ಯಾದಗಿರಿ: ‘ಹತ್ತಿಕುಣಿ ರಸ್ತೆಯಲ್ಲಿ ಅತಿ ಹೆಚ್ಚು ವಾಹನಗಳು ಸಂಚರಿಸುತ್ತವೆ. ಮುಲಾಜಿಲ್ಲದೆ ರಸ್ತೆ ಬದಿಯ ಅಂಗಡಿ-ಮುಂಗಟ್ಟುಗಳನ್ನು ತೆರವುಗೊಳಿಸಿ, ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಯಾದಗಿರಿ-ಸೇಡಂನ ಹತ್ತಿಕುಣಿ ಕ್ರಾಸ್ಗೆ ಮಂಗಳವಾರ ಭೇಟಿ ನೀಡಿದ ಶಾಸಕರು, ‘ಶೀಘ್ರವೇ ₹ 5 ಕೋಟಿ ವೆಚ್ಚದಲ್ಲಿ ಗಂಗಾನಗರದವರೆಗೆ ರಸ್ತೆ ವಿಸ್ತರಣೆ, ರಸ್ತೆ ನಿರ್ಮಾಣ, ಚರಂಡಿ, ರಸ್ತೆ ವಿಭಜಕ, ಬೀದಿ ಬದಿ ವಿದ್ಯುತ್ ದೀಪ, ಬಸ್ ನಿಲ್ದಾಣ ಕಾಮಗಾರಿ ಕೈಗೊಳ್ಳಲಾಗುವುದು’ ಎಂದರು,

‘ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗಿದೆ. ವಾಹನಗಳ ನಿಲುಗಡೆಗೆ ತೊಂದರೆಯಾಗಿದೆ. ಟ್ರಾಫಿಕ್ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.

‘ಹೆಚ್ಚಾಗಿ ಬಡ ಕೂಲಿ ಕಾರ್ಮಿಕರು ವಾಸಿಸುತ್ತಿದ್ದು, ಸ್ವಚ್ಛತೆ ಮರೀಚಿಕೆಯಾಗಿದೆ. ನಗರಸಭೆ ಅಧಿಕಾರಿಗಳು ಆಗಾಗ ಭೇಟಿ ನೀಡಿ, ಸ್ವಚ್ಛತೆಗೆ ಗಮನ ನೀಡಬೇಕು. ಹಳ್ಳದ ಸೇತುವೆ ಪಕ್ಕದಲ್ಲಿ ತ್ಯಾಜ್ಯ ಬಿದ್ದಿದೆ. ಇದರಿಂದ ಕೆಟ್ಟ ದುರ್ವಾಸನೆ ಹಬ್ಬಿ, ಜನರು ಶಾಪ ಹಾಕುತ್ತಿದ್ದಾರೆ. ಸೇತುವೆ ಪಕ್ಕದಲ್ಲಿ ಕಸ ಹಾಕುವುದನ್ನು ತಡೆದು, ಜಾಗೃತಿ ಮೂಡಿಸಬೇಕು. ಒಂದು ವೇಳೆ ಪರಿವರ್ತನೆ ಆಗದಿದ್ದರೆ ದಂಡ ವಿಧಿಸಬೇಕು’ ಎಂದು ತಾಕೀತು ಮಾಡಿದರು.

‘ಹತ್ತಿಕುಣಿ ಕ್ರಾಸ್ನಿಂದ ಗಂಗಾನಗರದವರೆಗೆ ಕೆಲವು ವರ್ಷಗಳಿಂದ ಯಾರು ಕಾಮಗಾರಿ ಕೈಗೊಂಡಿಲ್ಲ. ಪರಿಣಾಮ ತಗ್ಗು-ಗುಂಡಿಗಳು ನಿರ್ಮಾಣವಾಗಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಸಾರ್ವಜನಿಕರಿಂದ ಹಲವು ದೂರುಗಳು ಬಂದಿವೆ. ಅಧಿಕಾರಿಗಳು ಗುಣಮಟ್ಟದಿಂದ ಕೆಲಸ ಮಾಡಿಸಬೇಕು’ ಎಂದು

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪರಶುರಾಮ, ಸಹಾಯಕ ಎಂಜಿನಿಯರ್ ಹಣಮಂತ, ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿಶ್ವನಾಥ, ಸಾಯಿಬಣ್ಣ ಕೆಂಗೂರಿ, ಗುತ್ತಿಗೆದಾರ ಮೋಹನ ರಾಠೋಡ, ಚನ್ನಕೇಶವಗೌಡ ಬಾಣತಿಹಾಳ, ನಗರಸಭೆ ಅಧಿಕಾರಿ ಶರಣಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-30-2045894712

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.