ಬೀದರ್: ’ಯಾದಗಿರಿ ಜಿಲ್ಲೆ ಶಹಾಪುರ ಪಟ್ಟಣದಲ್ಲಿ ಮೇ 15ರಂದು ಸಂಜೆ 5ಕ್ಕೆ ಬಸವಾದಿ ಶರಣರ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಬಸವಾನುಯಾಯಿಗಳು, ವಿಚಾರವಂತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಕಲಬುರಗಿಯ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಆರ್.ಜಿ. ಶೆಟಕಾರ್ ತಿಳಿಸಿದರು.

ಅಂದು ಶಹಾಪುರದ ಸಿಪಿಎಸ್ ಮೈದಾನದಿಂದ ವಚನ ಗಾಯನದೊಂದಿಗೆ ಮೆರವಣಿಗೆ ಹೊರಟು, ಸಂಜೆ 5ಕ್ಕೆ ಹಳೆ ಬಸ್ ನಿಲ್ದಾಣದ ಎದುರಿರುವ ಶಾಲಾ ಮೈದಾನದಲ್ಲಿ ಸಮಾವೇಶ ಜರುಗಲಿದೆ. ಜಾಗತಿಕ ಲಿಂಗಾಯತ ಮಹಾಸಭಾ, ಸೌಹಾರ್ದ ಕರ್ನಾಟಕ, ಬಸವಪರ ಸಂಘಟನೆಗಳ ಒಕ್ಕೂಟ, ದಲಿತಪರ ಸಂಘಟನೆಗಳು, ಕಾಯಕ ಜೀವಿಗಳ ಒಕ್ಕೂಟ, ರೈತ, ಮಹಿಳಾ, ವಿದ್ಯಾರ್ಥಿ, ಕಾರ್ಮಿಕ ಸಂಘಟನೆಗಳು ಸೇರಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ ಸೇರಿದಂತೆ ವಿವಿಧೆಡೆಗೆ ಬಸವಾಭಿಮಾನಿಗಳು ಸಮಾರಂಭದಲ್ಲಿ ಪಾಲ್ಗೊಳ್ಳುವರು. ನಾಡಿನ ಬಸವಪರ ಮಠಾಧೀಶರು, ವಿಚಾರವಾದಿಗಳು ಮಾತನಾಡಲಿದ್ದಾರೆ. ಶರಣ ತತ್ವಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ವೈದಿಕರ ಮುಖವಾಡ ಕಳಚುವುದೇ ಸಮಾರಂಭದ ಉದ್ದೇಶವಾಗಿದೆ ಎಂದರು.

ಶಹಾಪುರದಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶ ಎಂಬ ಕೋಮುವಾದಿ ಕಾರ್ಯಕ್ರಮ ನಡೆಸುತ್ತಿರುವುದು ಖಂಡನೀಯ. ಏಕೆಂದರೆ ಅದು ಬಸವಾದಿ ಶರಣರ ದ್ರೋಹಿ ಕಾರ್ಯಕ್ರಮ. ಶರಣರನ್ನು ಕೋಮುವಾದಿ ವೃತ್ತದೊಳಗೆ ತೆಗೆದುಕೊಳ್ಳಲು ಹವಣಿಸುತ್ತಿರುವ ದುಷ್ಟ ಯೋಜನೆಯಾಗಿದೆ. ವೈದಿಕ ಪ್ರಣೀತ ಮೂಲಗಳಾಗಿದ್ದ ವೇದ ಆಗಮ ಪುರಾಣ ಇತ್ಯಾದಿಗಳನ್ನು ಖಂಡಿಸಿ ಬಹುದೊಡ್ಡ ತಾತ್ವಿಕ ಆಂದೋಲನವನ್ನು ಕೈಗೊಂಡಿದ್ದ ಶರಣರಿಗೆ ಈಗ ಮತ್ತೆ ವೈದಿಕರ ಉರುಳು ಅವರ ಕೊರಳಿಗೆ ಹಾಕಲು ಹೆಣಗುತ್ತಿರುವದು ಅತ್ಯಂತ ಹೇಯ ಕಾರ್ಯವಾಗಿದೆ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.