ಸೈದಾಪುರ: ‘ಗ್ರಾಮದಲ್ಲಿ ಹಲವು ದಿನಗಳಿಂದ ಜನಸಾಮಾನ್ಯರಿಗೆ ಬೇಕಾದ ಸೂಕ್ತ ಮೂಲಭೂತ ಸೌಕರ್ಯಳಿಲ್ಲದೆ ಜನರು ನಿತ್ಯ ಸಂಕಷ್ಟ ಎದುರಿಸುವಂತಾಗಿದೆ’ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ.ಮುದ್ನಾಳ್ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಸಮೀಪದ ಕಿಲ್ಲನಕೇರಾ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಮೂಲಭೂತ ಸೌಕರ್ಯಗಳು ಒದಗಿಸುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.

‘ಗ್ರಾಮದ ವಾರ್ಡ್ ನಂ.1ರಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಆರೇಳು ವರ್ಷಗಳಿಂದ ಕೆಟ್ಟು ನಿಂತಿದೆ. ಚರಂಡಿ ಸ್ವಚ್ಛತೆ ಮರಿಚಿಕೆಯಾಗಿದ್ದು, ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ, ಸಿಸಿ ರಸ್ತೆ, ಸೂಕ್ತ ಚರಂಡಿ ಇಲ್ಲದೆ ನೀರು ರಸ್ತೆ ಮೇಲೆ ಹರಿದು ದುರ್ನಾತ ಬೀರುತ್ತಿದೆ’ ಎಂದು ವಿವರಿಸಿದರು.

‘ಅಷ್ಟೇ ಅಲ್ಲದೆ ಈಗಾಗಲೇ ಗ್ರಾಮಕ್ಕೆ ಸರಬರಾಜು ಆಗುವ ನೀರಿನ ಪೈಪ್ ಅಲ್ಲಲ್ಲಿ ಒಡೆದು ಹೋಗಿದ್ದು ಅಲ್ಲಿಂದ ಕಲುಷಿತ ನೀರು ಮಿಶ್ರಣವಾಗಿ ನಿತ್ಯ ಮನೆಗಳಿಗೆ ಪೂರೈಕೆಯಾಗುತ್ತದೆ. ಇದರಿಂದ ಜನರು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ. ರಾಜ್ಯ ಸರ್ಕಾರ ಜನರ ಆರೋಗ್ಯದ ಹಿತದೃಷ್ಟಿಯಿಂದ ಸಾಕಷ್ಟು ಹಣ ವ್ಯಯ ಮಾಡಿ ನೀರಿನ ಘಟಕ ನಿರ್ಮಿಸಿದ್ದಾರೆ. ಆದರೆ, ಅದನ್ನು ನಿರ್ವಹಣೆ ಮಾಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ’ ಎಂದು ದೂರಿದರು.

‘ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸಿಗೆ ಸಮಯದಲ್ಲಿ ಜನರು ಶುದ್ಧ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜನರ ಸಮಸ್ಯೆಗಳನ್ನು ಆಲಿಸಬೇಕಾದ ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಒ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕೂಡಲೇ ಜಿಲ್ಲಾಧಿಕಾರಿ, ತಾಲ್ಲೂಕು ಪಂಚಾಯಿತಿ ಇಒ, ಜಿಲ್ಲಾ ಪಂಚಾಯಿತಿ ಸಿಇಒ, ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಡೇವಿಡ್ ಸ್ಯಾಮಿಲ್, ಜಗದೀಶ ಹಿರೇಮಠ, ರಫೀಕ್ ಪಟೇಲ್, ಆಂಜನೇಯ, ಬಸವರಾಜ ಬಾವೂರ ಸಾಲಿಮನಿ, ಮಚ್ಚೆ ಬನ್ನಪ್ಪ ಬಾವೂರ, ಮರೆಪ್ಪ ಉಪ್ಪಾರ್, ಬಸವರಾಜ ಆನಂಪಲ್ಲಿ, ಯಂಕಪ್ಪ ಬಾವೂರ ಹೊಸಮನಿ, ಜಮ್ಸೆಪ್ಪ ಬಡಿಗೇರಾ, ಇಬ್ರಾಹಿಂ ಫೈಲ್, ಸಾಬರೆಡ್ಡಿ ಹೊಸಳ್ಳಿ, ಲಕ್ಷ್ಮಣ ಆನಂಪಲ್ಲಿ, ಬೀರಪ್ಪ ಬಾಜರ್, ಮರೆಪ್ಪ ಶಿಲ್ಪಿ ಬಾವೂರ, ಬಸವರಾಜ ಬಾವೂರ, ತಾಯಪ್ಪ ಬಾವೂರ, ಬಸವರಾಜ ಗ್ಯಾರೇಜ್, ಖಾಜಪ್ಪ ಪಿಂಜಾರ್, ಕೊಂಡರೆಡ್ಡಿ, ಹಣಮಂತ ಬಾವೂರ, ಸುಭಾಷ್ ಗ್ಯಾರೇಜ್, ಮಹಾದೇವಪ್ಪ ಕಾಕಿ, ಭೀಮಪ್ಪ ಟೆಂಟ್, ಮಂಜಪ್ಪ ಎದ್ದೇರಿ, ಬನ್ನಪ್ಪ ಕುಂಬಾರ, ಮೂಕ ಭೀಮರಾಯ, ಮಲ್ಲಪ್ಪ ಹೊಟ್ಟೆ, ಪಿಲಿಂಗ ಅಂಬಿಗೇರ್, ಶಿವಪ್ಪ ನಾಟೇಕಾರ, ಭೀಮಪ್ಪ ಹೊಸಮನಿ, ಸಾಬಮ್ಮ ಅರಿಕೇರಿ, ಕಾಶಮ್ಮ ಗುಡೂರು, ಕಮಲಮ್ಮ ಪೂಜಾರಿ, ತಾಯಮ್ಮ ಕುರುಬರ, ಅಂಜಮ್ಮ ಬಾವೂರ, ವಸಂತಮ್ಮ ಬಾವೂರ, ನಿಂಗಮ್ಮ ಬಾವೂರ, ಮಕ್ತಿಂಬಿ ಕತ್ತಣ್ಣೋರ್, ಮುನೀರಮ್ಮ ಫೈಲ್ ಸೇರಿದಂತೆ ಅನೇಕ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-30-1477737745

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.