಬ್ಲೂಡಿ) ವಿಧಾನದಲ್ಲಿ ಗದ್ದೆಗಳಲ್ಲಿ ಸತತ ನೀರು ನಿಲ್ಲಿಸುವ ಬದಲಿಗೆ ಮಣ್ಣಿನ ತೇವಾಂಶಕ್ಕೆ ತಕ್ಕಂತೆ ನೀರು ಹರಿಸಲಾಗುತ್ತದೆ. ಇದರಿಂದ ಶೇ 20 ರಿಂದ 30 ರಷ್ಟು ನೀರಿನ ಉಳಿತಾಯವಾಗಲಿದೆ’ ಎಂದರು.

ಅರ್ಘ್ಯಮ್ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕ ಉಜ್ರಾ ಸುಲ್ತಾನ್ ಮತ್ತು ಮನೋಹರ ಹಾಗೂ ಕಲಿಕೆ ಜೀವನೋಪಾಯ ಕಾರ್ಯಕ್ರಮ ಅಧಿಕಾರಿ ಸಾಯಿ ಶ್ರೀಕಾಂತ ಮಾತನಾಡಿದರು.

ಮಂಜುನಾಥ ವಿಶ್ವಕರ್ಮ, ಶಾಂತಗೌಡ ಬಿರಾದಾರ, ಸಂಪತಕುಮಾರ, ಸುಧಾರಾಣಿ, ಅರುಣಕುಮಾರ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-30-754445881

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.