ಯಾದಗಿರಿ: ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಕಟಗಳ ಪೈಕಿ ಬಹುತೇಕವು ದುರಸ್ತಿ ಮಾಡಲಾರದ ಮಟ್ಟಿಗೆ ಕೆಟ್ಟು ಹೋಗಿವೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್ಐಡಿಎಲ್), ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಸಹಕಾರಿ ಸಂಘಗಳು ಸೇರಿ ಮತ್ತಿತರ ಸಂಘ–ಸಂಸ್ಥೆಗಳ ನೆರವಿನಿಂದ ಜಿಲ್ಲೆಯಲ್ಲಿ 471 ಆರ್ಒ ಘಟಕಗಳನ್ನು ಅಳವಡಿಕೆ ಮಾಡಲಾಗಿದೆ.

471 ಆರ್ಒ ಘಟಕಗಳ ಪೈಕಿ 219 ಘಟಕಗಳು ದುರಸ್ತಿ ಹಾಗೂ ಸೂಕ್ತ ನಿರ್ವಹಣೆ ಕಾಣದೆ ಕೆಟ್ಟು ಹೋಗಿದ್ದವು. ಅವುಗಳಲ್ಲಿ 92 ಘಟಕಗಳಿಗೆ ₹ 50 ಸಾವಿರದಿಂದ ₹ 1.50 ಲಕ್ಷ ವ್ಯಯಿಸಿ ದುರಸ್ತಿ ಮಾಡಲಾಗಿದೆ. ಉಳಿದ 127 ಘಟಕಗಳು ದುರಸ್ತಿಗೂ ಮೀರಿ ಹಾಳಾಗಿದ್ದು, ಬಹುತೇಕ ಯಂತ್ರಗಳು ತುಕ್ಕು ಹಿಡಿದಿವೆ ಎನ್ನುತ್ತಾರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್ಗಳು.

‘ಈ ವರ್ಷ ರಾಜ್ಯ ಸರ್ಕಾರವು ಜಿಲ್ಲೆಗೆ ಬೇಸಿಗೆ ಕುಡಿಯುವ ನೀರಿಗಾಗಿ ₹1.20 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಅದರಲ್ಲಿ ತೀರ ಅಗತ್ಯ ಇರುವಲ್ಲಿ, ಕಡಿಮೆ ಹಣ ಬೇಡುವ ಆರ್ಒ ಪ್ಲಾಂಟ್ಗಳನ್ನು ದುರಸ್ತಿ ಮಾಡಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದೇವೆ. ಸರಿಯಾಗಿ ನಿರ್ವಹಣೆ ಮಾಡದೆ ಬಹು ದಿನಗಳಿಂದ ಕೆಟ್ಟು ನಿಂತ ಘಟಕಗಳನ್ನು ದುರಸ್ತಿಗೆ ತೆಗೆದುಕೊಂಡಿಲ್ಲ. ದುರಸ್ತಿ ಮಾಡದ ಮಟ್ಟಿಗೆ ಹಾನಿಯಾಗಿರುವ ಆರ್ಒ ಪ್ಲಾಂಟ್ಗಳ ಮಾಹಿತಿಯನ್ನು ಲೋಕಾಯುಕ್ತರೂ ಕೇಳಿದ್ದಾರೆ. ಗ್ರಾಮವಾರು ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ’ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

ಜಿಲ್ಲೆಯಾದ್ಯಂತ ನಿರ್ಮಾಣವಾದ ಹೊಸ ಆರ್ಒ ಪ್ಲಾಂಟ್ಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಹಳೆಯ ಘಟಕಗಳನ್ನು ನಿರ್ವಹಣೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಕೇವಲ ಹೆಸರಿಗೆ ಮಾತ್ರ ಶುದ್ಧ ನೀರಿನ ಘಟಕಗಳಿದ್ದು, ಶುದ್ಧ ನೀರು ಬರುತ್ತಿಲ್ಲ. ಕೆಲವೆಡೆ ಉದ್ಘಾಟನೆಯಾದ ಕೆಲವು ವಾರಗಳು ಸರಿಯಾಗಿ ಕೆಲಸ ಮಾಡಿ ಆ ಬಳಿಕ ಬಂದ್ ಆಗಿವೆ. ಹಾಳಾದ ಯಂತ್ರಗಳನ್ನು ದುರಸ್ತಿ ಮಾಡದ ಕಾರಣ ಅವು ತುಕ್ಕು ಹಿಡಿಯುತ್ತಿವೆ ಎನ್ನುತ್ತಾರೆ ಸಾರ್ವಜನಿಕರು.

ಆರಂಭದಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸಿದ್ದ ಘಟಕಗಳು ಕ್ರಮೇಣ ನಿರ್ಲಕ್ಷಕ್ಕೆ ಒಳಗಾಗಿ ತುಕ್ಕು ಹಿಡಿಯುವ ಮಟ್ಟಿಗೆ ಹಾಳಾಗಿವೆ. ಕೆಲವುಕ್ಕೆ ನೀರಿನ ಸರಿಯಾದ ಮೂಲ ಇಲ್ಲದೆ ಸ್ಥಗಿತಗೊಂಡಿವೆ. ಮತ್ತೆ ಕೆಲವು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡದೆ ಇರುವುದರಿಂದ ನೀರು ಶುದ್ಧ ಮಾಡುವುದನ್ನು ನಿಲ್ಲಿಸಿವೆ. ಈಗ ದುರಸ್ತಿಗೆ ಅನುದಾನ ಇಲ್ಲ ಎಂಬ ನೆಪ ಹೇಳುತ್ತಿದ್ದಾರೆ ಎಂಬುದು ಸಾರ್ವಜನಿಕರ ದೂರು.

‘ದುರಸ್ತಿಗೆ ಬೇಕು ₹ 4 ಕೋಟಿ’

‘ದಶಕಗಳಿಂದ ಕಾರ್ಯನಿರ್ವಹಿಸುತ್ತಾ ಹಾಳಾಗಿರುವ 127 ಆರ್ಒ ಪ್ಲಾಂಟ್ಗಳ ದುರಸ್ತಿಗೆ ಸುಮಾರು 4 ಕೋಟಿಯಷ್ಟು ಅನುದಾನ ಬೇಕಾಗುತ್ತದೆ. ಬಹುತೇಕ ಘಟಕಗಳು ದುರಸ್ತಿಗೆ ₹ 1.50 ಲಕ್ಷ ಮೇಲ್ಪಟ್ಟು ಹಣ ಬೇಡುತ್ತವೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಪ್ರಭಾರ ಇಇ ಹಣಮಂತ್ರಾಯ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಾಗಲೇ 92 ನೀರಿನ ಘಟಕಗಳನ್ನು ದುರಸ್ತಿ ಮಾಡಲಾಗಿದೆ. 127 ಘಟಕಗಳ ಹಾನಿಯ ಪ್ರಮಾಣ ಹೆಚ್ಚಾಗಿದೆ. ದುರಸ್ತಿಯ ಬದಲು ಹೊಸದಾಗಿ ಅಳವಡಿಸುವ ಮಟ್ಟಿಗೆ ಹಾಳಾಗಿವೆ. ಆದರೂ ದುರಸ್ತಿಗಾಗಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.